ETV Bharat / state

ಪತಿಯ ಗೆಳೆಯನಿಂದಲೇ ಅಸಭ್ಯ ವರ್ತನೆ: ಪ್ರಶ್ನಿಸಿದಾಗ ತಲವಾರು ತೋರಿಸಿ ಹಲ್ಲೆ ಆರೋಪ - ಧರ್ಮಸ್ಥಳ ಪೊಲೀಸ್ ಠಾಣೆ

ಸ್ನೇಹಿತನ ಪತ್ನಿ ಜೊತೆ ಅಸಭ್ಯವಾಗಿ ವರ್ತಿಸಿರುವುದಲ್ಲದೇ ಕೇಳಲು ಬಂದ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

Rude behavior by husband friend and assault
ಪತಿಯ ಗೆಳೆಯನಿಂದಲೇ ಅಸಭ್ಯ ವರ್ತನೆ
author img

By

Published : Aug 9, 2023, 1:31 PM IST

ಮಂಗಳೂರು: ಕೆಲಸಕ್ಕೆ ಹೋಗುವ ವೇಳೆ ಪತಿಯ ಸ್ನೇಹಿತನೇ ಅಸಭ್ಯವಾಗಿ ವರ್ತಿಸಿದ ಘಟನೆಯೊಂದು ಮಂಗಳೂರಿನಿಂದ ವರದಿಯಾಗಿದೆ. ಪತ್ನಿ ಹತ್ತಿರ ಅಸಭ್ಯವಾಗಿ ವರ್ತಿಸಿದ್ದನ್ನು ಪ್ರಶ್ನೆ ಮಾಡಲು ತೆರಳಿದ ವೇಳೆ ತಲವಾರು ತೋರಿಸಿ ಹಲ್ಲೆ ‌ನಡೆಸಲಾಗಿದೆಯಂತೆ. ಈ ಸಂಬಂಧ ಸಂತ್ರಸ್ಥರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ.

ಕಡಬ ನಿವಾಸಿಯಾಗಿರುವ 23 ವರ್ಷದ ಮಹಿಳೆಯೊಬ್ಬರು ನಿತ್ಯ ನೆಲ್ಯಾಡಿಯಿಂದ ಮಂಗಳೂರಿಗೆ ಹೋಗಿ ಬರುತ್ತಿದ್ದರು. ಕಳೆದ ಕೆಲ ದಿನಗಳಿಂದ ಕೆಲಸ ಮುಗಿಸಿ ಮನೆಗೆ ಹೋಗುವಾಗ ನೆಲ್ಯಾಡಿಯಲ್ಲಿ ಮಹಿಳೆಯ ಗಂಡನ ಸ್ನೇಹಿತನೊಬ್ಬ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದು, ಅಸಭ್ಯವಾಗಿ ಮಾತನಾಡುತ್ತಿದ್ದನು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಈ ಬಗ್ಗೆ ಸೋಮವಾರ (ಆ.7) ರಂದು ಮಹಿಳೆ ತನ್ನ ಗಂಡನ ಬಳಿ ತಿಳಿಸಿದ್ದು, ಆರೋಪಿಯ ವರ್ತನೆಯ ಬಗ್ಗೆ ವಿಚಾರಿಸುವ ಸಲುವಾಗಿ ಮಹಿಳೆ ಹಾಗೂ ಅವರ ಗಂಡ ಕಾರಿನಲ್ಲಿ ಚಾಲಕನೊಂದಿಗೆ ಆರೋಪಿಯ ಮನೆಗೆ ತೆರಳಿ ವಿಚಾರಿಸಿದ್ದಾರೆ. ಆಗ ಆರೋಪಿ ವ್ಯಕ್ತಿ ತಲವಾರ್​ ತೋರಿಸಿ ಕೊಲ್ಲುವುದಾಗಿ ಜೀವಬೆದರಿಕೆ ಒಡ್ಡಿದ್ದಾನೆ. ಮಹಿಳೆಯ ವಸ್ತ್ರವನ್ನು ಹರಿದು ಅವರಿಗೆ ಮತ್ತು ಅವರ ಗಂಡನಿಗೆ ದೊಣ್ಣೆಯಿಂದ ಮತ್ತು ಕೈಯಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರುದಾರೆ ಮಹಿಳೆ ಆರೋಪಿಸಿದ್ದಾರೆ. ಈ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಜಪೆ ಪೊಲೀಸರ ಭರ್ಜರಿ ಕಾರ್ಯಚರಣೆ - ವಾಹನಗಳ ಬ್ಯಾಟರಿಗಳನ್ನು ಕಳ್ಳತನ ಮಾಡುತಿದ್ದ ಇಬ್ಬರ ಬಂಧನ: ರಾತ್ರಿ ಸಮಯದಲ್ಲಿ ವಾಹನಗಳ ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ಇಬ್ಬರು‌ ಆರೋಪಿಗಳನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ತಾಲೂಕಿನ ಮೂಡುಪೆರಾರ ಗ್ರಾಮದ ಈಶ್ವರ ಕಟ್ಟೆಯ ಪ್ರದೀಪ್ (20) ಮತ್ತು ಕಂದಾವರ ಗ್ರಾಮದ ಅನಿಲ್ ಯಾನೆ ಅನೀ (23) ಬಂಧಿತ ಆರೋಪಿಗಳು.

ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯ ಅಡೂರು, ಕೈಕಂಬ ಮತ್ತು ಗುರುಪುರ ಪರಿಸರಗಳಲ್ಲಿ ಪಾರ್ಕ್‌ ಮಾಡಿ ನಿಲ್ಲಿಸಿದ್ದ ಟಿಪ್ಪರ್ ಲಾರಿ, ಜೆ.ಸಿ.ಬಿ ಮತ್ತು ಇತರ ವಾಹನಗಳಿಂದ ಬ್ಯಾಟರಿಗಳು ಕಳವಾಗಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು. ಈ ಪ್ರಕರಣಗಳಲ್ಲಿ ತನಿಖೆ ನಡೆಸಿದ ಬಜಪೆ ಪೊಲೀಸ್ ನಿರೀಕ್ಷಕರಾದ ಪ್ರಕಾಶ ಅವರ ತಂಡ ಆಗಸ್ಟ್​ 8 ರಂದು ಮಂಗಳೂರು ತಾಲೂಕು ಬಜಪೆ ಗ್ರಾಮದ ಒಡ್ಡಿದ ಕಲ ಎಂಬಲ್ಲಿ ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಕಾರಿನಲ್ಲಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಒಂದು ಕಾರು ಮತ್ತು 1.50 ಲಕ್ಷ ರೂಪಾಯಿ ಮೌಲ್ಯದ ಒಟ್ಟು 17, Amaron ಕಂಪನಿಯ ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ ಮತ್ತು ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ಅವರ ನೇತೃತ್ವದಲ್ಲಿ ಪೊಲೀಸ್‌ ಉಪ ನಿರೀಕ್ಷಕರಾದ ಗುರಪ್ಪ ಕಾಂತಿ, ರೇವಣ ಸಿದ್ದಪ್ಪ, ಕುಮಾರೇಶನ್, ಲತಾ ಮತ್ತು ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ಎ.ಎಸ್.ಐ ರಾಮ ಪೂಜಾರಿ, ಸುಜನ್, ರಶೀದ್ ಶೇಖ್, ಬಸವರಾಜ್ ಪಾಟೀಲ್, ಪ್ರಕಾಶ, ಕೆಂಚಪ್ಪ, ಕೆಂಚನಗೌಡ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಬೈಲುಕುಪ್ಪೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: ಐವರ ಬಂಧನ, 30 ಕೆಜಿ ಮಾದಕವಸ್ತು ವಶಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.