ETV Bharat / state

ಪುತ್ತೂರಿನ ಕಾಲೇಜಿನಲ್ಲಿ ಹೊಡೆದಾಟ ಪ್ರಕರಣ: ಪೊಲೀಸ್​ ಠಾಣೆಯೆದುರು ಜಮಾಯಿಸಿದ ಹಿಜಾವೇ ಕಾರ್ಯಕರ್ತರು - hindu jagarana vedike activits argues with puttur police

ಪುತ್ತೂರಿನ ಕೊಂಬೆಟ್ಟು ಜ್ಯೂನಿಯರ್‌ ಕಾಲೇಜ್‌ ವಿದ್ಯಾರ್ಥಿಗಳ ಹೊಡೆದಾಟ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯೆದುರು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಜಮಾಯಿಸಿ ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದಾರೆ.

puttur junior college students case updates
ಪೊಲೀಸ್​ ಠಾಣೆಯೆದುರು ಜಮಾಯಿಸಿದ ಹಿಜಾವೇ ಕಾರ್ಯಕರ್ತರು
author img

By

Published : Nov 27, 2021, 12:26 PM IST

ಪುತ್ತೂರು:ಕೊಂಬೆಟ್ಟು ಜೂನಿಯರ್​ ಕಾಲೇಜ್‌ ವಿದ್ಯಾರ್ಥಿಗಳ ಹೊಡೆದಾಟ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಹಿಂದು ಧರ್ಮದ ವಿದ್ಯಾರ್ಥಿಗಳನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆ ತರಲಾಗಿದೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪುತ್ತೂರು‌ ಮಹಿಳಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ನ .26 ರಂದು ಸಂಜೆ ನಡೆದಿದೆ.

ಈ ವೇಳೆ ಪುತ್ತೂರು ಡಿವೈಎಸ್ಪಿ ಗಾನಾ ಪಿ ಹಾಗೂ ಹಿಂದೂ ಜಾಗರಣ ವೇದಿಕೆ ಮುಖಂಡ ಅಜಿತ್‌ ರೈ ಹೊಸಮನೆ ಮತ್ತು ಇತರ ಮುಖಂಡರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಪುತ್ತೂರು ನಗರ ಅಧ್ಯಕ್ಷ ಪಿಜಿ. ಜಗನ್ನಿವಾಸ ರಾವ್‌ ಕೂಡ ಹಿಂಜಾವೇ ಕಾರ್ಯಕರ್ತರನ್ನು ಸಮಧಾನ ಪಡಿಸಲು ಪ್ರಯತ್ನಿಸಿದರು. ಆದರೆ, ಅವರ ಸಮಾಜಾಯಿಷಿಗೂ ಕೂಡ ಒಪ್ಪದ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿದ ಮುಸ್ಲಿಂ ಪರ ಸಂಘಟನೆಗಳ ಕಾರ್ಯಕರ್ತರನ್ನು ಇನ್ನೂ ಯಾಕೇ ಬಂಧಿಸಿಲ್ಲ ಎಂದು ಪ್ರಶ್ನಿಸಿದರು.

ಈ ವೇಳೆ, ಅವರು ಮುಸ್ಲಿಂ ಪರ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಹೆಸರು ನೀಡಿ ದೂರು ಕೊಟ್ಟಿಲ್ಲ , ಹಾಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದರು. ಸಿಸಿಟಿವಿ ವಿಡಿಯೋ ನೋಡಿ ದೂರು ನೀಡಬೇಕಿತ್ತು ಎಂದು ಕಾರ್ಯಕರ್ತರು ಮರು ಉತ್ತರಿಸಿದ್ದಾರೆ.

ಮಹಿಳಾ ಠಾಣೆಯಲ್ಲಿ ಆಪ್ತ ಸಮಾಲೋಚನೆ:

ಹೊಡೆದಾಡಿಕೊಂಡ ವಿದ್ಯಾರ್ಥಿಗಳು ಅಪ್ರಾಪ್ತರಾದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುವುದು ಸಮಂಜಸವಲ್ಲವೆಂದು ಮಹಿಳಾ ಪೊಲೀಸ್ ಠಾಣೆಯಲ್ಲಿರುವ ಅಪ್ರಾಪ್ತರ ಕೌನ್ಸೆಲಿಂಗ್ ವಿಭಾಗಕ್ಕೆ ನಾಲ್ವರು ಹಿಂದು ಮತ್ತು ಇಬ್ಬರು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳನ್ನು ಘಟನೆಯ ಮಾಹಿತಿ ಪಡೆಯಲು ಪೊಲೀಸರು ಕರೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಚಾರವೇ ಈ ಕ್ಷಿಪ್ರ ಬೆಳವಣಿಗೆಗೆ ಕಾರಣವಾಗಿದೆ.

ಪೊಲೀಸರು ವಿದ್ಯಾರ್ಥಿಗಳನ್ನು ಕರೆಸಿದ್ದಾರೆ ಎನ್ನುವ ವಿಚಾರ ಸುದ್ದಿಯಾಗುತ್ತಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಅಪರಾಧ ಎಸಗದ ಹಿಂದೂ ವಿದ್ಯಾರ್ಥಿಗಳನ್ನು ನೀವು ಠಾಣೆಗೆ ಕರೆದೊಯ್ಯುವುದು ತಪ್ಪು. ಅವರನ್ನು ಬಿಡಬೇಕೆಂದು ಠಾಣೆಯ ಮುಂದೆ ಜಮಾಯಿಸಿ ಒತ್ತಾಯಿಸಿದರು.

ಮಾತುಕತೆ ಫಲಪ್ರದ

ರಾತ್ರಿ 8 ಗಂಟೆ ಸುಮಾರಿಗೆ ಹಿಂದೂ ಜಾಗರಣ ವೇದಿಕೆ ಮುಖಂಡರು ಹಾಗೂ ಡಿವೈಎಸ್‌ ಪಿ ಮಧ್ಯೆ ನಡೆದ ಮಾತುಕತೆ ಫಲಪ್ರದವಾಗಿದ್ದು , ಸಂಘಟನೆಯ ಮುಖಂಡರನ್ನು ಮನವೊಲಿಸುವಲ್ಲಿ ಡಿವೈಎಸ್‌ ಪಿ ಸಫಲರಾಗಿದ್ದಾರೆ. ಮಾತುಕತೆ ನಡೆಸಿ ಹೊರ ಬಂದ ಹಿಂಜಾವೇ ಮುಖಂಡ ಅಜೀತ್‌ ರೈ ಹೊಸಮನೆ ” ಇನ್ನು ಮುಂದೆ ಕಾಲೇಜು ವಿಚಾರವಾಗಿ ಯಾವುದೇ ಹೊರಗಿನ ಸಂಘಟನೆ ಹಸ್ತಕ್ಷೇಪ ನಡೆಸದಂತೆ ನೋಡಿಕೊಳ್ಳುವುದಾಗಿ ಡಿವೈಎಸ್​ಪಿಯವರು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈ ಬಿಡುವುದಾಗಿ ತಿಳಿಸಿದರು.

ಈ ವೇಳೆ ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್, ಎಸ್.ಡಿ.ಪಿ.ಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ,ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ರಹೀಂ,ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಜೊತೆ ಕಾರ್ಯದರ್ಶಿ ಯಹ್ಯಾ ಕೂರ್ನಡ್ಕ, ಮತ್ತಿತ್ತರರು ಉಪಸ್ಥಿತರಿದ್ದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.