ಪುತ್ತೂರು (ದ.ಕ) : ಫೆ.6ರಂದು ಕೊಡಿಪ್ಪಾಡಿಯ ಫಾರ್ಮ್ ಹೌಸ್‌ವೊಂದಕ್ಕೆ ಸ್ನೇಹಿತರ ಬೀಳ್ಕೊಡುಗೆ ಪಾರ್ಟಿಗೆ ಬಂದಿದ್ದ ಯುವತಿ ಮೇಲೆ ಅತ್ಯಾಚಾರ ನಡೆದಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, ನೊಂದ ಯುವತಿ ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದಾಳೆ.
ಮಂಗಳೂರಿನ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿರುವ ಜಾರ್ಖಂಡ್ ಮೂಲದ ಯುವತಿ, ನೌಕಾಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವರ್ಗಾವಣೆಗೊಂಡ ಸ್ನೇಹಿತರೊಬ್ಬರ ಬೀಳ್ಕೊಡುಗೆ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಪುತ್ತೂರು ಕೊಡಿಪ್ಪಾಡಿಯ ಫಾರ್ಮ್ ಹೌಸ್ಗೆ ಬಂದಿದ್ದರು. ಈ ವೇಳೆ ಸ್ನೇಹಿತರ ಜೊತೆಗಿದ್ದ ವ್ಯಕ್ತಿಯೊಬ್ಬ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ.
ಓದಿ : ಅಪ್ರಾಪ್ತೆ ಮೇಲೆ ಅತ್ಯಾಚಾರ: ಬಾಲಕಿಗೆ ಬೆಂಕಿ ಇಟ್ಟು ಕೊಂದ ಪಾಪಿಗಳು
ಯುವತಿಯಿಂದ ದೂರು ದಾಖಲಿಸಿಕೊಂಡಿರುವ ಪೊಲೀಸರು, ಫೆ.8 ರಂದು ಆರೋಪಿ ಬ್ರಾಯನ್ ರಿಚರ್ಡ್ ಅಮನ್ನಾನನ್ನು ಬಂಧಿಸಿದ್ದಾರೆ.