ETV Bharat / state

ಕರ್ನಾಟಕ ಲೋಕಾಯುಕ್ತ ವಿಭಾಗದಿಂದ ಪುತ್ತೂರಿನಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ

ವಿದ್ಯಾಭ್ಯಾಸ ಇಲ್ಲದವರನ್ನು ಅಲೆದಾಡಿಸುವಂತೆ ಮಾಡಬೇಡಿ. ಏನೇ ಸಮಸ್ಯೆಯಿದ್ದರೂ ಪರಿಹಾರ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಿ ಎಂದು ಮಂಗಳೂರು ವಿಭಾಗದ ಲೋಕಾಯುಕ್ತ ಎಸ್‍ಪಿ ಲಕ್ಷ್ಮೀ ಗಣೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Mangalore Division Lokayukta SP Lakshmi Ganesh
ಮಂಗಳೂರು ವಿಭಾಗದ ಲೋಕಾಯುಕ್ತ ಎಸ್‍ಪಿ ಲಕ್ಷ್ಮೀ ಗಣೇಶ್
author img

By

Published : Dec 19, 2022, 10:34 PM IST

ಮಂಗಳೂರು ವಿಭಾಗದ ಲೋಕಾಯುಕ್ತ ಎಸ್‍ಪಿ ಲಕ್ಷ್ಮೀ ಗಣೇಶ್

ಪುತ್ತೂರು(ದಕ್ಷಿಣ ಕನ್ನಡ): ವಿದ್ಯಾಭ್ಯಾಸ ಇಲ್ಲದವರನ್ನು ಅಲೆದಾಡಿಸುವಂತೆ ಮಾಡಬೇಡಿ. ಏನೇ ಸಮಸ್ಯೆಯಿದ್ದರೂ ಪರಿಹಾರ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಿ ಎಂದು ಮಂಗಳೂರು ವಿಭಾಗದ ಲೋಕಾಯುಕ್ತ ಎಸ್‍ಪಿ ಲಕ್ಷ್ಮೀ ಗಣೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಸೋಮವಾರ ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ವತಿಯಿಂದ ಇಲ್ಲಿಯ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಈ ವಿಚಾರ ಹೇಳಿದರು.

ಕಾರ್ಯಕ್ರಮದಲ್ಲಿ ಸುಮಾರು 21 ಅರ್ಜಿಗಳು ಬಂದಿದ್ದು, ಕಂದಾಯ ಹಾಗೂ ಸರ್ವೆ ಇಲಾಖೆಗೆ ಒಳಪಟ್ಟ ಪ್ಲಾಟಿಂಗ್ ಸಂಬಂಧಿಸಿದ ದೂರು ಅರ್ಜಿಗಳು ಬಂದಿವೆ. ಈ ಪೈಕಿ ಬಹುತೇಕ ಅರ್ಜಿಗಳಿಗೆ ಸ್ಥಳೀಯ ಮಟ್ಟದಲ್ಲೇ ಪರಿಹಾರ ಕಂಡುಕೊಳ್ಳಲಾಗಿದೆ. ಉಳಿದ ಸಮಸ್ಯೆಗಳ ಪರಿಹಾರಕ್ಕಾಗಿ ಒಂದು ವಾರ ಕಾಲಾವಕಾಶ ನೀಡಲಾಗಿದ್ದು, ಸಮಸ್ಯೆ ಪರಿಹರಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಇರ್ಕಿಮಠ ಎಂಬಲ್ಲಿ ಪಂಚಾಯಿತಿಯವರು ಪಟ್ಟಾ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಿದ್ದು, ಪರಿಹಾರ ನೀಡಿಲ್ಲ ಎಂದು ಅಲ್ಲಿಯ ಸಂತ್ರಸ್ತರೊಬ್ಬರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‍ಪಿ ಲಕ್ಷ್ಮೀ ಗಣೇಶ್, ಈಗಾಗಲೇ ರಸ್ತೆ ನಿರ್ಮಿಸಿದ ಜಾಗದವರ ಬಳಿ ಸಾರ್ವಜನಿಕ ಉಪಯೋಗಕ್ಕೆ ಎಂದು ಅವರಲ್ಲಿ ಲಿಖಿತ ರೂಪದಲ್ಲಿ ಪಡೆದು ಬಳಿಕ ರಸ್ತೆ ನಿರ್ಮಾಣಕ್ಕೆ ತೊಡಗಬೇಕಿತ್ತು. ಯಾವ ಆಧಾರದಲ್ಲಿ, ಹೇಗೆ ನೀವು ಪಟ್ಟಾ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಿದ್ದೀರಿ ಎಂದು ಅಧಿಕಾರಿಗಳ ವಿರುದ್ಧ ಗರಂ ಆದರು.

ಉಳಿದಂತೆ ತಾಲೂಕಿಗೆ ನೀರಿನ ಪೂರೈಕೆ, ತ್ಯಾಜ್ಯ ವಿಲೇವಾರಿ ಮುಂತಾದ ವಿಚಾರಗಳ ಬಗ್ಗೆ ನಗರಸಭೆ ಕಮಿಷನರ್ ಬಳಿ ವಿಚಾರಿಸಿದರು. ಕಾರ್ಯಕ್ರಮದಲ್ಲಿ ಲೋಕಾಯುಕ್ತ ಡಿವೈಎಸ್‍ಪಿಗಳಾದ ಕಲಾವತಿ, ಚೆಲುವರಾಜ್, ಇನ್‍ಸ್ಪೆಕ್ಟರ್ ಅಮಾನುಲ್ಲಾ, ಸಿಬ್ಬಂದಿಗಳಾದ ಮಹೇಶ್, ಶರತ್, ವಿನಾಯಕ, ನಗರಸಭೆ ಪೌರಾಯುಕ್ರ ಮಧು ಎಸ್.ಮನೋಹರ್, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ತಹಶೀಲ್ದಾರ್ ನಿಸರ್ಗಪ್ರಿಯ, ಎಡಿಎಲ್‍ಆರ್ ರಮಾದೇವಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಿ ಎಲ್​ ಸಂತೋಷ್ ಭೇಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.