ಬಂಟ್ವಾಳ: ಯುವತಿಯೊಬ್ಬಳ ನಗ್ನ ಫೋಟೋಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ತಾಲೂಕಿನ ಪುಣಚ ನಿವಾಸಿ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುಣಚದ ಬಶೀರ್ ಮೇಲೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ಕಡಂಬು ಬೆದ್ರಕಾಡು ನಿವಾಸಿ 19 ವರ್ಷದ ಅವಿವಾಹಿತ ಯುವತಿಯನ್ನು ಕಳೆದ ಸೆಪ್ಟೆಂಬರ್ ನಿಂದ ಆಕೆಯ ಅಕ್ಕನ ಪತಿಯೇ ಬಲಾತ್ಕಾರವಾಗಿ ನಿರಂತರ ದೈಹಿಕ ಸಂಪರ್ಕ ಮಾಡಿದ್ದ. ಜೊತೆಗೆ ಆಕೆಯ ನಗ್ನ ಚಿತ್ರಗಳನ್ನು ಮೊಬೈಲ್ ನಲ್ಲಿ ತೆಗೆದುಕೊಂಡಿದ್ದ. ತನ್ನ ಬೇಡಿಕೆಗಳನ್ನು ಪೂರೈಸದೇ ಹೋದಲ್ಲಿ ಮೊಬೈಲ್ ನಲ್ಲಿರುವ ಚಿತ್ರಗಳನ್ನು ವೈರಲ್ ಮಾಡುವುದಾಗಿ ಹೆದರಿಸಿದ್ದ ಎಂದು ಠಾಣೆಯಲ್ಲಿ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಷ್ಟೇ ಅಲ್ಲ, ತಾನು ಹೇಳಿದಂತೆ ಕೇಳದಿದ್ದರೆ ಕೊಲ್ಲುವುದಾಗಿ ಜೀವ ಬೆದರಿಕೆಯನ್ನೂ ಹಾಕಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.