ಉಳ್ಳಾಲ : ಫಾಸ್ಟ್ ಟ್ಯಾಗ್ ಕಡ್ಡಾಯ ಹಿನ್ನೆಲೆ ತಲಪಾಡಿ ಟೋಲ್ಗೇಟ್ನಲ್ಲಿ ಎಲ್ಲಾ ಗೇಟುಗಳನ್ನು ತೆರೆಯಲಾಗಿದೆ. ಫಾಸ್ಟ್ ಟ್ಯಾಗ್ ಇಲ್ಲದವರು ದುಪಟ್ಟು ಶುಲ್ಕ ನೀಡಿ ಕೇರಳ ಕಡೆಗೆ ಮತ್ತು ಕೇರಳ ಕಡೆಯಿಂದ ಮಂಗಳೂರು ಕಡೆಗೆ ತೆರಳಿರುವ ಘಟನೆ ನಡೆದಿದೆ.
ಓದಿ: ಫಾಸ್ಟ್ ಟ್ಯಾಗ್ ಕಡ್ಡಾಯ; ಕಾರು ಚಾಲಕ - ಎನ್ಎಚ್ಎಎಲ್ ಸಿಬ್ಬಂದಿ ನಡುವೆ ವಾಗ್ವಾದ
ಸಣ್ಣಪುಟ್ಟ ವಾಗ್ವಾದಗಳು ನಡೆದರೂ ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಸಿಎಆರ್ ಪೊಲೀಸರು ಬಂದೋಬಸ್ತ್ ನಡೆಸಿ ವಾಗ್ವಾದಗಳನ್ನು ಇತ್ಯರ್ಥಗೊಳಿಸಿ ಕಳುಹಿಸಿದರು. ಆದರೆ, ಈವರೆಗೆ ಉಚಿತವಾಗಿ ತೆರಳುತ್ತಿದ್ದ ಸ್ಥಳೀಯರು ತೊಂದರೆಗೆ ಸಿಲುಕಿದ್ದಾರೆ. ಎಲ್ಲಾ ಸಾಲುಗಳಲ್ಲಿಯೂ ನಗದು ರಹಿತ ಫಾಸ್ಟ್ ಟ್ಯಾಗ್ ಅಳವಡಿಸಿದ ಹಿನ್ನೆಲೆ ವಾಹನಗಳ ಸಾಲು ಕಂಡು ಬರಲಿಲ್ಲ.
ಸ್ಥಳದಲ್ಲೇ ಫಾಸ್ಟ್ ಟ್ಯಾಗ್ ನೋಂದಣಿ : ಫಾಸ್ಟ್‌ಟ್ಯಾಗ್ ಹೊಂದಿರದ ವಾಹನಗಳಿಗೆ ತಲಪಾಡಿ ಟೋಲ್‌ಗೇಟ್ ಬಳಿಯಲ್ಲೇ ಫಾಸ್ಟ್‌ಟ್ಯಾಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಏರ್ಟೆಲ್, ಆ್ಯಕ್ಸಿಸ್, ಪೇಟಿಎಂ, ಹೆಚ್ಡಿಎಫ್ಸಿ, ಎನ್ಹೆಚ್ಐ ವತಿಯಿಂದ ಪ್ರತ್ಯೇಕ ಫಾಸ್ಟ್‌ಟ್ಯಾಗ್ ಮಾಡಲು ಸಿಬ್ಬಂದಿ ನಿಯೋಜಿಸಲಾಗಿದೆ.
ವಾಹನದ ಆರ್ಸಿ ಮತ್ತು ವ್ಯಕ್ತಿಯ ಪಾನ್ ಕಾರ್ಡ್ ಇದ್ದರೆ ಸ್ಥಳದಲ್ಲೇ ಫಾಸ್ಟ್ ಟ್ಯಾಗ್ ಮಾಡಿಕೊಡಲಾಗುತ್ತಿದೆ. ಹತ್ತು ನಿಮಿಷದಲ್ಲಿ ಫಾಸ್ಟ್ ಟ್ಯಾಗ್ ಕಾರ್ಡ್ ಮಾಡಲಾಗುತ್ತಿದೆ.
ಪಾಸ್ ವ್ಯವಸ್ಥೆ : ತಲಪಾಡಿ ಪ್ರದೇಶದ ಸ್ಥಳೀಯ 20 ಕಿ.ಮೀ ವ್ಯಾಪ್ತಿಯಲ್ಲಿರುವ ಮಂದಿಗೆ 270 ರೂ. ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಖಾಸಗಿ ವಾಹನಗಳು ಈ ಪಾಸ್ ಹೊಂದಿದ್ದರೆ ದಿನದಲ್ಲಿ ಎಷ್ಟು ಬಾರಿಯೂ ಸಾಗಲು ಅವಕಾಶ ನೀಡಲಾಗುತ್ತಿದೆ.
ಟ್ಯಾಕ್ಸಿ ವಾಹನಗಳಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಇದ್ದು, ಘನ ವಾಹನಗಳು ತಿಂಗಳಿಗೆ 4200 ರೂ., ಕಾರು ಇನ್ನಿತರ ಲಘು ವಾಹನಗಳಿಗೆ 2100 ರೂ. ಕೊಟ್ಟು ಪಾಸ್ ಪಡೆಯಬಹುದು ಎಂದು ನವಯುಗ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.