ETV Bharat / state

ಸುರತ್ಕಲ್​ನಲ್ಲಿ ಅಪ್ಪನಿಂದಲೇ ಪುತ್ರಿಯರ ಮೇಲೆ ನಿರಂತರ ಅತ್ಯಾಚಾರ: ಕಾಮುಕ ತಂದೆ ಕಂಬಿ ಹಿಂದೆ - ಮಂಗಳೂರು ಮಹಿಳಾ ಪೊಲೀಸ್​ ಠಾಣೆ

ಎಲ್ಲಾ ಹೆಣ್ಣು ಮಕ್ಕಳಿಗೂ ತಂದೆಯೇ ಮೊದಲ ಹೀರೋ. ಆದರೆ ಮಂಗಳೂರಿನಲ್ಲಿ ಕಾಮುಕ ಅಪ್ಪನೊಬ್ಬ ತನ್ನ ಅಪ್ರಾಪ್ತ ಹೆಣ್ಣು ಮಕ್ಕಳಿಬ್ಬರ ಮೇಲೆ ನಿರಂತರ ಅತ್ಯಾಚಾರವೆಸಗಿರುವ ಆರೋಪ ಕೇಳಿ ಬಂದಿದೆ.

rape-on-children-by-father
ಕಾಮುಕ ತಂದೆಯಿಂದ ಅತ್ಯಾಚಾರ
author img

By

Published : Jun 17, 2021, 5:43 PM IST

ಮಂಗಳೂರು: ತನ್ನಿಬ್ಬರು ಅಪ್ರಾಪ್ತ ಪುತ್ರಿಯರ ಮೇಲೆ ಅತ್ಯಾಚಾರವೆಸಗುತ್ತಿದ್ದ ಕಾಮುಕ ತಂದೆಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್​ ನಿವಾಸಿ ಈ ಕೃತ್ಯವೆಸಗಿದವನು. ಈತ ತನ್ನ 17 ಮತ್ತು 18 ವರ್ಷದ ಇಬ್ಬರು ಪುತ್ರಿಯರ ಮೇಲೆ ಕಳೆದ ಒಂದೂವರೆ ವರ್ಷದಿಂದ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿದುಬಂದಿದೆ.

ಮನೆಯಲ್ಲಿ ಪತ್ನಿ ಇಲ್ಲದ ಸಂದರ್ಭದಲ್ಲಿ ಆರೋಪಿ ಈ ಹೇಯ ಕೃತ್ಯ ಎಸಗಿದ್ದಾನೆ. ಆದರೆ ಈ ವಿಷಯವನ್ನು ಪುತ್ರಿಯರು ಯಾರಲ್ಲೂ ಹೇಳಿರಲಿಲ್ಲ. ಇತ್ತೀಚೆಗೆ ಈ ಸಹೋದರಿಯರು ತಾಯಿ ಜೊತೆಗೆ ಮಾವನ ಮನೆಗೆ ತೆರಳಿದಾಗ ಅಲ್ಲಿ ಈ ವಿಷಯ ತಿಳಿಸಿದ್ದಾರೆ.

ವಿಷಯ ತಿಳಿದ ಬಳಿಕ ಬಾಲಕಿಯರ ಮಾವನ ಕಡೆಯವರು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ಮಂಗಳೂರು ಮಹಿಳಾ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಓದಿ:ಬೆಲ್ಲದ್ ​ಫೋನ್ ಕದ್ದಾಲಿಕೆ ಆರೋಪದ ಬೆನ್ನಲ್ಲೇ ಬಿಎಸ್​ವೈ, ಬೊಮ್ಮಾಯಿ ಚರ್ಚೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.