ಕಡಬ: ಕಡಬ ಪೊಲೀಸ್ ಠಾಣೆಯಲ್ಲಿ ಜನವರಿ 26ನೇ ಭಾನುವಾರ 71 ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಠಾಣಾ ಉಪನಿರೀಕ್ಷಕ ರುಕ್ಮ ನಾಯ್ಕ್ ಅವರು ಧ್ವಜರೋಹಣ ನೆರವೇರಿಸಿ ಬಳಿಕ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಠಾಣಾ ಎಸ್ಐ ಚಂದ್ರಶೇಖರ್, ಸುರೇಶ್, ಮೋನಪ್ಪ ಗೌಡ ,ಪೊಲೀಸ್ ಸಿಬ್ಬಂದಿಗಳಾದ ನೇತ್ರ ಕುಮಾರ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಹಾಜರಿದ್ದರು.