ಮಂಗಳೂರು: ಸ್ವಂತ ತಂದೆಯೇ ತನ್ನ ಅಪ್ರಾಪ್ತ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದನೆಂಬ ಪ್ರಕರಣ ತಡವಾಗಿ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ನೊಂದ ಬಾಲಕಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಾಮುಕ ತಂದೆ ಬಾಲಕಿಯನ್ನು 2015-2016ರಿಂದಲೇ ಅಂದರೆ ಆಕೆ 5ನೇ ತರಗತಿಯಲ್ಲಿರುವಾಗಿನಿಂದಲೇ ಅತ್ಯಾಚಾರ ನಡೆಸುತ್ತಿದ್ದ ಎಂಬ ವಿಚಾರವೂ ಬೆಳಕಿಗೆ ಬಂದಿದೆ. ಯಾರೂ ಇಲ್ಲದಾಗ ಆರೋಪಿ ಮಗಳ ಮೇಲೆಯೇ ಈ ಹೇಯ ಕೃತ್ಯ ಎಸಗುತ್ತಿರುವುದರಿಂದ ಎಲ್ಲೂ ವಿಚಾರ ಬಹಿರಂಗಗೊಂಡಿರಲಿಲ್ಲ.
ನಿರಂತರವಾಗಿ ಆರೋಪಿ ಅತ್ಯಾಚಾರವೆಸಗಿರುವುದರಿಂದ ಬಾಲಕಿ ದೈಹಿಕ ಹಾಗೂ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದಳು. ಇದರಿಂದ ವಿಷಯ ಬಹಿರಂಗಗೊಂಡಿದ್ದು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅನುಕಂಪದ ನೇಮಕ: ಕುಟುಂಬ ಸದಸ್ಯರಿಗೆ ಅವಕಾಶ ಕಲ್ಪಿಸಿ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರದ ಆದೇಶ