ಉಳ್ಳಾಲ: ಜಿಲ್ಲೆಯಲ್ಲಿ ಕೇರಳದಿಂದ ಬಂದವರಲ್ಲಿ ಹೆಚ್ಚು ಕೋವಿಡ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ, ತಹಶೀಲ್ದಾರ್ ನೇತೃತ್ವದಲ್ಲಿ ತಲಪಾಡಿ ಗಡಿಯಲ್ಲಿ ತೀವ್ರ ನಿಗಾವಹಿಸಲಾಗಿದ್ದು, ವಾಹನ ತಡೆದು ಆರ್ಟಿಪಿಸಿಆರ್ ವರದಿ ಪರಿಶೀಲನೆ ಮಾಡಲಾಗ್ತಿದೆ.
ಶುಕ್ರವಾರ ಬೆಳಗ್ಗೆ ಕೇರಳ ಸಾರಿಗೆ ಬಸ್ ಅನ್ನು ಅಧಿಕಾರಿಗಳು ತಡೆದಿದ್ದರು. ಇದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಇಂದು ವಾಹನಗಳಿಗೆ ತೆರಳಲು ಅವಕಾಶ ಕಲ್ಪಿಸಲಾಗಿದ್ದು, ನಾಳೆಯಿಂದ ಕಡ್ಡಾಯವಾಗಿ ಆರ್ಟಿಪಿಸಿಆರ್ ವರದಿ ತರುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ವಿಮಾನಯಾನಕ್ಕಿಲ್ಲದ ನಿರ್ಬಂಧ ರಸ್ತೆ ಪ್ರಯಾಣಕ್ಕೆ ವಿಧಿಸುವುದು ಸರಿಯೇ?: ಹೈಕೋರ್ಟ್ ಪ್ರಶ್ನೆ
ತಲಪಾಡಿಯ ಉಚಿತ ಕೋವಿಡ್ ಪರೀಕ್ಷಾ ಕೇಂದ್ರದಲ್ಲಿ ಕೂಡ ಪರೀಕ್ಷೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಸ್ಥಳದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಮಕೃಷ್ಣ ಬಾಯರಿ, ತಹಶೀಲ್ದಾರ್ ಗುರುಪ್ರಸಾದ್, ತಾಲೂಕು ವೈದ್ಯಾಧಿಕಾರಿ ಡಾ. ಸುಜಯ್ ಭಂಡಾರಿ, ಕಂದಾಯ ನಿರೀಕ್ಷಕ ಸ್ಟೀಫನ್, ತಲಪಾಡಿ ಪಿಡಿಒ ಕೇಶವ ಪೂಜಾರಿ, ಗೃಹರಕ್ಷಕ ದಳ ಹಾಗೂ ಉಳ್ಳಾಲ ಪೊಲೀಸರು ಪರಿಶೀಲನೆಯಲ್ಲಿ ತೊಡಗಿದ್ದಾರೆ.