ಕಡಬ: ಎರಡು ವಾರಗಳ ಹಿಂದೆ ನಾಪತ್ತೆಯಾದ ಕಡಬ ತಾಲೂಕಿನ ಗ್ರಾಮವೊಂದರ ಯುವತಿಯ ನಾಪತ್ತೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ನಾಪತ್ತೆಯಾದ ಯುವತಿ ಪುತ್ತೂರು ಠಾಣೆಗೆ ಹಾಜರಾಗಿ ನನ್ನನ್ನು ಸವಣೂರಿನ ಬಾಲಕೃಷ್ಣ ಎಂಬಾತ ಅಪಹರಿಸಿ ಮುಂಬೈಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರು ನೀಡಿದ್ದಾಳೆ. ಪುತ್ತೂರಿನ ಖಾಸಗಿ ಸಂಸ್ಥೆಯೊಂದರ ಕಚೇರಿ ಕೆಲಸಕ್ಕೆ ಹೋಗುತ್ತಿದ್ದ ಯುವತಿ ಅ. 8ರಂದು ನಾಪತ್ತೆಯಾಗಿದ್ದಳು. ಈ ಕುರಿತು ಯುವತಿಯ ತಂದೆ ಪೊಲೀಸರಿಗೆ ಪುತ್ರಿ ನಾಪತ್ತೆ ಕುರಿತು ದೂರು ನೀಡಿದ್ದರು.
ಬಳಿಕ ಯುವತಿ ತನ್ನ ಪ್ರಿಯಕರ ಎನ್ನಲಾದ ಸವಣೂರು ಗ್ರಾಮದ ಇಡ್ಯಾಡಿ ನಿವಾಸಿ ಬಾಲಕೃಷ್ಣ ಗೌಡ ಎಂಬುವನ ಜತೆ ಮುಂಬೈಯಲ್ಲಿ ವಿವಾಹವಾಗಿರುವ ಕುರಿತು ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿಗೆ ತೆರಳುವ ಸಿದ್ಧತೆಯಲ್ಲಿದ್ದರು. ಆದರೆ ಈ ನಡುವೆ ಯುವತಿ ಪೊಲೀಸ್ ಠಾಣೆಗೆ ಹಾಜರಾಗಿ ಇಡ್ಯಾಡಿ ನಿವಾಸಿ ಬಾಲಕೃಷ್ಣ ಎಂಬಾತ ತನ್ನನ್ನು ಅಪಹರಿಸಿ ಮುಂಬೈಗೆ ಕರೆದುಕೊಂಡು ಹೋಗಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರು ನೀಡಿದ್ದಾಳೆ. ಈಗ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.