ಬಂಟ್ವಾಳ (ದ.ಕ): ಕಾಲಿನಿಂದ ಒತ್ತಿದರೆ ಸಾಕು, ಈ ಸ್ಯಾನಿಟೈಸರ್ ಉಪಯೋಗಿಸಬಹುದು. ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಅವರ ಪುತ್ರ ಅರ್ಜುನ್ ಪೂಂಜಾ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸ್ಯಾನಿಟೈಸರ್ ಬಳಕೆಯ ವಿಧಾನವನ್ನು ರೂಪಿಸಿದ್ದಾರೆ.
ಯೂಟ್ಯೂಬ್ ನೋಡಿ ಇದನ್ನು ಕಲಿತೆ ಎಂದು ಅರ್ಜುನ್ ಪೂಂಜಾ ಹೇಳಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಸ್ಯಾನಿಟೈಸರ್ ಈಗ ಜನಸಾಮಾನ್ಯರಿಗೂ ಬೇಡಿಕೆಯ ವಸ್ತು ಆಗಿ ಮಾರ್ಪಟ್ಟಿದೆ.
ಸ್ಯಾನಿಟೈಸರ್ಅನ್ನು ಫರಂಗಿಪೇಟೆ ಬಸ್ ನಿಲ್ದಾಣದ ಬಳಿ ಸಾರ್ವಜನಿಕರ ಬಳಕೆಗೆ ಅಳವಡಿಸಲಾಗಿದೆ. ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಸ್ಯಾನಿಟೈಸರ್ ಹಾಗೂ ಬಳಸಲು ಅನುಕೂಲವಾಗುವಂತೆ ಸ್ಟ್ಯಾಂಡ್ ನಿರ್ಮಿಸಿ ಅಳವಡಿಸಲಾಗಿದೆ.
ಸಾರ್ವಜನಿಕರಿಗೆ ಶುಚಿತ್ವದ ಅರಿವು ಮೂಡಬೇಕು. ಆ ಮೂಲಕ ಮಹಾಮಾರಿ ಕೊರೊನಾ ಹರಡುವಿಕೆಗೆ ತಡೆ ಹಾಕಬೇಕು ಎನ್ನುವ ದೃಷ್ಟಿಯಲ್ಲಿ ಈ ಯೋಜನೆ ಮಾಡಲಾಗಿದೆ ಎನ್ನುತ್ತಾರೆ ಸೇವಾಂಜಲಿ ಪ್ರತಿಷ್ಠಾನದ ಫರಂಗಿಪೇಟೆ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ.