ETV Bharat / state

ರಸ್ತೆ ದುರಸ್ತಿ ಮಾಡುವ ಪುಟಾಣಿಗಳ ಫೋಟೋ ವೈರಲ್​.. ಕೂಡಲೇ ಮಾರ್ಗ ಸರಿಪಡಿಸುವಂತೆ ನ್ಯಾಯಾಧೀಶರ ತಾಕೀತು - ದಕ್ಷಿಣ ಕನ್ನಡ ಸುದ್ದಿ

ಪುಟಾಣಿಗಳಿಬ್ಬರು ಶಾಲೆಗೆ ಹೋಗುವ ಸಲುವಾಗಿ ಕೆಸರು ತುಂಬಿದ ರಸ್ತೆಯನ್ನು ಸರಿ ಪಡಿಸುವ ಮೂಲಕ ಸುದ್ದಿಯಾಗಿದ್ದು, ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಮಾಹಿತಿ ಪಡೆದ ಸುಳ್ಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಸೋಮಶೇಖರ್ ಅವರು, ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಕೂಡಲೇ ರಸ್ತೆಯನ್ನು ಸರಿಪಡಿಸುವಂತೆ ಪಂಚಾಯತ್‌ಗೆ ನ್ಯಾಯಾಧೀಶರು ತಾಕೀತು ಮಾಡಿದ್ದಾರೆಂದು ತಿಳಿದುಬಂದಿದೆ.

Road repairing Children Photo Viral
ರಸ್ತೆ ದುರಸ್ತಿ ಮಾಡುವ ಪುಟಾಣಿಗಳ ಫೋಟೋ ವೈರಲ್​
author img

By

Published : Oct 25, 2021, 6:49 PM IST

Updated : Oct 25, 2021, 7:13 PM IST

ಸುಳ್ಯ: ಸಾಮಾನ್ಯವಾಗಿ ಸಂಘ-ಸಂಸ್ಥೆಗಳು, ಗ್ರಾಮಸ್ಥರು ಶ್ರಮದಾನದ ಮೂಲಕ ರಸ್ತೆ ದುರಸ್ತಿ ಮಾಡುವುದನ್ನು ಅನೇಕ ಬಾರಿ ನೋಡಿದ್ದೇವೆ, ಕೇಳಿದ್ದೇವೆ. ಆದರೆ ಪುಟಾಣಿ ಮಕ್ಕಳಿಬ್ಬರು ಶಾಲೆಗೆ ಹೋಗುವ ಸಲುವಾಗಿ ಕೆಸರು ತುಂಬಿದ ರಸ್ತೆಯನ್ನು ಸರಿ ಪಡಿಸುವ ಮೂಲಕ ಸುದ್ದಿಯಾಗಿದ್ದು, ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಬೆಳ್ಳಾರೆ ಗ್ರಾಮದ ಮೂಡಾಯಿ ತೋಟ-ಬೆಳ್ಳಾರೆ ರಸ್ತೆಯ ಮಂಡೇಪು ಎಂಬಲ್ಲಿ ಮಣ್ಣಿನ ರಸ್ತೆಯು ಸಂಪೂರ್ಣವಾಗಿ ಕೆಸರುಮಯವಾಗಿದೆ. ಸ್ಥಳೀಯ ನಿನಾಸಿ ಸಂತೋಷ್ ಮತ್ತು ಕೇಶವ ಎಂಬವರ ಮಕ್ಕಳಾದ 2ನೇ ತರಗತಿಯ ವಲ್ಲೀಶ್​ ರಾಮ ಮತ್ತು ತನ್ವಿ ಹಾರೆ ಹಿಡಿದು ರಸ್ತೆಯಲ್ಲಿ ತುಂಬಿರುವ ಕೆಸರನ್ನು ಬದಿಗೆ ಸರಿಸಿ, ಗುಂಡಿಯಲ್ಲಿ ತುಂಬಿಕೊಂಡಿರುವ ನೀರನ್ನು ಹೊರಗೆ ಬಿಡುವ ಪ್ರಯತ್ನ ಮಾಡಿದ್ದರು.

Road repairing Children Photo Viral
ಸುಳ್ಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಸೋಮಶೇಖರ್

ಚಿಕ್ಕ ಮಕ್ಕಳಿಗೆ ಪ್ರಾಥಮಿಕ ಶಾಲಾ ತರಗತಿಗಳು ಇಂದಿನಿಂದ (ಅ.25) ಆರಂಭವಾಗಿದ್ದು, ಈ ನಡುವೆ ಇಬ್ಬರು ಪುಟಾಣಿಗಳು ತಾವು ನಿತ್ಯ ಸಾಗಬೇಕಾದ ರಸ್ತೆಯನ್ನು ತಾವೇ ದುರಸ್ತಿ ಪಡಿಸುತ್ತಿರುವ ಫೋಟೋ ಎಲ್ಲೆಡೆ ಸಖತ್​ ವೈರಲ್ ಆಗಿದೆ.

ಈ ಬಗ್ಗೆ ಮಾಹಿತಿ ಪಡೆದ ಸುಳ್ಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಸೋಮಶೇಖರ್ ಅವರು, ಸ್ಥಳಕ್ಕೆ ಭೇಟಿ ನೀಡಿದ್ದರು. ಮಕ್ಕಳ ಕೈಯಲ್ಲಿ ಹಾರೆ ಹಿಡಿಸಿದ ಪೋಷಕರನ್ನು ಪ್ರಶ್ನಿಸಿದರು. ಹಲವಾರು ಬಾರಿ ಪಂಚಾಯತ್‌ಗೆ ಮನವಿ ನೀಡಿದರೂ ರಸ್ತೆ ಸರಿಯಾಗದ ಹಿನ್ನೆಲೆಯಲ್ಲಿ ನಾವೇ ಶ್ರಮದಾನ ಮಾಡಿದ್ದು, ಈ ಸಮಯದಲ್ಲಿ ಮಕ್ಕಳು ಹಾರೆ ಹಿಡಿದಿದ್ದಾರೆ ಎಂದು ಪೋಷಕರು ನ್ಯಾಯಾಧೀಶರ ಬಳಿ ಹೇಳಿದರು.

ಪಂಚಾಯತ್‌ಗೆ ನ್ಯಾಯಾಧೀಶರು ತಾಕೀತು
ಪಂಚಾಯತ್‌ಗೆ ನ್ಯಾಯಾಧೀಶರ ತಾಕೀತು

ಆದ್ದರಿಂದ ಕೂಡಲೇ ರಸ್ತೆಯನ್ನು ಸರಿಪಡಿಸುವಂತೆ ಪಂಚಾಯತ್‌ಗೆ ನ್ಯಾಯಾಧೀಶರು ತಾಕೀತು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಓದಿ: ಶಾಲೆಯಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆ: ಸಿಬ್ಬಂದಿ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ

Last Updated : Oct 25, 2021, 7:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.