ETV Bharat / state

ಬಡ ರೋಗಿಗಳ ಚಿಕಿತ್ಸೆಗೆ ಪಾಕೆಟ್​ ಮನಿ 10 ಸಾವಿರ ನೀಡಿ ಹುಟ್ಟುಹಬ್ಬ ಆಚರಿಸಿದ 'ಪುತ್ತೂರಿನ ಮುತ್ತು'

author img

By

Published : Jul 2, 2021, 11:27 PM IST

ತಾನು ಕೂಡಿಟ್ಟಿದ್ದ ಸುಮಾರು 10 ಸಾವಿರ ಹಣವನ್ನು ಬಡ ರೋಗಿಗಳ ಚಿಕಿತ್ಸಾ ವೆಚ್ಚ ಭರಿಸಲು ನೀಡಿ ಪುತ್ತೂರಿನ ಬಾಲಕಿಯೋರ್ವಳು ತನ್ನ ಕೈಲಾದ ಸಹಾಯ ಮಾಡುವ ಮೂಲಕ ಗಮನ ಸೆಳೆದಿದ್ದಾಳೆ.

puttur girl help to poor patients
ಪುತ್ತೂರಿನ ಬಾಲಕಿ ಸಹಾಯಹಸ್ತ

ಪುತ್ತೂರು: ಸಾಮಾನ್ಯವಾಗಿ ಮಕ್ಕಳು ತಮ್ಮ ಹುಟ್ಟುಹಬ್ಬವನ್ನು ಸ್ನೇಹಿತರೊಂದಿಗೆ ಅದ್ದೂರಿಯಾಗಿ ಆಚರಿಸಿಕೊಳ್ಳಲು ಬಯಸುತ್ತಾರೆ. ಆದರೆ ಇಲೊಬ್ಬ ಬಾಲಕಿ ತಾನು ಕೂಡಿಟ್ಟಿದ್ದ ಹಣವನ್ನು ಬಡ ರೋಗಿಗಳ ಚಿಕಿತ್ಸೆಗೆ ಬಳಕೆಯಾಗಲೆಂದು ವೈದ್ಯರಿಗೆ ನೀಡಿದ್ದಾಳೆ. ಈ ಮೂಲಕ ಹುಟ್ಟಿದ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಂಡು ಖುಷಿ ಪಟ್ಟಳು.

ಪುತ್ತೂರಿನ ಬಾಲಕಿ ಸಹಾಯಹಸ್ತ

ಈಕೆ ದಿಶಾ. ಪುತ್ತೂರಿನ ವಿವೇಕಾನಂದ ಶಾಲೆಯಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಈ ಪುಟ್ಟ ಬಾಲಕಿಯನ್ನು ನೋಡುತ್ತಿದ್ದರೆ ಬೆಳೆಯ ಸಿರಿ ಮೊಳಕೆಯಲ್ಲಿ ಅನ್ನೋ ಗಾದೆ ಮಾತು ನೆನಪಿಗೆ ಬರುತ್ತೆ. ಇದಕ್ಕೆ ಕಾರಣವೂ ಇದೆ. ತನ್ನ ಹುಟ್ಟುಹಬ್ಬವನ್ನು ಸಮಾಜಮುಖಿ ಕಾರ್ಯದ ಮೂಲಕ ಸಂಭ್ರಮಿಸಿದ್ದು ಇದಕ್ಕೆ ಕಾರಣ. ಹೌದು, ತನಗೆ ಪೋಷಕರು ನೀಡಿದ್ದ ಪಾಕೆಟ್‌ ಮನಿಯನ್ನು ಈಕೆ ಬಡ ರೋಗಿಗಳ ಚಿಕಿತ್ಸಾ ವೆಚ್ಚಕ್ಕೆ ನೀಡಿ ಕೈಲಾದ ಸಹಾಯ ಮಾಡಿದ್ದಾಳೆ.

puttur girl help to poor patients
ಪುತ್ತೂರಿನ ಬಾಲಕಿ ಸಹಾಯಹಸ್ತ

ಬಾಲಕಿ ದಿಶಾ, ಬನ್ನೂರಿನ ಖ್ಯಾತ ಯಕ್ಷಗಾನ ಕಲಾವಿದ ದಿ.ಶ್ರೀಧರ್ ಭಂಡಾರಿ ಅವರ ಮೊಮ್ಮಗಳು. ಈಕೆಯ ತಾಯಿ ಡಾ.ಅನಿಲಾ ಅವರು ರಾಜ್ಯ ಜನೌಷಧಿ ನೋಡೆಲ್ ಅಧಿಕಾರಿಯಾಗಿದ್ದು, ತಂದೆ ದೀಪಕ್ ಶೆಟ್ಟಿ ಉದ್ಯಮಿಯಾಗಿದ್ದಾರೆ. ಕೊರೊನಾದ ಸಂಕಷ್ಟ ಕಾಲದಲ್ಲಿ ಬಡ ರೋಗಿಗಳಿಗೆ ಔಷಧಿ ವೆಚ್ಚ ಭರಿಸುವ ಮತ್ತು ಚಿಕಿತ್ಸೆ ಸಂದರ್ಭದಲ್ಲಿ ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳನ್ನು ಪತ್ರಿಕೆ, ಮಾಧ್ಯಮಗಳ ಮೂಲಕ ಈ ಬಾಲಕಿ ತಿಳಿದುಕೊಂಡಿದ್ದಾಳೆ. ಇದೇ ಕಾರಣಕ್ಕೆ ತನ್ನ ಕೈಲಾದ ಸಹಾಯ ಮಾಡಲು ಪುಟ್ಟ ಬಾಲಕಿ ಮುಂದಾಗಿದ್ದಾಳೆ. ಅದಕ್ಕಾಗಿ ತಾನು ಕೂಡಿಟ್ಟಿದ್ದ ಹಣವನ್ನು ವೈದ್ಯರ ದಿನದಂದು ಪುತ್ತೂರಿನ ಆದರ್ಶ ಆಸ್ಪತ್ರೆಯ ಡಾ.ಎಂ.ಕೆ.ಪ್ರಸಾದ್ ಅವರಿಗೆ ಹಸ್ತಾಂತರಿಸಿ ವೈದ್ಯರಿಗೆ ಶುಭಾಶಯ ತಿಳಿಸಿದಳು.

ಹುಟ್ಟುಹಬ್ಬಕ್ಕೆ ತನ್ನ ತಾತ, ಅಜ್ಜಿ, ತಂದೆ-ತಾಯಿ, ಮಾವ ನೀಡಿದ್ದ ಹಣವನ್ನು ಕೂಡಿಟ್ಟಿದ್ದು, ಸುಮಾರು10 ಸಾವಿರ ರೂ.ಗಳಷ್ಟು ಹಣವನ್ನು ಬಾಲಕಿ ದಿಶಾ ಮತ್ತು ಆಕೆಯ ತಾಯಿ ವೈದ್ಯರಿಗೆ ನೀಡಿದರು. ಬಳಿಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.