ETV Bharat / state

BE​ ಪದವೀಧರನಿಂದ ನೂತನ ಪ್ರಯೋಗ: ಸಗಣಿ ಬಳಸಿ ಕೃಷಿಯಲ್ಲಿ ಉತ್ತಮ ಇಳುವರಿ ಪಡೆದ ಯುವ ಕೃಷಿಕ

ಪುತ್ತೂರಿನ ಮುಂಡೂರು ಗ್ರಾಮದ ಹಿಂದಾರು ನಿವಾಸಿ ಜಯಗುರು ಆಚಾರ್ ಎಂಬ ಇಂಜಿನಿಯರ್​ ಪದವೀಧರ ಯುವಕ ಸಗಣಿ ಬಳಸಿ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.

A young farmer from Puttur
ಪುತ್ತೂರಿನ ಯುವಕೃಷಿಕ
author img

By

Published : Oct 14, 2021, 5:20 PM IST

Updated : Oct 14, 2021, 7:18 PM IST

ಪುತ್ತೂರು : ರಾಸಾಯನಿಕ ರಸಗೊಬ್ಬರಕ್ಕೆ ಪರ್ಯಾಯವಾಗಿ ಸಗಣಿ ಹುಡಿಯನ್ನು ಬಳಸಿ ಉತ್ತಮ ಇಳುವರಿ ಪಡೆಯಬಹುದು ಎಂಬುದನ್ನು ತಾಲೂಕಿನ ಇಂಜಿನಿಯರಿಂಗ್​ ಪದವೀಧರ ಯುವ ಕೃಷಿಕ ತೋರಿಸಿಕೊಟ್ಟಿದ್ದಾರೆ.

ಪುತ್ತೂರಿನ ಮುಂಡೂರು ಗ್ರಾಮದ ಹಿಂದಾರು ನಿವಾಸಿ ಜಯಗುರು ಆಚಾರ್ ಎಂಬ ಯುವ ಕೃಷಿಕ, ರಾಸಾಯನಿಕ ಗೊಬ್ಬರಕ್ಕೆ ಗುಡ್‌ಬೈ ಹೇಳಿ ಸಗಣಿ ಗೊಬ್ಬರವನ್ನು ಕೃಷಿಗೆ ಬಳಸಿ ಉತ್ತಮ ಫಸಲು ಪಡೆದಿದ್ದಾರೆ. ಈ ಮೂಲಕ ಭೂಮಿಯ ಫಲವತ್ತತೆ ಹೆಚ್ಚಿಸಿ ಸಾವಯವ ಕೃಷಿಗೆ ಹೊಸ ರೂಪ ನೀಡಿದ್ದಾರೆ.

ಸಗಣಿ ಹುಡಿ ಬಳಸಿ ಕೃಷಿಯಲ್ಲಿ ಉತ್ತಮ ಇಳುವರಿ ಪಡೆದ ಯುವಕೃಷಿಕ

ಕೃಷಿ ತೋಟಗಳಲ್ಲಿ ರಾಸಾಯನಿಕ ಗೊಬ್ಬರದ ಬಳಕೆ ಆರಂಭವಾದಾಗಿನಿಂದ ಭೂಮಿಯ ಫಲವತ್ತತೆ ನಾಶವಾಗ ತೊಡಗಿತು. ಈಗ ಮತ್ತೆ ಸಗಣಿ ಬಳಸುವ ಮೂಲಕ ಸಾವಯವ ಕೃಷಿಯ ಮಹತ್ವವನ್ನು ಮುನ್ನೆಲೆಗೆ ತರಬೇಕು ಎನ್ನುವುದು ಜಯಗುರು ಅವರ ಮುಖ್ಯ ಉದ್ದೇಶವಾಗಿದೆ.

ಸಗಣಿ ಹುಡಿ ತಯಾರಿಸುವ ವಿಧಾನ:

ಹಟ್ಟಿಯಿಂದ ಸಗಣಿಯನ್ನು ಸಂಗ್ರಹಿಸಿ ತೊಟ್ಟಿಗೆ ಹಾಕಿ ಪಂಪ್ ಬಳಸಿ ಸಗಣಿಯಿಂದ ನೀರಿನ ಅಂಶವನ್ನು ಬೇರ್ಪಡಿಸುವ ಯಂತ್ರಕ್ಕೆ ಹಾಯಿಸಲಾಗುತ್ತದೆ. ಈ ಯಂತ್ರದಲ್ಲಿ ಒಂದು ಕಡೆ ಸಗಣಿಯ ಹುಡಿ ತಯಾರಾದರೆ, ಇನ್ನೊಂದು ಕಡೆ ಸಗಣಿಯ ನೀರಿನ ಅಂಶ ಪ್ರತ್ಯೇಕ ಟ್ಯಾಂಕ್​​​ನಲ್ಲಿ ಶೇಖರಣೆಗೊಳ್ಳುತ್ತದೆ. ತಮ್ಮ ತೋಟಕ್ಕೆ ಬಳಸಿ ಉಳಿದ ಸೆಗಣಿ ಹುಡಿ ಗೊಬ್ಬರವನ್ನು ಮಾರಾಟ ಮಾಡಲಾಗುತ್ತದೆ. ಸುಮಾರು 40 ಕೆಜಿ ಪ್ಯಾಕೆಟ್ ಮಾಡಿ ಮಾರಾಟ ಮಾಡುತ್ತಿದ್ದಾರೆ.

ಅಧಿಕ ಲಾಭ ಪಡೆಯುತ್ತಿರುವ ಕೃಷಿಕ:

ತಿಂಗಳಿಗೆ ಅಂದಾಜು 750 ರಿಂದ 1000 ಪ್ಯಾಕೆಟ್ ಮಾರಾಟವಾಗುತ್ತಿದೆ. ಜೊತೆಗೆ ಗೋಮೂತ್ರ, ದನಗಳನ್ನು ತೊಳೆದ ನೀರು, ಸಗಣಿ ನೀರು ಸೇರಿಸಿ ಸ್ಲರಿ ತಯಾರಿಸಲಾಗುತ್ತಿದೆ. ಟ್ಯಾಂಕ್ ಮೂಲಕ ಸ್ಲರಿಯನ್ನು ತೋಟದಲ್ಲಿರುವ ಅಡಕೆ, ತೆಂಗು, ತರಕಾರಿ ತೋಟಕ್ಕೆ ಬಳಸುವ ಜೊತೆಗೆ 25 ಕಿ.ಮೀ ಸುತ್ತಲಿನ ತೋಟಗಳಿಗೆ ಟ್ಯಾಂಕರ್ ಮೂಲಕ ಪೂರೈಕೆ ಮಾಡುತ್ತಿದ್ದಾರೆ.

ಸಗಣಿ ಹುಡಿಯಂತೆ ಸ್ಲರಿಗೂ ಬೇಡಿಕೆ ಇದೆ. ಸಗಣಿ ಗೊಬ್ಬರ ಬಳಸಲು ಆರಂಭಿಸಿದ ಬಳಿಕ ತೋಟಕ್ಕೆ ರಾಸಾಯನಿಕ ಗೊಬ್ಬರ ಹಾಕುತ್ತಿಲ್ಲ. ಇದರಿಂದ ಅಡಕೆ ಕೊಳೆರೋಗವೂ ಇಳಿಮುಖಗೊಂಡಿದೆ ಎಂದು ಜಯಗುರು ಹೇಳಿದ್ದಾರೆ.

Puttur young farmer who has a good yield in agriculture using dung

ಹೆಚ್ಚಳಗೊಂಡ ಇಳುವರಿ:

ಕಳೆದ ಎರಡು ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ಜಯಗುರು ಅವರ ಮನೆಯಲ್ಲಿ ಸುಮಾರು 130 ಗೋವುಗಳಿವೆ. ದಿನಕ್ಕೆ 750 ಲೀ. ಹಾಲು ಡೈರಿಗೆ ನೀಡುತ್ತಿದ್ದಾರೆ. ಸಗಣಿ ಹುಡಿ ಗೊಬ್ಬರ ಮಾಡುವುದರಿಂದ ಸಾಗಾಣಿಕೆಗೂ ಸುಲಭವಾಗುತ್ತದೆ. ವಾಸನೆ ಇರುವುದಿಲ್ಲ. ತೋಟಕ್ಕೆ ಸುಲಭವಾಗಿ ಹಾಕಬಹುದು. ಜೊತೆಗೆ ಗೋ ನಂದಾಜಲವನ್ನೂ ಕೂಡಾ ಬಳಸುತ್ತಿದ್ದು, ಇವೆಲ್ಲದರ ಬಳಕೆಯಿಂದ ತೋಟದಲ್ಲಿ ಇಳುವರಿ ಹೆಚ್ಚಳಗೊಂಡಿದೆ. ಭೂಮಿಯ ಫಲವತ್ತತೆ ಅಧಿಕವಾಗಿದೆ. ಮುಂದಕ್ಕೆ ಇದೇ ಪ್ರಯೋಗಗಳನ್ನು ದೊಡ್ಡ ಮಟ್ಟದಲ್ಲಿ ಮುಂದುವರಿಸುವ ಉದ್ದೇಶವನ್ನು ಜಯಗುರು ಹೊಂದಿದ್ದಾರೆ.

ಕೆಲಸ ಬಿಟ್ಟು ತಂದೆಗೆ ಸಾಥ್​ ನೀಡಿದ ಪುತ್ರ:

ಇಂಜಿನಿಯರಿಂಗ್ ಪದವೀಧರ ಜಯಗುರು ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದರು. ಆದರೆ, 2019ರಲ್ಲಿ ವೃತ್ತಿಗೆ ವಿದಾಯ ಹೇಳಿ ತನ್ನ ತಂದೆ ನಡೆಸುತ್ತಿದ್ದ ಹೈನುಗಾರಿಕೆಗೆ ಸಾಥ್ ನೀಡಲು ಮುಂದಾದರು. ಕೃಷಿ ಭೂಮಿಯನ್ನು ರಾಸಾಯನಿಕ ಮುಕ್ತ ಮಾಡಬೇಕು ಎಂಬ ಕನಸು ಹೊತ್ತು ಈಗ ಸಾವಯವ ಕೃಷಿಯತ್ತ ಒಲವು ತೋರಿದ್ದಾರೆ. ಅದಕ್ಕಾಗಿ ಸಗಣಿ ಗೊಬ್ಬರದ ಹಲವು ಪ್ರಯೋಗಕ್ಕೆ ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ದ್ರವ ರೂಪದ ಗೊಬ್ಬರ ತಯಾರಿಸುವ ಪ್ರಯೋಗ ಆರಂಭಿಸಿದ್ದಾರೆ. ಆ ಮೂಲಕ ಗೋ ಆಧಾರಿತ ಕೃಷಿ ಕ್ರಾಂತಿಗೆ ಮುಂದಡಿಯಿಟ್ಟಿದ್ದಾರೆ.

ಇದನ್ನೂ ಓದಿ: ಸರಳ ಜಂಬೂಸವಾರಿಗೆ ಸಿದ್ಧತೆಗಳು ಪೂರ್ಣ: ನಾಳೆ ಚಿನ್ನದ ಅಂಬಾರಿ ಹೊರಲು ಅಭಿಮನ್ಯು ಫಿಟ್

Last Updated : Oct 14, 2021, 7:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.