ETV Bharat / state

ನವೆಂಬರ್‌ನಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾಖಲೆಯ ಪ್ಯಾಸೆಂಜರ್ಸ್​ ಪ್ರಯಾಣ - ಏರ್ ಟ್ರಾಫಿಕ್ ಚಲನೆಗಳು

Record number of passengers travelled: ನವೆಂಬರ್‌ ತಿಂಗಳೊಂದರಲ್ಲೇ 1,78,314 ಪ್ರಯಾಣಿಕರು ಆಗಮನ ಹಾಗೂ ನಿರ್ಗಮಿಸುವ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಾಖಲೆ ನಿರ್ಮಿಸಿದೆ.

Mangaluru International Airport
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
author img

By ETV Bharat Karnataka Team

Published : Dec 11, 2023, 2:28 PM IST

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೆಂಬರ್‌ ತಿಂಗಳು ಒಂದರಲ್ಲೇ 1,78,314 ಪ್ರಯಾಣಿಕರು ಆಗಮನ ಹಾಗೂ ನಿರ್ಗಮಿಸುವ ಮೂಲಕ ದಾಖಲೆ ನಿರ್ಮಿಸಿದೆ. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಅತ್ಯಧಿಕವಾಗಿದೆ ಎಂದು ವಿಮಾನ‌ ನಿಲ್ದಾಣದ‌ ಪ್ರಕಟಣೆ ತಿಳಿಸಿದೆ.

ಇದರಲ್ಲಿ 1,32,762 ದೇಶೀಯ ಮತ್ತು 45,552 ಅಂತಾರಾಷ್ಟ್ರೀಯ ಪ್ರಯಾಣಿಕರು ಸೇರಿದ್ದಾರೆ. ನವೆಂಬರ್‌ನಲ್ಲಿ ಆಗಮಿಸಿದ ಹಾಗೂ ನಿರ್ಗಮಿಸಿದ ಒಟ್ಟು ಪ್ರಯಾಣಿಕರ ಸಂಖ್ಯೆ ಅಕ್ಟೋಬರ್ 2023 ರಲ್ಲಿ ನಿರ್ವಹಿಸಿದ ಪ್ರಯಾಣಿಕರಿಗಿಂತ 10.3% ಹೆಚ್ಚಾಗಿದೆ. ಇದರೊಂದಿಗೆ, ಪ್ರಸಕ್ತ ಆರ್ಥಿಕ ವರ್ಷದ ಮೊದಲ ಎಂಟು ತಿಂಗಳಲ್ಲಿ ವಿಮಾನ ನಿಲ್ದಾಣವು 12,86,207 ಪ್ರಯಾಣಿಕರನ್ನು ನಿರ್ವಹಿಸಿದೆ ಮತ್ತು ಕಳೆದ ವರ್ಷದ ಈ ಅವಧಿಯಲ್ಲಿ 11,95,499 ಪ್ರಯಾಣಿಕರನ್ನು ನಿರ್ವಹಿಸಲಾಗಿತ್ತು.

ಅಕ್ಟೋಬರ್ 29, 2023 ರಂದು ಪ್ರಾರಂಭವಾದ ಚಳಿಗಾಲದ ವೇಳಾಪಟ್ಟಿಯ ಪ್ರಾರಂಭದೊಂದಿಗೆ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಆರಂಭವಾಗಿತ್ತು. ಮಂಗಳೂರು-ಬೆಂಗಳೂರು, ಮಂಗಳೂರು-ಚೆನ್ನೈ ಮತ್ತು ಮಂಗಳೂರು-ಮುಂಬೈ ವಲಯಗಳಲ್ಲಿ ಹೆಚ್ಚುವರಿ ವಿಮಾನಗಳು ಸಹ ಪ್ರಯಾಣಿಕರ ಬೆಳವಣಿಗೆಯಲ್ಲಿ ಈ ಏರುತ್ತಿರುವ ಪ್ರವೃತ್ತಿಗೆ ನೆರವಾಗಿವೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ನವೆಂಬರ್‌ನಲ್ಲಿ ವಿಮಾನ ನಿಲ್ದಾಣದಲ್ಲಿ ಏರ್ ಟ್ರಾಫಿಕ್ ಚಲನೆಗಳು (ಎಟಿಎಂಗಳು) 1,298ಕ್ಕೆ ಏರಿದೆ ಎಂಬ ಅಂಶದಿಂದ ಪ್ರಯಾಣಿಕರ ಚಲನೆಯಲ್ಲಿ ಈ ಮೇಲ್ಮುಖ ಪ್ರವೃತ್ತಿಯನ್ನು ಅಳೆಯಬಹುದಾಗಿದೆ. ಇದು ಅಕ್ಟೋಬರ್ 2023 ರಲ್ಲಿ 1,222 ಎಟಿಎಂಗಳಿಗೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಅತ್ಯಧಿಕವಾಗಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿನ 1,49,438 ಪ್ರಯಾಣಿಕರಿಗೆ ಹೋಲಿಸಿದರೆ ಈ ಹಣಕಾಸು ವರ್ಷದಲ್ಲಿ ಏಪ್ರಿಲ್‌ನಿಂದ ನವೆಂಬರ್‌ವರೆಗೆ ವಿಮಾನ ನಿಲ್ದಾಣದಲ್ಲಿ ಆಗಮಿಸಿದ ಹಾಗೂ ನಿರ್ಗಮಿಸಿದ ಸರಾಸರಿ ಪ್ರಯಾಣಿಕರ ಸಂಖ್ಯೆ 1,60,780 ಆಗಿದೆ. ಅಕ್ಟೋಬರ್‌ನ 5,215 ಪ್ರಯಾಣಿಕರಿಗೆ ಹೋಲಿಸಿದರೆ, ನವೆಂಬರ್‌ನಲ್ಲಿ ಪ್ರತಿ ದಿನ ವಿಮಾನ ನಿಲ್ದಾಣದಲ್ಲಿ ಸರಾಸರಿ 5,944 ಪ್ರಯಾಣಿಕರ (ನವೆಂಬರ್ 25 ರಂದು 7,468 ಪ್ರಯಾಣಿಕರ ಗರಿಷ್ಠ ತಲುಪಿದೆ) ಆಗಮನ ಹಾಗೂ ನಿರ್ಗಮನವಾಗಿದೆ. ಆಗಸ್ಟ್‌ನಲ್ಲಿ 1,67,887 ಪ್ರಯಾಣಿಕರನ್ನು ವಿಮಾನ ನಿಲ್ದಾಣ ನಿರ್ವಹಿಸಿದೆ. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡನೇ ಅತಿ ಹೆಚ್ಚು ಸಂಖ್ಯೆಯಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಒಂದೇ ದಿನ ಮಂಗಳೂರು ವಿಮಾನ ನಿಲ್ದಾಣದಲ್ಲಿ ದಾಖಲೆಯ 7399 ಪ್ಯಾಸೆಂಜರ್ಸ್​ ಪ್ರಯಾಣ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.