ETV Bharat / state

ಅಪ್ರಾಪ್ತೆಯನ್ನು ಗರ್ಭಿಣಿಯನ್ನಾಗಿಸಿದ ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಚಾರವೆಸಗಿ ಗರ್ಭಿಣಿಯಾಗಿಸಿದ್ದ ಪ್ರಕರಣದ ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆಯನ್ನು ಮಂಗಳೂರು ಜಿಲ್ಲಾ ಕೋರ್ಟ್​ ತೀರ್ಪು ನೀಡಿದೆ.

ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ
author img

By

Published : Aug 22, 2019, 8:00 PM IST

Updated : Aug 22, 2019, 8:45 PM IST

ಮಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಚಾರವೆಸಗಿ ಗರ್ಭಿಣಿಯಾಗಿಸಿದ್ದ ಪ್ರಕರಣದ ಅಪರಾಧಿಗೆ 10 ವರ್ಷ ಕಠಿಣ ಸಜೆ ಮತ್ತು ಐದು ಸಾವಿರ ರೂ. ದಂಡ ವಿಧಿಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಮೂಲತಃ ರಾಯಚೂರು ಜಿಲ್ಲೆಯವನಾದ,ಮುಚ್ಚೂರು ನೀರುಡೆ ನಿವಾಸಿ ನಾಗಪ್ಪ(25) ಶಿಕ್ಷೆಗೊಳಗಾದವನು. 2016ರ ಏಪ್ರಿಲ್ 21ರಂದು ಬೆಳಗ್ಗೆ 7:15ಕ್ಕೆ ಮನೆಯಲ್ಲಿದ್ದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ.ಬಳಿಕವು ಆರೋಪಿ ಇದೇ ಖಯಾಲಿ ಮುಂದುವರೆಸಿದ್ದರಿಂದ ಬಾಲಕಿ ಗರ್ಭಿಣಿಯಾಗಿದ್ದಳು. ಇದರಿಂದ ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಮನೆಯವರು ವೈದ್ಯರ ಬಳಿ ತಪಾಸಣೆ ನಡೆಸಿದಾಗ ಆಕೆ ಗರ್ಭಿಣಿಯಾದ ವಿಚಾರ ತಿಳಿದು ಬಂದಿತ್ತು.

ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ

ಈ ಸಂದರ್ಭ ಆಕೆಯನ್ನು ವಿಚಾರಸಿದಾಗ ಅತ್ಯಾಚಾರದ ವಿಷಯ ಬಾಯಿಬಿಟ್ಟಿದ್ದಳು. ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ದೀರ್ಘ ಕಾಲದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯ ಈಗ ಅಪರಾಧಿಗೆ ಶಿಕ್ಷೆ ವಿಧಿಸಿದೆ. ನ್ಯಾಯಾಧೀಶರಾದ ಬಿ.ಆರ್. ಪಲ್ಲವಿಯವರು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದು, ಸರ್ಕಾರದ ಪರ ವಕೀಲರಾದ ವೆಂಕಟರಮಣ ಸ್ವಾಮಿ ಸಿ. ವಾದ ಮಂಡಿಸಿದ್ದರು.

Intro:ಮಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿ ಗರ್ಭಿಣಿಯಾಗಿಸಿದ ಪ್ರಕರಣದ ಅಪರಾಧಿಗೆ 10 ವರ್ಷ ಕಠಿಣ ಸಜೆ ಮತ್ತು ಐದು ಸಾವಿರ ರೂ. ದಂಡ ವಿಧಿಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯ (ಪೊಕ್ಸೋ) ಗುರುವಾರ ತೀರ್ಪು ನೀಡಿದೆ.

ಮೂಲತಃ ರಾಯಚೂರು ಜಿಲ್ಲೆಯ ಪ್ರಸ್ತುತ ಮುಚ್ಚೂರು ನೀರುಡೆ ನಿವಾಸಿ ನಾಗಪ್ಪ(25) ಶಿಕ್ಷೆಗೊಳಗಾದ ಆರೋಪಿ.

*ಪ್ರಕರಣದ ವಿವರ:* 2016ರ ಏಪ್ರಿಲ್ 21ರಂದು ಬೆಳಗ್ಗೆ 7:15ಕ್ಕೆ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾನೆ.
ಬಳಿಕ ಆರೋಪಿ ಪದೇಪದೇ ಆಕೆಯ ಮನೆಗೆ ತೆರಳಿ ಅತ್ಯಾಚಾರವೆಸಗಿದ ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದಳು. ಪರಿಣಾಮ ಬಾಲಕಿ ಅಸೌಖ್ಯಳಾಗಿದ್ದು, ಮನೆಯವರು ವೈದ್ಯರ ಬಳಿ ತಪಾಸಣೆ ನಡೆಸಿದಾಗ ಆಕೆ ಗರ್ಭಿಣಿಯಾದ ವಿಚಾರ ತಿಳಿದು ಬಂದಿತ್ತು. ಈ ಸಂದರ್ಭ ಆಕೆಯನ್ನು ವಿಚಾರಣೆ ನಡೆಸಿದಾಗ ಅತ್ಯಾಚಾರದ ವಿಷಯ ಬಾಯಿಬಿಟ್ಟಿದ್ದಳು. ಬಾಲಕಿಗೆ ನಾಲ್ಕು ತಿಂಗಳ ಬಳಿಕ ಗರ್ಭಪಾತವಾಗಿತ್ತು. ಬಜ್ಪೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.

Body:ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಜ್ಪೆ ಠಾಣೆಯ ಹಿಂದಿನ ಇನ್‌ಸ್ಪೆಕ್ಟರ್ ಟಿ.ಡಿ. ನಾಗರಾಜ್ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿ ಬಾಲಕಿಯ ಪೋಷಕರು, ನೆರೆಹೊರೆಯವರು ಸೇರಿದಂತೆ 19 ಮಂದಿಯನ್ನು ಸಾಕ್ಷಿಯಾಗಿ ಪರಿಗಣಿಸಿತು. ಆದರೆ ಬಾಲಕಿ, ಪೋಷಕರು, ನೆರೆಹೊರೆಯವರ ಅಂತಿಮ ಕ್ಷಣದಲ್ಲಿ ಸರಿಯಾದ ಸಾಕ್ಷಿ ಹೇಳುವಲ್ಲಿ ವಿಫಲರಾಗಿದ್ದು ವೈದ್ಯರು, ತನಿಖಾಧಿಕಾರಿ ಹೇಳಿಕೆಗಳು ಹಾಗೂ ಡಿಎನ್‌ಎ ಆಧಾರದ ಮೇಲೆ ಶಿಕ್ಷೆಯಾಗಿದೆ. ಬಾಲಕಿ ಹಾಗೂ ಪೋಷಕರು ಪ್ರಕರಣಕ್ಕೆ ಸಂಬಂಧಿಸಿ ಬಲವಾದ ಸಾಕ್ಷಿ ಹೇಳದ ಹಿನ್ನೆಲೆಯಲ್ಲಿ ಬಾಲಕಿ ಪರಿಹಾರ ದೊರಕಿಲ್ಲ.

2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್. ಪಲ್ಲವಿ ಪ್ರಕರಣದ ವಿಚಾರಣೆ ನಡೆಸಿ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 10 ವರ್ಷ ಕಠಿಣ ಸಜೆ ಮತ್ತು ಐದು ಸಾವಿರ ರೂ. ದಂಡ ವಿಧಿಸಿದೆ. ಸರಕಾರದ ಪರವಾಗಿ ವೆಂಕಟರಮಣ ಸ್ವಾಮಿ ಸಿ. ವಾದಿಸಿದ್ದರು.

Reporter_Vishwanath PanjimogaruConclusion:
Last Updated : Aug 22, 2019, 8:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.