ಮಂಗಳೂರು: ತಮಿಳುನಾಡಿನ ಕೊಯಮುತ್ತೂರಿನಲ್ಲಿ ನಡೆದ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟ್ ಚಾಂಪಿಯನ್ಶಿಪ್ನಲ್ಲಿ ಮಂಗಳೂರಿನ ಪ್ರದೀಪ್ ಕುಮಾರ್ ಆಚಾರ್ಯ ಒಟ್ಟು 807 ಕೆಜಿ ಭಾರ ಎತ್ತುವ ಮೂಲಕ ತಲಾ ಒಂದೊಂದು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.
ಫೆ. 17ರಿಂದ 21ರವರೆಗೆ ನಡೆದಿರುವ ಈ ಪವರ್ ಲಿಫ್ಟ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುವ ಪ್ರದೀಪ್ ಕುಮಾರ್ ಆಚಾರ್ಯ, 83 ಕೆಜಿ ದೇಹತೂಕ ವಿಭಾಗದಲ್ಲಿ ಒಟ್ಟು 807 ಕೆಜಿ ಭಾರ ಎತ್ತುವ ಮೂಲಕ ಮೂರು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪ್ರದೀಪ್ ಕುಮಾರ್ ಆಚಾರ್ಯ ಸ್ಕಾಟ್ ವಿಭಾಗದಲ್ಲಿ 312.50 ಕೆಜಿ, ಬೆಂಚ್ ಪ್ರೆಸ್ನಲ್ಲಿ 220 ಕೆಜಿ ಹಾಗೂ ಡೆಡ್ ಲಿಫ್ಟ್ನಲ್ಲಿ 275 ಕೆಜಿ ಸೇರಿ ಒಟ್ಟು 807.50 ಕೆಜಿ ಭಾರ ಎತ್ತುವ ಮೂಲಕ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಓದಿ:ಪಾದಯಾತ್ರೆ ಮುಗಿದರೂ ಈಡೇರದ 2ಎ ಬೇಡಿಕೆ ; ಮುಂದಿನ ನಡೆ ಏನು?
ಪ್ರದೀಪ್ ಕುಮಾರ್ ಆಚಾರ್ಯ ಮಂಗಳೂರಿನ ಪ್ರತಿಷ್ಠಿತ ಬಾಲಾಂಜನೇಯ ಜಿಮ್ನಾಸಿಯಂನಲ್ಲಿ ಸತೀಶ್ ಕುಮಾರ್ ಕುದ್ರೋಳಿಯವರಿಂದ ತರಬೇತಿ ಪಡೆಯುತ್ತಿದ್ದಾರೆ.