ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆ ಎಂಬಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಕೇರಳ ರಾಜ್ಯದ 7 ಮಂದಿ ಕಾಲೇಜು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕಲ್ಲಿಕೋಟೆಯ ಮೊಹಮ್ಮದ್ ಸಿನಾನ್.ಪಿ.(21), ಕಲ್ಲಿಕೋಟೆಯ ಕುಂಡಲಿಯೂರ್ನ ಹಫೀಜ್ ಅಮೀನ್(21), ನೆಲ್ಲೂಣಿ ಮಟ್ಟನ್ನೂರುನ ಜುಹೈರ್ ಕೆ.ಪಿ.(21), ರಮಾನಾಥುರಕ್ಕರ ಪೇರೂಕ್ನ ಆದರ್ಶ್(20), ಕೊಝಿಕ್ಕೋಡ್ನ ಚುಂಗಂ ಮೊಹಮ್ಮದ್ ನಿಹಾಲ್ ಆರ್.ಕೆ.(20), ಕೊಝಿಕ್ಕೋಡ್ನ ಮಟ್ಟಂಚೇರಿನ ಬಿಶ್ರುಲ್ ಹಫಿ(20), ಕೊಝಿಕ್ಕೋಡ್ನ ನರಿಕುನ್ನೀಯ ಜಾಕೀರ್ ಆಲಿ.ಪಿ. (22) ಬಂಧಿತ ಆರೋಪಿಗಳು.
ಆರೋಪಿಗಳೆಲ್ಲರೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದು, ಇವರುಗಳು ನಗರದ ಕಾಲೇಜು ಪರಿಸರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ ಪೊಲೀಸರು, ಬಂಧಿತರಿಂದ 1 ಕೆ.ಜಿ 103 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಇದರ ಒಟ್ಟು ಮೌಲ್ಯ 41,000 ಎಂದು ಅಂದಾಜಿಸಲಾಗಿದೆ. ಅಲ್ಲದೆ ಒಂದು ಲಕ್ಷ ರೂ. ಅಂದಾಜು ಮೌಲ್ಯದ 1 ಬುಲೆಟ್ ಬೈಕ್, 23 ಸಾವಿರ ರೂ. ಮೌಲ್ಯದ 6 ಮೊಬೈಲ್ ಪೋನ್ಗಳು ಹಾಗೂ 460 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರ ನಿರ್ದೇಶನದಂತೆ ಉಪ ಪೊಲೀಸ್ ಆಯುಕ್ತರಾದ ಅರುಣಾಂಶು ಗಿರಿ(ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ಲಕ್ಷ್ಮೀಗಣೇಶ (ಅಪರಾಧ ಮತ್ತು ಸಂಚಾರ) ರವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಉಪ-ವಿಭಾಗದ ಎಸಿಪಿಟಿ. ಕೋದಂಡರಾಮರವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್.ಪೊಲೀಸ್ ಉಪ-ನಿರೀಕ್ಷಕ ಗುರಪ್ಪ ಕಾಂತಿ, ವಿನಾಯಕ ತೋರಗಲ್, ಮತ್ತು ಪೊಲೀಸ್ ಸಿಬ್ಬಂದಿಯಾದ ಮನೋಹರ, ರಂಜಿತ್, ಪ್ರಶಾಂತ್, ಲಿಂಗರಾಜ್, ಅಕ್ಬರ್ ಹಾಗೂ ರೌಡಿ ನಿಗ್ರಹ ದಳದ ಸಿಬ್ಬಂದಿ ಆರೋಪಿಗಳ ಪತ್ತೆ ಕಾರ್ಯಾಚರಣೆ ಮಾಡಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.