ETV Bharat / state

53 ಬಡ ವಿದ್ಯಾರ್ಥಿಗಳಿಗೆ 2.57 ಲಕ್ಷ ರೂ. ಸಹಾಯ ಧನ ವಿತರಣೆ

author img

By

Published : Aug 30, 2020, 12:52 PM IST

ಮಂಗಳೂರು ಧರ್ಮಪ್ರಾಂತ್ಯದ ಸಿಒಡಿಪಿ ಸಂಸ್ಥೆಯ ವತಿಯಿಂದ 53 ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಸಹಾಯ ಧನ ವಿತರಣೆ ಮಾಡಲಾಯಿತು.

ಮಂಗಳೂರು ಧರ್ಮಪ್ರಾಂತ್ಯದ ಸಿಒಡಿಪಿ ಸಂಸ್ಥೆ
ಮಂಗಳೂರು ಧರ್ಮಪ್ರಾಂತ್ಯದ ಸಿಒಡಿಪಿ ಸಂಸ್ಥೆ

ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ.ವಂ.ಡಾ. ಪೀಟರ್ ಪೌಲ್ ಸಲ್ದಾನಾ ಅವರು 53 ಬಡ ವಿದ್ಯಾರ್ಥಿಗಳಿಗೆ 2.57 ಲಕ್ಷ ರೂ. ಸಹಾಯ ಧನ ವಿತರಣೆ ಮಾಡಿದರು‌.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಡವರು ಎಲ್ಲರಿಗೂ ನಿಜವಾದ ಶಿಕ್ಷಕರಾಗಿದ್ದು, ಸರಳವಾಗಿ ಬದುಕುವುದನ್ನು ಕಲಿಸಿ ಕೊಡುತ್ತಾರೆ. ಯೇಸು ಸ್ವಾಮಿ ನಮಗೆ ಈ ಲೋಕದ ಬೆಳಕು ಮತ್ತು ಭೂಮಿಗೆ ಚಿರಋಣಿಯಾಗಿರಲು ಕರೆಕೊಟ್ಟಿದ್ದಾರೆ. ಅವರ ಹಿಂಬಾಲಕರದ ನಾವು ಇತರರಿಗೆ ಉಪಕಾರ ಮಾಡುವುದರಿಂದ ನಮ್ಮ ಜೀವನ ಸಾರ್ಥಕವಾಗುತ್ತದೆ. ಎಲ್ಲರೂ ಹಂಚಿಕೊಂಡು ಜೀವಿಸಿದಾಗ ನಾವು ಒಳ್ಳೆಯ ಮನುಷ್ಯರಾಗಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ಮೊದಲಿಗೆ ಕ್ಯಾನ್ಸರ್ ಹಾಗೂ ಕೊರೊನಾ ಸೋಂಕಿನ ಬಗ್ಗೆ ಮಾಹಿತಿ ಮತ್ತು ಜಾಗೃತಿ ಮೂಡಿಸಲಾಯಿತು. ಅಲ್ಲದೆ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಲಾಯಿತು.

ಈ ಸಂದರ್ಭ ಸಾರ್ವಜನಿಕ ಸಂಪರ್ಕಾಧಿಕಾರಿ ವಿಕ್ಟರ್ ವಿಜಯ್ ಲೋಬೊ, ಸಿಒಡಿಪಿ ಸಂಸ್ಥೆಯ ನಿರ್ದೇಶಕ ಒಸ್ವಾಲ್ಡ್ ಮೊಂತೇರೊ, ಕೆನರಾ ಸಂಪರ್ಕ ಕೇಂದ್ರದ ನಿರ್ದೇಶಕ ರಿಚರ್ಡ್ ಡಿಸೋಜ ಉಪಸ್ಥಿತರಿದ್ದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.