ಪುತ್ತೂರು : ಸುಮಾರು 12 ವರ್ಷಗಳಿಂದ ಮನೆಗೆ ಹೋಗುವುದಕ್ಕೆ ರಸ್ತೆ ಇಲ್ಲದೆ ಕಷ್ಟ ಅನುಭವಿಸುತ್ತಿದ್ದ ಕುಟುಂಬಗಳಿಗೆ ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್ ವತಿಯಿಂದ ರಸ್ತೆ ಮಾಡಿ ಕೊಡಲಾಯಿತು.
ನಿಡ್ಪಳ್ಳಿ ಕೋನಡ್ಕ ಎಂಬಲ್ಲಿ ಪರಿಶಿಷ್ಟ ಪಂಗಡದ ಸುಮಾರು 12 ಕುಟುಂಬಗಳು ವಾಸವಿದ್ದು, ಈ ಮನೆಗಳಿಗೆ ತೆರಳಲು ಯಾವುದೇ ರಸ್ತೆಗಳಿಲ್ಲದೆ ಬಹಳಷ್ಟು ಕಷ್ಟ ಅನುಭವಿಸುತ್ತಿದ್ದರು. ರಸ್ತೆ ಸಂಪರ್ಕ ಕಲ್ಪಿಸಿ ಕೊಡಬೇಕೆಂದು ಕೆಲವು ವರ್ಷಗಳಿಂದ ಸಂಬಂಧ ಪಟ್ಟ ಇಲಾಖೆಗಳಿಗೆ ಅರ್ಜಿ ಸಲ್ಲಿಸಿದರೂ ಪ್ರಯೋಜವಾಗಿರಲಿಲ್ಲ.
ರಾಜಕೀಯ ನಾಯಕರಿಗ ಮನವಿ ಸಲ್ಲಿಸಿದರೂ ಯಾರೊಬ್ಬರು ಈ ಕುಟುಂಬಗಳ ಮನವಿಗೆ ಸ್ಪಂದಿಸಿರಲಿಲ್ಲ. ಹಾಗಾಗಿ, ನೊಂದ ಕುಟುಂಬಗಳು ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್‌ನ ಕಚೇರಿಗೆ ಭೇಟಿ ನೀಡಿ ರಸ್ತೆ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದರು. ಕೂಡಲೇ ಟ್ರಸ್ಟಿನ ಜಿಲ್ಲಾಧ್ಯಕ್ಷರು ಮತ್ತು ತಾಲೂಕಾಧ್ಯಕ್ಷರು ಕೋನಡ್ಕದ ಪರಿಶಿಷ್ಟ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ನಂತರ ಮನವಿಗೆ ಸ್ಪಂದಿಸಿದ ಟ್ರಸ್ಟ್, ಕೇವಲ ಒಂದು ತಿಂಗಳ ಒಳಗಡೆ ರಸ್ತೆ ಸಂಪರ್ಕ ಕಲ್ಪಿಸಿಕೊಟ್ಟಿದ್ದಾರೆ. ಸುಮಾರು 1.5 ಕಿ.ಮೀ ಉದ್ದದ ರಸ್ತೆಯನ್ನು ಜೆಸಿಬಿ ಯಂತ್ರದ ಮೂಲಕ ಮಾಡಿಸಿ ಕೊಡಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟಿನ ಜಿಲ್ಲಾಧ್ಯಕ್ಷರಾದ ರಾಜು ಹೊಸ್ಮಠ, ತಾಲೂಕು ಅಧ್ಯಕ್ಷರಾದ ಹೇಮಂತ್ ಆರ್ಲಪದವು, ಗೌರವಾಧ್ಯಕ್ಷ ಸುರೇಶ್ ನಿಡ್ಪಳ್ಳಿ, ಪದಾಧಿಕಾರಿಗಳಾದ ರವಿ ಕಾರೆಕ್ಕಾಡು, ಹರೀಶ್ ಒಳತ್ತಡ್ಕ, ವಸಂತ ಪಟ್ಟೆ ನಿಡ್ಪಳ್ಳಿ, ಮೋಹನ್ ನಿಡ್ಪಳ್ಳಿ, ಅಶೋಕ ನಿಡ್ಪಳ್ಳಿ, ಆನಂದ ಕೌಡಿಚ್ಚಾರು, ಸಂಕಪ್ಪ ನಿಡ್ಪಳ್ಳಿ, ಕೃಷ್ಣ ಬೆಟ್ಟಂಪಾಡಿ, ಪ್ರದೀಪ್ ನಿಡ್ಪಳ್ಳಿ, ಯತೀಶ್ ಬೆಟ್ಟಂಪಾಡಿ, ಯಶೋಧರ ರೆಂಜ, ಉಮೇಶ್ ನಿಡ್ಪಳ್ಳಿ, ಶೀನ ನಿಡ್ಪಳ್ಳಿ, ಕೇಶವ್ ಪಡೀಲ್, ವಿಶ್ವನಾಥ ನಿಡ್ಪಳ್ಳಿ, ಅಶೋಕ ನಿಡ್ಪಳ್ಳಿ, ಕಾರ್ತಿಕ್ ನಿಡ್ಪಳ್ಳಿ, ಹರೀಶ್ ಪುತ್ತೂರು ಹಾಗೂ ಇನ್ನಿತರು ಉಪಸ್ಥಿತರಿದ್ದರು.