ಮಂಗಳೂರು: ಕಾಸರಗೋಡು ಗಡಿಭಾಗದಲ್ಲಿ ಬಹಳಷ್ಟು ಮಂದಿ ಮಂಗಳೂರನ್ನು ಅವಲಂಬಿಸುತ್ತಿದ್ದು, ಬಂದು ಹೋಗುತ್ತಿರುವವರಿಗೆ ಹೆಚ್ಚಿನ ಅನಾನುಕೂಲತೆ ಆಗಬಾರದು. ಸ್ಕ್ರೀನಿಂಗ್ ಮಾತ್ರ ಆಗಲಿ, ತಪಾಸಣೆ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ತಪಾಸಣೆ ಮಾಡುವ ಮೂಲಕ ನಿತ್ಯ ಗಡಿ ಭಾಗಗಳಲ್ಲಿ ಸಂಚಾರ ಮಾಡುವ ಶಾಲಾ - ಕಾಲೇಜುಗಳ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಅನಾನುಕೂಲ ಆಗಬಾರದು. ಈ ನಿಟ್ಟಿನಲ್ಲಿ ಎಲ್ಲರೂ ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಮಾಡಿಕೊಂಡಲ್ಲಿ ಟ್ರ್ಯಾಕಿಂಗ್ ಹಾಗೂ ಮಾನಿಟರ್ ಮಾಡಲು ಪರಿಣಾಮಕಾರಿ ಆಗಲಿದೆ ಎಂದರು.
ಓದಿ:ಪಿಎಫ್ಐ, ಎಸ್ಡಿಪಿಐ ಬೆಳವಣಿಗೆಗೆ ಕಾರಣವಾಗಿರುವ ಕಾಂಗ್ರೆಸ್ ಪಕ್ಷವೇ ಅವುಗಳ ಬಿ ಟೀಂ: ಅಶ್ವತ್ಥ ನಾರಾಯಣ
ಭಾರತ ಸರ್ಕಾರದ ನಿರ್ದೇಶನದಂತೆ ಬಂದು ಹೋಗುವವರಿಗೆ ಏನೂ ಅನಾನುಕೂಲ ಆಗದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರಿಗೆ ತಿಳಿಸುತ್ತೇನೆ. ವಿವಿಧ ಕಾರಣಗಳಿಗೆ ಬಂದು ಮಂಗಳೂರಿನಲ್ಲಿ ಉಳಿದುಕೊಳ್ಳುವವರಿಗೆ ನೆಗೆಟಿವ್ ವರದಿ ಕಡ್ಡಾಯ ಇರಬೇಕು. ಆದರೆ ಪ್ರತಿನಿತ್ಯ ಬಂದು ಹೋಗುವವರು ಎಷ್ಟು ಸಲ ಎಂದು ತಪಾಸಣೆ ಮಾಡಿ ನೆಗೆಟಿವ್ ವರದಿ ತರಲಾಗುತ್ತದೆ. ಹೀಗಾಗಿ ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಮಾಡಿಕೊಂಡಲ್ಲಿ ಟ್ರ್ಯಾಕ್ ಮಾಡೋದು ಸುಲಭ ಆಗಲಿದೆ ಎಂದು ಡಾ.ಸಿ.ಎನ್. ಅಶ್ವತ್ಥನಾರಾಯಣ್ ಹೇಳಿದರು.