ETV Bharat / state

ಬಾರ್ ಮೇಲೆ ದಾಳಿ: 1.53 ಲಕ್ಷ ರೂ. ಮೌಲ್ಯದ 50 ಬಾಕ್ಸ್ ಮದ್ಯ ಸಹಿತ ಓರ್ವ ವಶಕ್ಕೆ

ಅಪಾರ ಪ್ರಮಾಣದ ಮದ್ಯವನ್ನು ತೊಕ್ಕೊಟ್ಟಿನ ಹೈಸ್ಪಿರಿಟ್ ವೈನ್ಸ್ ಬಾರ್​ನಿಂದ ತರಲಾಗಿತ್ತು. ಆದರೆ ಯಾವುದೇ ಮಾನ್ಯತೆ ಹೊಂದಿರುವ ಬಿಲ್​ಗಳಿಲ್ಲದೆ ನಿಸರ್ಗ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ಸಂಗ್ರಹಿಸಿ ಇಡಲಾಗಿತ್ತು.

raid on the bar in mangalore , one arrest
1.53 ಲಕ್ಷ ರೂ. ಮೌಲ್ಯದ 50 ಬಾಕ್ಸ್ ಮದ್ಯ ಸಹಿತ ಓರ್ವ ವಶಕ್ಕೆ
author img

By

Published : May 1, 2021, 1:37 AM IST

ಮಂಗಳೂರು: ನಗರದ ತಲಪಾಡಿಯಲ್ಲಿನ ನಿಸರ್ಗ ಬಾರ್ ಮತ್ತು ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿರುವ ಪೊಲೀಸರು 1.53 ಲಕ್ಷ ರೂ.ಮೌಲ್ಯದ 50 ಪಟ್ಟಿಗೆ ಮದ್ಯ ಸಹಿತ ಓರ್ವನನ್ನು ವಶಪಡಿಸಿಕೊಂಡಿದ್ದಾರೆ.

ಬಾರ್ ಕ್ಯಾಷಿಯರ್ ಮಡಿಕೇರಿ ಮೂಲದ ಚರಣ್ (22) ಬಂಧಿತ ಆರೋಪಿ. ಇಷ್ಟೊಂದು ಪ್ರಮಾಣದ ಮದ್ಯವನ್ನು ತೊಕ್ಕೊಟ್ಟಿನ ಹೈಸ್ಪಿರಿಟ್ ವೈನ್ಸ್ ಬಾರ್​ನಿಂದ ತರಲಾಗಿತ್ತು. ಆದರೆ ಯಾವುದೇ ಮಾನ್ಯತೆ ಹೊಂದಿರುವ ಬಿಲ್​ಗಳಿಲ್ಲದೆ ನಿಸರ್ಗ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಕಳೆದ ಮೂರು ತಿಂಗಳಿನಿಂದ ಇಲ್ಲಿ ಮದ್ಯವನ್ನು ಸಂಗ್ರಹಿಸಿ ಕೇರಳಕ್ಕೆ ಸಾಗಿಸಲಾಗಿತ್ತು ಎಂದು ತಿಳಿದು ಬಂದಿದೆ‌.

1.53 ಲಕ್ಷ ರೂ. ಮೌಲ್ಯದ 50 ಬಾಕ್ಸ್ ಮದ್ಯ ಸಹಿತ ಓರ್ವ ವಶಕ್ಕೆ

ನಿಸರ್ಗ ಬಾರ್ ಮತ್ತು ರೆಸ್ಟೋರೆಂಟ್​ನ ಮಾಲೀಕ ದಿವ್ಯರಾಜ್ ಶೆಟ್ಟಿ ಹಾಗೂ ತೊಕ್ಕೊಟ್ಟು ಹೈಸ್ಪಿರಿಟ್ ವೈನ್ಸ್ ಬಾರ್​ನ ಮಾಲಕ ರೋಹಿತ್ ಅವರ ಮೇಲೆ ಕೂಡಾ ಪ್ರಕರಣ ದಾಖಲಾಗಿದ್ದು, ಆದಷ್ಟು ಶೀಘ್ರದಲ್ಲಿ ಅವರನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.