ಮಂಗಳೂರು/ಹುಬ್ಬಳ್ಳಿ: ದೇಶದೆಲ್ಲೆಡೆ ಕೋವಿಡ್ ಎರಡನೇ ಅಲೆ ಆರ್ಭಟಿಸುತ್ತಿದೆ. ಮೊದಲೇ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದ ಬೀದಿ ಬದಿಯ ವ್ಯಾಪಾರಸ್ಥರು, ಸಣ್ಣಪುಟ್ಟ ಉದ್ಯಮಿಗಳಿಗೀಗ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕೋವಿಡ್ ತಡೆಗೆ ರಾಜ್ಯದಲ್ಲೀಗ ಕೊರೊನಾ ಕರ್ಫ್ಯೂ ಜಾರಿಯಲ್ಲಿದೆ. ಹಾಗಾಗಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಣ್ಣ-ಪುಟ್ಟ ಅಂಗಡಿಗಳು, ಬೀದಿ ಬದಿಯ ವ್ಯಾಪಾರ, ಗೂಡಂಗಡಿಗಳು, ತರಕಾರಿ ಮಾರಾಟ, ಸಣ್ಣಪುಟ್ಟ ಹೋಟೆಲ್ ಹೀಗೆ ಹೆಚ್ಚಿನ ವ್ಯಾಪಾರ ವಹಿವಾಟುಗಳು ಮತ್ತೊಮ್ಮೆ ನೆಲಕಚ್ಚಿವೆ.
ಮಂಗಳೂರಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ಬೀದಿ ಬದಿಯ ವ್ಯಾಪಾರಸ್ಥರಿದ್ದಾರೆ. ಸಣ್ಣ ಪುಟ್ಟ ಉದ್ಯಮವನ್ನೇ ನಂಬಿ ಜೀವನ ನಡೆಸುವವರು ಹಲವರಿದ್ದಾರೆ. ಆದ್ರೆ ಕೋವಿಡ್ನಿಂದ ಮನೆಯಲ್ಲೇ ಕೂರುವಂತಾಗಿದ್ದು, ಜೀವನ ನಡೆಸೋದೇ ಕಷ್ಟ ಅಂತಿದ್ದಾರೆ ವ್ಯಾಪಾರಸ್ಥರು.
ಒಟ್ಟಿನಲ್ಲಿ ಕೋವಿಡ್, ಕೊರೊನಾ ಕರ್ಫ್ಯೂನಿಂದ ಬೀದಿ ಬದಿಯ ವ್ಯಾಪಾರಸ್ಥರು, ಸಣ್ಣಪುಟ್ಟ ಉದ್ಯಮಿಗಳು ನಲುಗಿರೋದು ಸುಳ್ಳಲ್ಲ. ಸರ್ಕಾರ ಇವರತ್ತ ಗಮನ ಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.