ETV Bharat / state

ಸುಳ್ಯ ಶಾಸಕ ಎಸ್.ಅಂಗಾರಗೆ ಸಚಿವ ಸ್ಥಾನ: ಬೆಂಬಲಿಗರಿಂದ ಪಟಾಕಿ ಸಿಡಿಸಿ ಸಂಭ್ರಮ - Exciting atmosphere in Sulya and Kadaba

ಸುಳ್ಯ ತಾಲೂಕಿನ ಹಲವು ಕಡೆಗಳಲ್ಲಿ ಎಸ್.ಅಂಗಾರ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೀಕ್ಷಣೆಗೆ ದೊಡ್ಡ ಪರದೆಗಳನ್ನು ಅಳವಡಿಸಲಾಗಿತ್ತು. ಉಭಯ ತಾಲೂಕಿನ ವಿವಿಧ ಕಡೆಗಳಲ್ಲಿ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ, ಜೈಕಾರ ಹಾಕುವ ಮೂಲಕ ಸಂಭ್ರಮಿಸಿದರು.

s-angara-getting-ministrial-position-exciting-atmosphere-in-sulya-and-kadaba
ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮ
author img

By

Published : Jan 13, 2021, 7:24 PM IST

ಸುಳ್ಯ: ಶಾಸಕ ಎಸ್.ಅಂಗಾರ ಅವರಿಗೆ ಸಚಿವ ಸ್ಥಾನ ದೊರೆತ ಹಿನ್ನೆಲೆ ತಾಲೂಕಿನಲ್ಲಿ ಹಾಗೂ ಕಡಬದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಜೈಕಾರ ಹಾಕುವ ಮೂಲಕ ಸಂಭ್ರಮಿಸಿದರು.

ತಾಲೂಕಿನ ಹಲವು ಕಡೆಗಳಲ್ಲಿ ಎಸ್.ಅಂಗಾರ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೀಕ್ಷಣೆಗೆ ದೊಡ್ಡ ಪರದೆಗಳನ್ನು ಅಳವಡಿಸಲಾಗಿತ್ತು. ಉಭಯ ತಾಲೂಕಿನ ವಿವಿಧ ಕಡೆಗಳಲ್ಲಿ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಜೈಕಾರ ಹಾಕುವ ಮೂಲಕ ಸಂಭ್ರಮಿಸಿದರು.

ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮ

ಕಡಬದಲ್ಲಿ ಪಟಾಕಿ ಸಿಡಿಸಿದ ಕಾರ್ಯಕರ್ತರು, ನಂತರದಲ್ಲಿ ಸ್ವಚ್ಛತೆಯ ಕಡೆಗೂ ಗಮನ ನೀಡುವ ದೃಶ್ಯ ಕಂಡುಬಂತು. ಸುದೀರ್ಘ ಆರು ಅವಧಿಗಳಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಎಸ್.ಅಂಗಾರ ಅವರು ಶಾಸಕರಾಗಿ ಆಯ್ಕೆಯಾಗಿದ್ದರೂ ಅವರಿಗೆ ಸಚಿವ ಸ್ಥಾನ ಮಾತ್ರ ದೊರೆತಿರಲಿಲ್ಲ. ಇದೀಗ ಇಲ್ಲಿನ ಜನತೆಯ ಸಂತೋಷ ಇಮ್ಮಡಿಗೊಂಡಿದೆ.

ಓದಿ: ಬಿಎಸ್​​​ವೈ ಸಂಪುಟ ಭರ್ತಿ: 12 ಜಿಲ್ಲೆಗಳಿಗಿಲ್ಲ ಕ್ಯಾಬಿನೆಟ್ ಪ್ರಾತಿನಿಧ್ಯ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.