ಮಂಗಳೂರು : ರಸ್ತೆಯಲ್ಲಿ ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಮಾಡಲೆತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಟ್ವಾಳ ತಾಲೂಕು ಅಳಿಕೆ ಸುಬ್ರಹ್ಮಣ್ಯ ದೇವಸ್ಥಾನ ಬಳಿಯ ಮೊಹಮ್ಮದ್ ಎಂಬವರ ಪುತ್ರ ಮೊಹಮ್ಮದ್ ಹಾರಿಸ್ ಯಾನೆ ಹೌರಾ ಹಾರಿಸ್ ಹಾಗು ಆಶಿರ್ ಬಂಧಿತ ಆರೋಪಿಗಳು.
ಮೊಹಮ್ಮದ್ ಹಾರಿಸ್, ನೆಹರು ನಗರದ ರೈಲ್ವೇ ಓವರ್ ಬ್ರಿಡ್ಜ್ ಬಳಿಯ ಒಂದನೇ ಅಡ್ಡ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರೆತಿದೆ. ಪ್ಲಾಸ್ಟಿಕ್ ಕವರ್‌ನಲ್ಲಿದ್ದ ಸುಮಾರು ರೂ.3000 ಮೌಲ್ಯದ 120 ಗ್ರಾಂ ಗಾಂಜಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಂಜಿಮೊಗರು ಉರುಂದಾಡಿಯ ರಾಘವೇಂದ್ರ ಮಠದ ಕಡೆಗೆ ಹಾದುಹೋಗುವ ರಸ್ತೆಯ ಬದಿಯ ಮೈದಾನದಲ್ಲಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಆಶಿರ್ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 6500 ಸಾವಿರ ಮೌಲ್ಯದ 350 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.