ETV Bharat / state

ಕಿಸಾನ್ ರೈಲು ಮೂಲಕ ರಬ್ಬರ್ ಸಾಗಾಟ, ಬೆಳ್ತಂಗಡಿಯಲ್ಲಿ ಚಾಲನೆ - Kisan Rail start at Belthangadi

ರೈತರಿಗೆ ಸಾಗಾಟ ವೆಚ್ಚ ತುಂಬಾ ಉಳಿತಾಯವಾಗಿದೆ. ಅ.3ರಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಪುತ್ತೂರು ಎಪಿಎಂಸಿ ಆವರಣದಲ್ಲಿ ಕೊಂಕಣ್ ರೈಲ್ವೆ ಕಿಸಾನ್ ಪಾರ್ಸೆಲ್ ರೈಲಿಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ಬಳಿಕ ನಿರಂತರವಾಗಿ ಕೃಷಿ ಉತ್ಪನ್ನ ಸಾಗಾಟ ಮಾಡಲಾಗುತ್ತದೆ..

ಕೊಂಕಣ್ ರೈಲ್ವೆ ಮೂಲಕ 16 ಟನ್ ರಬ್ಬರ್ ಸಾಗಾಟಕ್ಕೆ ಚಾಲನೆ

author img

By

Published : Sep 29, 2020, 5:48 PM IST

ಬೆಳ್ತಂಗಡಿ (ದಕ್ಷಿಣ ಕನ್ನಡ) : ಪ್ರಧಾನಮಂತ್ರಿಯವರ ಕನಸಿನಂತೆ ಕೃಷಿ ಉತ್ಪನ್ನಗಳನ್ನು ರೈತರ ಮನೆಬಾಗಿಲಿನಿಂದ ದೂರದ ಮಾರುಕಟ್ಟೆಗೆ ಸಾಗಾಟ ಮಾಡಲು ಕಡಿಮೆ ವೆಚ್ಚ ಮಾಡುವ ದೃಷ್ಟಿಯಿಂದ, ರೈತರಿಗೆ ಪ್ರೋತ್ಸಾಹ ನೀಡಬೇಕೆಂದು ಕೊಂಕಣ್ ರೈಲ್ವೆ ಕಿಸಾನ್ ಪಾರ್ಸೆಲ್ ರೈಲನ್ನು ರೈಲ್ವೆ ಮಂತ್ರಿಗಳ ಸೂಚನೆಯಂತೆ ಆರಂಭಿಸಲಾಗಿದೆ.

ಮಂಗಳೂರಿನಿಂದ ಮಹಾರಾಷ್ಟ್ರಕ್ಕೆ ಕೃಷಿ ಉತ್ಪನ್ನ ಸಾಗಾಟ ಮಾಡಲು ಪ್ರಾರಂಭಿಸಲಾಗಿದೆ ಎಂದು ಕೊಂಕಣ್ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ಹೇಳಿದ್ದಾರೆ.

ಕೊಂಕಣ್ ರೈಲ್ವೆ ಮೂಲಕ 16 ಟನ್ ರಬ್ಬರ್ ಸಾಗಾಟಕ್ಕೆ ಚಾಲನೆ

ಮಂಗಳವಾರ ಲಾಯಿಲ ರಬ್ಬರ್ ಬೆಳೆಗಾರರ ಗೋದಾಮಿನಿಂದ ಗುಜರಾತ್‌ಗೆ ಕೊಂಕಣ್ ರೈಲ್ವೆ ಮೂಲಕ 16 ಟನ್ ರಬ್ಬರ್ ಸಾಗಾಟಕ್ಕೆ ಚಾಲನೆ ನೀಡಲಾಯಿತು. ಬಳಿಕ ಮಾತನಾಡಿದ ಅವರು, ರಬ್ಬರ್, ಅಡಿಕೆ, ತೆಂಗು, ಕಾಳುಮೆಣಸು ಮುಂತಾದ ಕೃಷಿ ಉತ್ಪನ್ನಗಳನ್ನು ಸಾಗಾಟ ಮಾಡಲು ಈ ರೈಲ್ವೆ ಪ್ರಾರಂಭವಾಗಿದೆ. ರೈತರು ಹೆಚ್ಚಿನ ರೀತಿ ಸಹಕರಿಸಬೇಕು. ಈಗಾಗಲೇ ಪ್ರಾಯೋಗಿಕವಾಗಿ ಎರಡು ಬಾರಿ ಕೃಷಿ ಉತ್ಪನ್ನಗಳನ್ನು ಸಾಗಾಟ ಮಾಡಲಾಗಿದೆ.

ರೈತರಿಗೆ ಸಾಗಾಟ ವೆಚ್ಚ ತುಂಬಾ ಉಳಿತಾಯವಾಗಿದೆ. ಅ.3ರಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಪುತ್ತೂರು ಎಪಿಎಂಸಿ ಆವರಣದಲ್ಲಿ ಕೊಂಕಣ್ ರೈಲ್ವೆ ಕಿಸಾನ್ ಪಾರ್ಸೆಲ್ ರೈಲಿಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ಬಳಿಕ ನಿರಂತರವಾಗಿ ಕೃಷಿ ಉತ್ಪನ್ನ ಸಾಗಾಟ ಮಾಡಲಾಗುತ್ತದೆ. ವೆಚ್ಚ ಕಡಿಮೆಯಾಗುವುದಲ್ಲದೆ ಸಮಯದ ಉಳಿತಾಯ ಆಗುತ್ತೆ. ಎರಡು ದಿನದಲ್ಲಿ ಗುಜರಾತಿಗೆ ತಲುಪಿಸಲಾಗುತ್ತದೆ ಎಂದರು.

ಉಜಿರೆ ರಬ್ಬರ್ ಸೊಸೈಟಿಯ ಅಧ್ಯಕ್ಷ ಶ್ರೀಧರ್ ಭಿಡೆ ಮಾತನಾಡಿ, 1985ರಲ್ಲಿ ನಮ್ಮ ಸೊಸೈಟಿ ಪ್ರಾರಂಭವಾಗಿದೆ. ಪ್ರಥಮ ಬಾರಿಗೆ ಸಹಕಾರಿ ಕ್ಷೇತ್ರದಲ್ಲಿ ರಬ್ಬರ್ ಖರೀದಿ ಮಾಡಲು ನಾವು ಪ್ರಾರಂಭಿಸಿದ್ದೇವೆ. ರಬ್ಬರ್ ಖರೀದಿಯಲ್ಲಿ ಏಷ್ಯಾದಲ್ಲಿ ಮೊದಲ ಸ್ಥಾನದಲ್ಲಿದೆ. ಇದೀಗ ನಮ್ಮ ಉತ್ಪನ್ನಗಳನ್ನು ದೂರದ ಮಾರುಕಟ್ಟೆಗೆ ಸಾಗಿಸಲು ಕೊಂಕಣ್ ರೈಲ್ವೆ ನಮ್ಮೊಂದಿಗೆ ಒಪ್ಪಂದ ಮಾಡಿದೆ. ಇದರಿಂದ ಸಾಗಾಟ ವೆಚ್ಚ ಕಡಿಮೆಯಾಗಲಿದೆ. ಈ ಕಡಿಮೆಯಾದ ವೆಚ್ಚವನ್ನು ರೈತರಿಗೆ ನೀಡಲು ಚಿಂತನೆ ನಡೆಸಲಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.