ಮಂಗಳೂರು: ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ ತಂದೆಯನ್ನು ಪೋಕ್ಸೊ ಕಾಯ್ದೆ ಅಡಿ ಗುರುವಾರ ಬಂಧಿಸಲಾಗಿದೆ.
ಇಲ್ಲಿನ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗ್ರಾಮವೊಂದರಲ್ಲಿ ಈ ಹೇಯ ಕೃತ್ಯ ನಡೆದಿದೆ. ತಂದೆಯ ಕಾಮಕ್ಕೆ ಬಲಿಯಾದ ಬಾಲಕಿ, ಇದೀಗ ಗರ್ಭ ಧರಿಸಿದ್ದಾಳೆ. ಘಟನೆ ಹಿನ್ನೆಲೆ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಪೂಂಜಲ್ ಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.