ETV Bharat / state

ಸಂಕಷ್ಟದ ಸರಮಾಲೆಗಳ ಮಧ್ಯೆ ಕುಸಿಯದಿರಲಿ SSLC ವಿದ್ಯಾರ್ಥಿನಿಯ ಶಿಕ್ಷಣದ ಕನಸು - ಎಸ್​ಎಸ್​​ಎಲ್​​ಸಿ ವಿದ್ಯಾರ್ಥಿನಿ ದೀಕ್ಷಾ ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸುರಿದ ಮಳೆಗೆ ಎಸ್​ಎಸ್​​ಎಲ್​ಸಿ ವಿದ್ಯಾರ್ಥಿನಿಯ ಮನೆಯ ಒಂದು ಭಾಗ ಧರೆಗುರುಳಿದೆ. ಮನೆಯೇ ಬಿದ್ದು ಹೋದ ಮೇಲೆ ಇನ್ನು ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವುದಾದರೂ ಎಲ್ಲಿ ಎನ್ನುವ ಆತಂಕದಲ್ಲಿದ್ದಾಳೆ ವಿದ್ಯಾರ್ಥಿನಿ.

puttur
ಮನೆ ಕುಸಿತ
author img

By

Published : Jun 30, 2021, 5:33 PM IST

Updated : Jun 30, 2021, 7:09 PM IST

ಪುತ್ತೂರು: ರಾಜ್ಯ ಶಿಕ್ಷಣ ಸಚಿವರು ರಾಜ್ಯದಲ್ಲಿ SSLC ಪರೀಕ್ಷೆ ಘೋಷಣೆ ಮಾಡಿದ ದಿನವೇ ವಿದ್ಯಾರ್ಥಿನಿಯೊಬ್ಬಳಿಗೆ ಆತಂಕ ಹೆಚ್ಚಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸೋಮವಾರ ಸುರಿದ ಮಳೆಗೆ ವಿದ್ಯಾರ್ಥಿನಿಯ ಮನೆಯ ಒಂದು ಭಾಗ ಧರೆಗುರುಳಿದೆ.

ಇದರಿಂದಾಗಿ ಇನ್ನು ಯಾವ ಸೂರಿನಡಿ ಕುಳಿತು ಪರೀಕ್ಷೆಗೆ ತಯಾರಿ ಮಾಡುವುದು ಎನ್ನುವ ಆತಂಕ ಈ ವಿದ್ಯಾರ್ಥಿನಿಯನ್ನು ಕಾಡುತ್ತಿದೆ. ಮನೆಯ ಇನ್ನೊಂದು ಭಾಗವೂ ಬೀಳುವ ಹಂತದಲ್ಲಿದ್ದು, ಪರೀಕ್ಷೆ ಬರೆಯೋದೋ, ಮನೆ ಉಳಿಸೋದೋ ಎನ್ನುವ ಗೊಂದಲ ವಿದ್ಯಾರ್ಥಿನಿಯದ್ದಾಗಿದೆ.

ರಾಜ್ಯದಲ್ಲಿ ಕೊರೊನಾ ಸಂಕಷ್ಟದ ನಡುವೆಯೇ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜ್ಯದಲ್ಲಿ ಜುಲೈ 19 ರಿಂದ 22 ರ ತನಕ ಎಸ್​ಎಸ್​​ಎಲ್​​ಸಿ ಪರೀಕ್ಷೆಗಳನ್ನು ನಡೆಸಲು ದಿನಾಂಕ ಪ್ರಕಟಿಸಿದ್ದಾರೆ.

ಆದರೆ, ಪರೀಕ್ಷೆ ಬರೆಯುವ ಸಂದರ್ಭದಲ್ಲೇ ಪುತ್ತೂರು ತಾಲೂಕಿನ ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಬುರ್ಗ ಎಂಬಲ್ಲಿನ ವಿದ್ಯಾರ್ಥಿನಿ ದೀಕ್ಷಾ ಮನೆ ಕುಸಿದಿರುವ ಕಾರಣ ಪರೀಕ್ಷೆ ಹೇಗೆ ಬರೆಯೋದು ಎಂದು ದಾರಿ ತೋಚದಂತಾಗಿದೆ.

SSLC ವಿದ್ಯಾರ್ಥಿನಿಯ ಮನೆ ಕುಸಿತ

ಸೋಮವಾರ ಪುತ್ತೂರು ಭಾಗದಲ್ಲಿ ಸುರಿದ ಭಾರಿ ಮಳೆಯಿಂದಾಗಿ ವಿದ್ಯಾರ್ಥಿನಿ ದೀಕ್ಷಾ ಮನೆಯ ‍ಒಂದು ಭಾಗ ಸಂಪೂರ್ಣ ಕುಸಿದಿದೆ. ಪ್ಲಾಸ್ಟಿಕ್ ಹೊದಿಕೆಯಲ್ಲಿರುವ ಈ ಮನೆಯ ಚಾವಣಿಯೂ ಇಂದೋ, ನಾಳೆಯೋ ಕುಸಿಯುವ ಭೀತಿಯಲ್ಲಿದೆ.

ಕುಸಿದ ಮನೆನು ದುರಸ್ತಿ ಮಾಡಲೂ ಹಣವಿಲ್ಲದ ಪರಿಸ್ಥಿತಿಯಲ್ಲಿ ದೀಕ್ಷಾ ಕುಟುಂಬವಿದೆ. ದೀಕ್ಷಾ ತಂದೆ ದುಡಿಯುವ ಶಕ್ತಿ ಕಳೆದುಕೊಂಡಿದ್ದು, ತಾಯಿ ಮನೆಯಲ್ಲಿ ಬೀಡಿ ಕಟ್ಟಿ ಮನೆ ಮಂದಿ ಸಾಕುತ್ತಿದ್ದಾರೆ. ದೀಕ್ಷಾಳಿಗೆ ಎಂಟನೇ ತರಗತಿಯಲ್ಲಿ ಕಲಿಯುತ್ತಿರುವ ಸಹೋದರನೂ ಇದ್ದು, ಆತನ ವಿದ್ಯಾಭ್ಯಾಸದ ಹೊಣೆಯೂ ಬಡ ತಾಯಿಯ ಮೇಲಿದೆ.

ದೀಕ್ಷಾ ಮನೆ ಪರಿಸ್ಥಿತಿ ಸರಿಯಿಲ್ಲದ ಕಾರಣ, ದೂರದ ತನ್ನ ಮಾವನ ಮನೆಯಲ್ಲಿ ಉಳಿದುಕೊಂಡಿದ್ದಾಳೆ. ಆದರೆ, ಇದೀಗ ತವರಿಗೆ ಬಂದು ಪರೀಕ್ಷೆಯ ತಯಾರಿಯಲ್ಲಿ ತೊಡಗಿಕೊಂಡಿದ್ದು, ಮನೆಯೇ ಬಿದ್ದು ಹೋದ ಮೇಲೆ ಇನ್ನು ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವುದಾದರೂ ಎಲ್ಲಿ ಎನ್ನುವ ಗೊಂದಲದಲ್ಲಿದ್ದಾಳೆ. ಮನೆಯ ಪರಿಸ್ಥಿತಿ ಈ ರೀತಿ ಇರುವಾಗ ಹೇಗೆ ಪರೀಕ್ಷೆ ಬರೆಯಲಿ ಎನ್ನುವ ನಿರಾಸೆಯಲ್ಲಿರುವ ದೀಕ್ಷಾ ನೆರವಿಗಾಗಿ ಅಂಗಲಾಚುತ್ತಿದ್ದಾಳೆ.

ಅರ್ಧ ಬಿದ್ದ ಮನೆಯ ಮುಂದೆ ನಿಂತು ಮನೆಗೆ ಭೇಟಿ ನೀಡುವವರಲ್ಲಿ ತನ್ನ ಸಂಕಷ್ಟನು ದೀಕ್ಷಾ ತೋಡಿಕೊಳ್ಳುತ್ತಿದ್ದಾಳೆ. ಮಳೆಗೆ ಬಿದ್ದ ಮನೆಯಲ್ಲಿ ವಾಸಿಸೋದು ಸುರಕ್ಷಿತವಲ್ಲ ಎನ್ನುವ ಕಾರಣಕ್ಕೆ ಇದೀಗ ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಹಾಗೂ ತಂಡ ದೀಕ್ಷಾ ಹಾಗೂ ಆಕೆಯ ಮನೆಯವರನ್ನು ಗ್ರಾಮ ಪಂಚಾಯತ್ ಸಭಾಭವನಕ್ಕೆ ತಾತ್ಕಾಲಿಕವಾಗಿ ಶಿಫ್ಟ್ ಮಾಡಿದೆ.

ಅಲ್ಲದೇ ಪಂಚಾಯತ್ ಮೂಲಕ ಮನೆಯ ತಾತ್ಕಾಲಿಕ ದುರಸ್ತಿಗೆ ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದೆ. ಗ್ರಾಮಸ್ಥರೂ ಮನೆಯ ದುರಸ್ತಿಗೆ ಸಹಾಯ ಮಾಡುವ ಆಶ್ವಾಸನೆಯನ್ನೂ ನೀಡಿದ್ದಾರೆ.

ತಲೆ ತುಂಬಾ ಮನೆಯ ಸಮಸ್ಯೆಯನ್ನೇ ತುಂಬಿಕೊಂಡಿರುವ ದೀಕ್ಷಾಳ ಪರೀಕ್ಷೆ ಬರೆಯುವಂತಾಗಲು ಸರ್ಕಾರ ನೆರವಿಗೆ ನಿಲ್ಲಬೇಕಿದೆ. ಕೊರೊನಾ ಸಂಕಷ್ಟದ ನಡುವೆ ಪ್ರಾಕೃತಿಕ ವಿಕೋಪವೂ ದೀಕ್ಷಾಳ ಕುಟುಂಬಕ್ಕೆ ಭಾರಿ ಹೊಡೆತ ನೀಡಿದ್ದು, ಈ ಬಡ ಕುಟುಂಬಕ್ಕೆ ಸಹಾಯದ ಅಗತ್ಯವೂ ಇದೆ.

ಸಹಾಯ ಮಾಡಲು ಇಚ್ಛಿಸುವ ದಾನಿಗಳು ಅಕೌಂಟ್ ನಂಬರ್: 83740100012736 - ಇದಕ್ಕೆ ಸಹಾಯಧನ ನೀಡಿ ಬಡ ವಿದ್ಯಾರ್ಥಿನಿಯ ಬಾಳಿನಲ್ಲಿ ಹೊಸ ಬೆಳಕು ಮೂಡಿಸಲು ನೆರವಾಗಬೇಕಾಗಿದೆ.

Last Updated : Jun 30, 2021, 7:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.