ETV Bharat / state

ಉಳ್ಳಾಲ: ಮಹಿಳಾ ಪೇದೆಗೆ ಲೈಂಗಿಕ ಕಿರುಕುಳ ಆರೋಪ.. ನಿವೃತ್ತ ಯೋಧ ಪೊಲೀಸರ ವಶಕ್ಕೆ - ಲೈಂಗಿಕ ಕಿರುಕುಳ

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಿವೃತ್ತ ಯೋಧನೊಬ್ಬ ಮಹಿಳಾ ಪೊಲೀಸ್​ ಪೇದೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.

ಆರೋಪಿ
ಆರೋಪಿ
author img

By

Published : Aug 1, 2023, 1:44 PM IST

Updated : Aug 1, 2023, 2:54 PM IST

ಉಳ್ಳಾಲ(ದಕ್ಷಿಣ ಕನ್ನಡ): ಮಹಿಳಾ ಪೊಲೀಸ್ ಪೇದೆಗೆ ನಿವೃತ್ತ ಯೋಧನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕುಂಪಲದ ಬಗಂಬಿಲ ಎಂಬಲ್ಲಿ ಕೇಳಿಬಂದಿದೆ. ಕೊಲ್ಯ ಕನೀರುತೋಟ ನಿವಾಸಿ, ಸದ್ಯ ಕುಂಪಲ ಅಮೃತನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ಪ್ರಶಾಂತ್ (45) ವಿರುದ್ಧ ಕಿರುಕುಳ ಆರೋಪ ಸಂಬಂಧ ದೂರು ದಾಖಲಾಗಿದೆ. ಠಾಣೆಯೊಂದರ ಮಹಿಳಾ ಪೇದೆ ಸ್ಕೂಟರಿನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಸಂದರ್ಭ ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದ್ದು, ಸಂತ್ರಸ್ತೆ ತಕ್ಷಣ ಕಿರುಚಾಡಿದಾಗ ಸ್ಥಳೀಯರು ಜಮಾಯಿಸಿ ನಿವೃತ್ತ ಯೋಧನನ್ನು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.

ಯೋಧನ ವಿರುದ್ಧ ಹಲವು ಪ್ರಕರಣಗಳು: ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಿವೃತ್ತ ಯೋಧ ಪ್ರಶಾಂತ್ ವಿರುದ್ಧ ಹಲವರು ದೂರು ನೀಡಿ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ನೆರೆಮನೆಯವರಿಗೆ, ಊರಿನವರಿಗೆ ನಿತ್ಯ ಕುಡಿದು ಬಂದು ಕಿರುಕುಳ ನೀಡುವ ಆರೋಪದ ಮೇಲೆ ನಿವೃತ್ತ ಯೋಧನ ವಿರುದ್ಧ ಹಲವರು ನೊಂದು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಮೇಲೂ ಹಲ್ಲೆ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ದೆಹಲಿ ಯೋಧರ ಅಸೋಸಿಯೇಷನ್​ನಲ್ಲಿಯೂ ಎರಡು ದೂರುಗಳು ವಿಚಾರಣಾ ಹಂತದಲ್ಲಿವೆ ಎಂದು ತಿಳಿದುಬಂದಿದೆ.

ತಲಪಾಡಿಯಲ್ಲಿ ಅಪ್ರಾಪ್ತೆಗೆ ಕಿರುಕುಳ: ಸೋಮವಾರ ಉಳ್ಳಾಲದ ತಲಪಾಡಿಯಲ್ಲಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ ಜೊತೆ ಅನುಚಿತವಾಗಿ ವರ್ತಿಸಿದ್ದ ವ್ಯಕ್ತಿಯನ್ನು ಉಳ್ಳಾಲ ಪೊಲೀಸರು ಬಂಧಿಸಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ. ನಿನ್ನೆ ಸಂಜೆ SSLC ವಿದ್ಯಾರ್ಥಿನಿ ಶಾಲೆಯಿಂದ ವಾಪಾಸಾಗಿ ತಲಪಾಡಿಗೆ ಬಂದು ತನ್ನ ಸಹೋದರನಿಗೆ ಕಾಯುತ್ತಿದ್ದ ವೇಳೆ, ಅಲ್ಲೇ ನಿಂತಿದ್ದ ಆರೋಪಿ ಆಕೆ ಜೊತೆ ಅನುಚಿತವಾಗಿ ವರ್ತಿಸಿ ಮನೆಗೆ ಬಿಡುವುದಾಗಿ ಕೈ ಹಿಡಿದು ಎಳೆದಿದ್ದಾನೆ. ಭಯಭೀತಗೊಂಡ ವಿದ್ಯಾರ್ಥಿನಿ ಕಿರುಚಿದ್ದು, ಸ್ಥಳೀಯ ರಿಕ್ಷಾ ಚಾಲಕರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಮಾಹಿತಿ ಪಡೆದ ಪೊಲೀಸರು, ಆರೋಪಿಯನ್ನು ಬಂಧಿಸಿ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಬಂಟ್ವಾಳದಲ್ಲಿಯೂ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಪರಿಶಿಷ್ಟ ಪಂಗಡಕ್ಕೆ ಸೇರಿದ 16 ವರ್ಷದ ಬಾಲಕಿಯ ಮೇಲೆ ಕೇರಳದ ಕೆಲವು ಯುವಕರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇಲ್ಲಿಯೂ ಪೋಕ್ಸೋ ಪ್ರಕರಣ ದಾಖಲಾಗಿದೆ. ಬಾಲಕಿ ಮನೆಗೆ ತಡವಾಗಿ ಬಂದ ವೇಳೆ ಮನೆಯವರು ವಿಚಾರಿಸಿದಾಗ ಕೇರಳದ ಕೆಲ ಯುವಕರು ಲೈಂಗಿಕ ದೌರ್ಜ್ಯನ ಎಸೆಗಿರುವುದು ಬೆಳಕಿಗೆ ಬಂದಿತ್ತು. ಒಟ್ಟು ಐವರು ಆರೋಪಿಗಳು ಕೆಲವು ವರ್ಷಗಳಿಂದ ಕೃತ್ಯ ಮಾಡುತ್ತಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣ ಕುರಿತು ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ: ತಲಪಾಡಿಯಲ್ಲಿ ಅಪ್ರಾಪ್ತೆಗೆ ಕಿರುಕುಳ : ಪೋಕ್ಸೊ ಕಾಯಿದೆಯಡಿ ಆರೋಪಿ ಬಂಧನ

Last Updated : Aug 1, 2023, 2:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.