ಮಂಗಳೂರು : ಗಾಂಜಾ ಸೇವನೆ ಮಾಡುತ್ತಿದ್ದ ಓರ್ವ ಯುವತಿ ಸಹಿತ ಆರು ಮಂದಿಯನ್ನು ಮಂಗಳೂರಿನ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.
ಗಾಂಜಾ ಸೇವನೆ ಮಾಡುತ್ತಿರುವ ಮಾಹಿತಿಯ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ವಿವಿಧೆಡೆ ದಾಳಿ ನಡೆಸಿ, ಅಮೃತಾ ವಾಸ್ ಎಂಬ ಯುವತಿ ಸೇರಿದಂತೆ ಅಲನ್, ವಿವೇಕ್, ಸಚಿನ್, ರೋಹನ್ ಮತ್ತು ನಭಾ ಎಂಬುವರನ್ನು ಬಂಧಿಸಿದ್ದಾರೆ. ಬಂಧಿತರಿಂದ 150 ಗ್ರಾಂ ಎಂಡಿಎಂಎ ಡ್ರಗ್ಸ್, 100 ಗ್ರಾಂ ಗಾಂಜಾ ಮತ್ತು ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ಇಲಾಖೆಯ ಮಂಗಳೂರು ಉಪವಿಭಾಗ 1ರ ಅಬಕಾರಿ ಉಪ ಅಧೀಕ್ಷಕ ಶಿವಪ್ರಸಾದ್ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರಾದ ಸೀಮಾ ಮರಿಯಾ ಸುವಾರೀಸ್, ಉಪ ನಿರೀಕ್ಷಕರಾದ ಪ್ರತಿಭಾ ಜಿ, ಕಮಲಾ ಹೆಚ್ ಎನ್, ಸಿಬ್ಬಂದಿಗಳಾದ ಸಂತೋಷ್ ಕುಮಾರ್, ಸುನಿಲ್ ಬೈಂದೂರ್, ಉಮೇಶ್ ಹೆಚ್, ಕುಮಾರ್, ವಿನಿತಾ, ಸಂದೀಪ್ ಕುಮಾರ್, ಮನಮೋಹನ್ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.