ETV Bharat / state

ಅಡಕೆಗೆ ತಗಲುವ ಹಳದಿ ರೋಗ ನಿವಾರಣೆಗೆ ಹೊಸ ಪ್ರಯೋಗಕ್ಕೆ ಕೈ ಹಾಕಿದ ವಿಜ್ಞಾನಿಗಳು - ಪುತ್ತೂರಲ್ಲಿ ಅಡಿಕೆ ಹಳದಿ ಎಲೆ ರೋಗ ಹೆಚ್ಚಳ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಕೆ ಬೆಳೆಗೆ ಹಳದಿ ಎಲೆ ರೋಗ ಹೆಚ್ಚಾಗಿ ಹರಡುತ್ತದೆ. ಇದರಿಂದ ಉತ್ತಮ ಇಳುವರಿ ಪಡೆಯದೇ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಇದನ್ನು ಮನಗಂಡು ರೋಗವನ್ನು ತಡೆಗಟ್ಟಲು ಜಗತ್ತಿನಾದ್ಯಂತ ಮಾಡುವ ಪ್ರಯತ್ನವನ್ನು ಇದೀಗ ಅಡಕೆ ಬೆಳೆಗೂ ಅನ್ವಯಿಸಲು ವಿಜ್ಞಾನಿಗಳು ತೀರ್ಮಾನಿಸಿದ್ದಾರೆ.

nut yellow  disease
ಅಡಿಕೆ ಎಲೆ ಹಳದಿ ರೋಗ
author img

By

Published : Oct 14, 2021, 9:43 PM IST

ಪುತ್ತೂರು: ಕರಾವಳಿ ಭಾಗದ ಕೃಷಿಕರ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆ ಬೆಳೆಗೆ ಹಳದಿ ಎಲೆ ರೋಗ ಹರಡುತ್ತಿದೆ.ಈ ರೋಗದ ತಡೆಗೆ ಎಲ್ಲ ರೀತಿಯ ಪ್ರಯತ್ನಗಳನ್ನು ಪಟ್ಟರೂ ಯಶಸ್ಸು ಕಂಡಿಲ್ಲ. ಇತರ ಬೆಳೆಗೆ ತಗಲುವ ರೋಗಗಳನ್ನು ತಡೆಗಟ್ಟಲು ಜಗತ್ತಿನಾದ್ಯಂತ ಮಾಡುವ ಪ್ರಯತ್ನವನ್ನು ಇದೀಗ ಅಡಕೆ ಬೆಳೆಗೂ ಅನ್ವಯಿಸಲು ವಿಜ್ಞಾನಿಗಳು ತೀರ್ಮಾನಿಸಿದ್ದಾರೆ.

ಅಡಕೆಗೆ ತಗಲುವ ಹಳದಿ ರೋಗ ನಿವಾರಣೆಗೆ ಹೊಸಪ್ರಯೋಗಕ್ಕೆ ಕೈ ಹಾಕಿದ ವಿಜ್ಞಾನಿಗಳು

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ, ಅರಂತೋಡು , ಮರ್ಕಂಜ ಪ್ರದೇಶದಲ್ಲಿ ಈಗ ಹಳದಿ ಎಲೆ ರೋಗ ಹೆಚ್ಚು ಹರಡಿದೆ. ಅಡಕೆ ತೋಟದಲ್ಲಿ ಹಳದಿ ಎಲೆ ರೋಗಕ್ಕೆ ಪೈಟೋಪ್ಲಾಸ್ಮಾ ಎಂಬ ವೈರಸ್‌ ಹಾಗೂ ಹರಡುವಿಕೆಗೆ ಜಿಗಿ ಹುಳ ಕಾರಣ ಎಂದು ಗುರುತಿಸಲಾಗಿದೆ. ಆದರೆ, ಈ ರೋಗಕ್ಕೆ ಇದುವರೆಗೂ ಸೂಕ್ತವಾದ ಔಷಧ ಕಂಡುಹಿಡಿಯಲು ಸಾಧ್ಯವಾಗಿಲ್ಲ.

ಹೀಗಾಗಿ ಅಡಿಕೆ ಬೆಳೆಗಾರರ ಶೇ.90 ರಷ್ಟು ಅಡಕೆ ತೋಟಗಳು ನಾಶವಾಗಿದೆ. ಪರ್ಯಾಯ ದಾರಿಗಳು ಇಲ್ಲವಾಗಿದೆ. ಇಡೀ ರಾಜ್ಯದಲ್ಲಿ ಸುಮಾರು 14 ಸಾವಿರ ಪ್ರದೇಶದಲ್ಲಿ ಹಳದಿ ಎಲೆ ರೋಗ ಹರಡಿದೆ ಎಂದು ದಾಖಲೆಗಳು ಹೇಳುತ್ತವೆ. ದ.ಕ. ಜಿಲ್ಲೆಯಲ್ಲಿಯೇ 1,700 ಹೆಕ್ಟೇರ್‌ ಪ್ರದೇಶದಲ್ಲಿ ಹಳದಿ ಎಲೆ ರೋಗ ಹರಡಿದೆ ಎನ್ನುವುದು ಈಗಿನ ಲೆಕ್ಕಾಚಾರವಾಗಿದೆ.

750 ರಿಂದ 350 ಕ್ವಿಂಟಾಲ್​​​​ಗೆ ಇಳಿಕೆ

ಸಂಪಾಜೆಯಲ್ಲಿ 2013 ರಲ್ಲಿ ಸುಮಾರು 750 ಕ್ವಿಂಟಾಲ್ ಅಡಕೆ ಕ್ಯಾಂಪ್ಕೋ ಶಾಖೆಗೆ ಬರುತ್ತಿದ್ದ ದಾಖಲೆಗಳಿವೆ. ಆದರೆ ಇದೀಗ ಇದರ ಪ್ರಮಾಣ 350 ಕ್ವಿಂಟಾಲ್​​​ಗೆ ತಲುಪಿದೆ. ಈ ರೋಗ ಹೆಚ್ಚಾಗಿರುವ ಸಂಪಾಜೆ, ಅರಂತೋಡು ಪ್ರದೇಶದಲ್ಲಿ ಅಡಕೆಯನ್ನು ಬೆಳೆಯುತ್ತಾರೆ. ಇದರ ಜೊತೆಗೆ ಕೆಲವರು ರಬ್ಬರ್‌, ತಾಳೆ ಗಿಡಗಳನ್ನು ಹಾಕಿದ್ದರೂ ಆದಾಯದ ದೃಷ್ಟಿಯಿಂದ ಅಡಕೆ ಮಾತ್ರವೆ ಇಲ್ಲಿ ಹೆಚ್ಚು ಸೂಕ್ತವಾಗಿದೆ. ಈ ರೋಗದ ಸಮಸ್ಯೆಯಿಂದ ಹೊರ ಬರುವ ಹೊಸ ಆಶಾವಾದವೊಂದು ಇದೀಗ ದಕ್ಷಿಣಕನ್ನಡ ಜಿಲ್ಲೆಯ ಹಳದಿ ಎಲೆ ರೋಗದಿಂದ ಬಾಧಿತರಾದವರಲ್ಲಿ ಮೂಡಿದೆ.

ರೋಗ ಇರುವ ತಳಿಗಳಿಂದಲೇ ರೋಗ ನಿರೋಧಕ ತಳಿ ಅಭಿವೃದ್ಧಿ

ಜಗತ್ತಿನ ವಿವಿಧೆಡೆ ರೋಗ ಇರುವ ತಳಿಗಳಿಂದಲೆ ರೋಗನಿರೋಧಕ ತಳಿಗಳನ್ನು ಅಭಿವೃದ್ಧಿ ಮಾಡಲಾಗಿದೆ.ಈಚೆಗೆ ದೇಶದಲ್ಲೂ ಅದೇ ಪ್ರಯತ್ನವಾಗುತ್ತಿದೆ. ಬೆಂಡೆಕಾಯಿ ಸೇರಿದಂತೆ ವಿವಿಧ ಬೆಳೆಗಳ ಮೇಲೆ ಪ್ರಯತ್ನಗಳು ನಡೆದಿವೆ. ಇತ್ತೀಚೆಗೆ ಅದೇ ಮಾದರಿಯ 35 ತಳಿಗಳನ್ನು ಬಿಡುಗಡೆ ಕೂಡಾ ಮಾಡಲಾಗಿದೆ. ಹೀಗಾಗಿ ಅಡಕೆ ಹಳದಿ ಎಲೆ ರೋಗಕ್ಕೂ ಅದೇ ಮಾದರಿಯಲ್ಲಿ ರೋಗ ನಿರೋಧಕ ತಳಿ ಅಭಿವೃದ್ಧಿ ಏಕೆ ಸಾಧ್ಯವಿಲ್ಲ ಎನ್ನುವುದು ಅಡಕೆ ಬೆಳೆಗಾರರ ಪ್ರಶ್ನೆಯಾಗಿತ್ತು.

ಈ ಬಗ್ಗೆ ವಿಜ್ಞಾನಿಗಳಲ್ಲಿ ಚರ್ಚೆ ಮಾಡಿದಾಗಲೂ ಅಂತಹದ್ದೆ ರೋಗ ನಿರೋಧಕ ತಳಿ ಅಭಿವೃದ್ಧಿ ಮಾಡಲು ಸಾಧ್ಯವಿದೆ ಎನ್ನುವ ಅಭಿಪ್ರಾಯ ಲಭ್ಯವಾದ ಹಿನ್ನೆಲೆಯಲ್ಲಿ ಸಿಪಿಸಿಆರ್‌ಐ ವಿಜ್ಞಾನಿಗಳೂ ಅಡಕೆ ಬೆಳೆಗಾರರ ಹಿತದೃಷ್ಟಿಯಿಂದ ಇಂತಹ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮುಖ್ಯವಾಗಿ ದಕ್ಷಿಣಕನ್ನಡ ಜಿಲ್ಲೆಯ ಸಂಪಾಜೆ ಪ್ರದೇಶವು ಅಡಕೆ ಹಳದಿ ಎಲೆ ರೋಗ ಪೀಡಿತ ಹಾಟ್‌ ಸ್ಫಾಟ್‌ ಎಂದು ಗುರುತಿಸಲಾಗಿದೆ.

25 ವರ್ಷಗಳಿಂದ ಹಳದಿ ರೋಗದ ಮರಗಳನ್ನು ಹುಡುಕಿ ಸ್ಯಾಂಪಲ್ ಸಂಗ್ರಹ

ಕನಿಷ್ಠ 25 ವರ್ಷಗಳಿಗೂ ಅಧಿಕ ವರ್ಷಗಳಿಂದ ಹಳದಿ ಎಲೆ ರೋಗ ಕಂಡು ಬಂದಂತಹ ತೋಟವನ್ನು ಪತ್ತೆ ಮಾಡಿ ಅಷ್ಟು ವರ್ಷಗಳಿಂದಲೂ ಅಡಕೆ ಹಳದಿ ರೋಗ ಬಾಧಿತವಾಗಿ ಇನ್ನೂ ಹಸಿರಾಗಿರುವ ಅಡಿಕೆ ಮರಗಳನ್ನು ಹುಡುಕಿ ಆ ಮರಗಳಲ್ಲಿನ ರೋಗದ ಸ್ಯಾಂಪಲ್​ ಪಡೆದು ವಿಜ್ಞಾನಿಗಳು ಪರಿಶೀಲನೆ ಮಾಡಲಿದ್ದಾರೆ.

ಮುಂದೆ ಹಿಂಗಾರು ಬರುವ ಸಮಯದಲ್ಲಿ ಅಂತಹದ್ದೆ ಮರಗಳಿಂದ ಪಾಲಿನೇಶನ್‌ ಮಾಡಿಸಿ ಅಡಕೆಯನ್ನು ಪಡೆದು ಅದರಲ್ಲಿ ಗುಣಮಟ್ಟದ ಅಡಕೆಯನ್ನು ಗಿಡ ಮಾಡಿ ನಾಟಿ ಮಾಡುವ ಮೂಲಕ ರೋಗ ನಿರೋಧಕ ತಳಿ ಅಭಿವೃದ್ಧಿ ಸಾಧ್ಯವಿದೆ ಎನ್ನುವುದು ಇಲ್ಲಿನ ಆಶಾವಾದ. ಈ ಹಿಂದೆ ಇಂತಹ ಪ್ರಯತ್ನ ನಡೆದಿದ್ದರೂ ಆ ಯೋಜನೆ ಮುಂದುವರಿಯಲಿಲ್ಲ.

ಅಡಕೆ ಮರ ಏರುವುದು ಹಾಗೂ ಇನ್ನಿತರ ತಾಂತ್ರಿಕ ಕಾರಣಗಳು ಆ ಯೋಜನೆ ಹಿನ್ನಡೆಯಾಗಲು ಕಾರಣವಾಗಿತ್ತು.ಆದರೆ ಇದೀಗ ಬೆಳೆಗಾರರೆ ಈ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲು ಮುಂದಾಗಿದ್ದು, ಹಳದಿ ರೋಗದಿಂದ ಮುಕ್ತಿ ಪಡೆಯಲು ಹವಣಿಸುತ್ತಿದ್ದಾರೆ.

ಇದನ್ನೂ ಓದಿ: ಸರಳ ಜಂಬೂಸವಾರಿಗೆ ಸಿದ್ಧತೆಗಳು ಪೂರ್ಣ: ನಾಳೆ ಚಿನ್ನದ ಅಂಬಾರಿ ಹೊರಲು ಅಭಿಮನ್ಯು ಫಿಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.