ETV Bharat / state

ಜೀಪ್​ ಮಾಲೀಕನಿಗೆ 14,000 ರೂಪಾಯಿ ದಂಡ ವಿಧಿಸಿದ ಪುತ್ತೂರು ಕೋರ್ಟ್‌ - ದಕ್ಷಿಣಕನ್ನಡ ಲೇಟೆಸ್ಟ್ ನ್ಯೂಸ್​

ಕ್ರಮಬದ್ಧವಾದ ದಾಖಲೆ ಪತ್ರಗಳಿಲ್ಲದ ಟೂರಿಸ್ಟ್ ಜೀಪೊಂದಕ್ಕೆ ಪುತ್ತೂರು ನ್ಯಾಯಾಲಯ 14,000 ರೂಪಾಯಿ ದಂಡ ವಿಧಿಸಿದೆ. ಜೊತೆಗೆ ಪ್ರಾದೇಶಿಕ ಸಾರಿಗೆ ಇಲಾಖೆ ಜೀಪಿನ ಬಾಕಿ ತೆರಿಗೆಯಾಗಿ 12,876 ರೂ. ಕಟ್ಟಿಸಿಕೊಂಡಿದೆ.

puttur-court-fined-jeep-owner-rs-14000
ದಾಖಲೆಗಳಿಲ್ಲದೇ ಓಡಾಟ: ಜೀಪ್​ ಮಾಲೀಕನಿಗೆ 14,000 ರೂಪಾಯಿ ದಂಡ ವಿಧಿಸಿ ಪುತ್ತೂರು ನ್ಯಾಯಾಲಯ
author img

By

Published : Oct 31, 2020, 2:20 PM IST

ಪುತ್ತೂರು (ದಕ್ಷಿಣಕನ್ನಡ): ಕ್ರಮಬದ್ಧವಾದ ದಾಖಲೆ ಪತ್ರಗಳಿಲ್ಲದ ಟೂರಿಸ್ಟ್ ಜೀಪೊಂದಕ್ಕೆ ಪುತ್ತೂರು ನ್ಯಾಯಾಲಯ 14,000 ರೂಪಾಯಿ ದಂಡ ವಿಧಿಸಿದೆ.

ದಾಖಲೆಗಳಿಲ್ಲದೇ ಓಡಾಟ: ಜೀಪ್​ ಮಾಲೀಕನಿಗೆ 14,000 ರೂಪಾಯಿ ದಂಡ ವಿಧಿಸಿ ಪುತ್ತೂರು ನ್ಯಾಯಾಲಯ

ಅಕ್ಟೋಬರ್ 15ರಂದು ಪುತ್ತೂರು ಸಂಚಾರಿ ಪೊಲೀಸ್ ಠಾಣೆಯ ಎಸ್​ಐ ರಾಮನಾಯ್ಕ ಅವರು, ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕೆ.ಎ.21-3109 ರಿಜಿಸ್ಟ್ರೇಶನ್‌ ನಂಬರಿನ ಜೀಪೊಂದರ ಎಫ್‌ಸಿ, ಇನ್ಸುರೆನ್ಸ್​, ಹೊಗೆ ತಪಾಸಣೆ ಪ್ರಮಾಣ ಪತ್ರ ಮುಗಿದಿರುವುದು ಬೆಳಕಿಗೆ ಬಂದಿತ್ತು. ಜೀಪ್​ ಮಾಲೀಕನ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಆರೋಪಿಗೆ 14,000 ರೂ. ದಂಡ ವಿಧಿಸಿದೆ. ಜೊತೆಗೆ ಪ್ರಾದೇಶಿಕ ಸಾರಿಗೆ ಇಲಾಖೆ ಜೀಪಿನ ಬಾಕಿ ತೆರಿಗೆಯಾಗಿ 12,876 ರೂ. ಕಟ್ಟಿಸಿಕೊಂಡಿದೆ.

5 ವರ್ಷ ಸೂಕ್ತ ದಾಖಲೆ ಪತ್ರಗಳಿಲ್ಲದೆ ಸಂಚರಿಸಿರುವ ಜೀಪ್:

ಪೊಲೀಸರು ವಶಪಡಿಸಿರುವ ಜೀಪ್​ನ ಎಫ್‌ಸಿ, ಇನ್ಸುರೆನ್ಸ್​, ಹೊಗೆ ತಪಾಸಣೆ ಪ್ರಮಾಣ ಪತ್ರ 2016ರಲ್ಲೇ ಮುಗಿದಿತ್ತು. ಆದರೂ ಕೂಡ ದಾಖಲೆಗಳಿಲ್ಲದೇ ಜೀಪ್​ 5 ವರ್ಷ ಎಲ್ಲಾ ಕಡೆ ಸಂಚರಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.