ಮಂಗಳೂರು: ಒಳ ಉಡುಪು, ಗುದನಾಳ, ಮಿಕ್ಸರ್ ಗ್ರೈಂಡರ್ ಮೋಟಾರ್ನಲ್ಲಿ ಅಕ್ರಮ ಚಿನ್ನ ಸಾಗಣೆ ಮಾಡುತ್ತಿರುವುದನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಭಾರಿ ಪ್ರಮಾಣದ ಬಂಗಾರ ವಶಕ್ಕೆ ಪಡೆದುಕೊಂಡಿದ್ದಾರೆ.
ಸೆ.25 ರಿಂದ 30 ವರೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿವಿಧ ಪ್ರಕರಣಗಳಲ್ಲಿ ಚಿನ್ನ ವಶಕ್ಕೆ ಪಡೆಯಲಾಗಿದೆ. ದುಬೈ ಮತ್ತು ಮಸ್ಕತ್ನಿಂದ ಬಂದ ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ ಅಕ್ರಮ ಚಿನ್ನ ಸಾಗಿಸುತ್ತಿರುವುದು ಪತ್ತೆಯಾಗಿದೆ. ಕಾಸರಗೋಡು, ಭಟ್ಕಳ ಮತ್ತು ತ್ರಿವೇಂದ್ರಂ ಮೂಲದ ಐವರು ಪ್ರಯಾಣಿಕರು ಈ ಚಿನ್ನ ಸಾಗಿಸುತ್ತಿದ್ದರು. ಇವರಿಂದ 24 ಕ್ಯಾರೆಟ್ ಶುದ್ಧತೆಯ 1,703 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ರೂ. 86,09,730 ಎಂದು ಅಂದಾಜಿಸಲಾಗಿದೆ.
ಇವರಲ್ಲಿ ಕೆಲವು ಧರಿಸಿರುವ ಒಳಉಡುಪುಗಳ ಒಳಗೆ, ಗುದನಾಳದಲ್ಲಿ ಮತ್ತು ಮಿಕ್ಸರ್ ಗ್ರೈಂಡರ್ನ ಮೋಟಾರ್ ಒಳಗೆ ಬಚ್ಚಿಟ್ಟು ಚಿನ್ನ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ಚಿನ್ನವನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮುಂದುವರಿಸಲಾಗಿದೆ.
ಓದಿ: ದಾವಣಗೆರೆಯಲ್ಲಿ ಹೆಚ್ಚುತ್ತಲೇ ಇವೆ ಪಾರಂಪರಿಕ ಚಿನ್ನದ ಆಸೆ ತೋರಿಸಿ ವಂಚಿಸುವ ಪ್ರಕರಣಗಳು.. ಒಬ್ಬ ವಂಚಕ ಅಂದರ್