ETV Bharat / state

ವೇತನ ಪರಿಷ್ಕರಣೆಗೆ ಆಗ್ರಹಿಸಿ ಮಹಾನಗರ ಪಾಲಿಕೆ ಪಂಪ್ ಹೌಸ್ ಕಾರ್ಮಿಕರಿಂದ ಪ್ರತಿಭಟನೆ! - ಪಂಪ್ ಹೌಸ್ ಕಾರ್ಮಿಕರ ಪ್ರತಿಭಟನೆ

ಮಂಗಳೂರು ಮಹಾನಗರ ಪಾಲಿಕೆಯ ಪಂಪ್ ಹೌಸ್​​ನ ಸುಮಾರು 136 ಕಾರ್ಮಿಕರು ವೇತನ ಹೆಚ್ಚಿಸಬೇಕೆಂದು ಆಗ್ರಹಿಸಿ ನಗರದ ಮುಲ್ಲಕಾಡು ಎಸ್ ಟಿಪಿಯ ಮುಂಭಾಗ ಧರಣಿ ನಡೆಸುತ್ತಿದ್ದಾರೆ.

pumphouse workers protest in mangalore
ಪಂಪ್ ಹೌಸ್ ಕಾರ್ಮಿಕರ ಪ್ರತಿಭಟನೆ
author img

By

Published : Sep 8, 2020, 5:50 PM IST

ಮಂಗಳೂರು: ವೇತನ ಹೆಚ್ಚಿಸಬೇಕೆಂದು ಆಗ್ರಹಿಸಿ ಮಂಗಳೂರು ಮಹಾನಗರ ಪಾಲಿಕೆಯ ಪಂಪ್ ಹೌಸ್ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ನಗರದ ಮುಲ್ಲಕಾಡು ಎಸ್ ಟಿಪಿಯ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ. ಸುಮಾರು 136 ಕಾರ್ಮಿಕರು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ‌.ಈ ಸಂದರ್ಭ ಪಂಪ್ ಹೌಸ್ ಕಾರ್ಮಿಕ ರಾಜೇಶ್ ಪೆರ್ನಾಜೆ ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆಯು 2014ರಿಂದ ಪಂಪ್ ಹೌಸ್ ಟೆಂಡರನ್ನು ಎಸ್ಇಝಡ್ ಗೆ ನೀಡುತ್ತಿದೆ. ಆ ಬಳಿಕ ನಮಗೆ ಸಂಬಳ ಪರಿಷ್ಕರಣೆ ಆಗಿಲ್ಲ. ಅಲ್ಲದೆ ನಮಗೆ ಸೌಲಭ್ಯಗಳು ಇಲ್ಲ. ಅವರು ಮೂರು ವರ್ಷಗಳಿಗೊಮ್ಮೆ ಹೊರ ಗುತ್ತಿಗೆದಾರರಿಗೆ ಸಬ್ ಟೆಂಡರ್ ನೀಡುತ್ತಿದ್ದಾರೆ. ಆ ಸಬ್ ಟೆಂಡರ್ ದೊಡ್ಡ ಮೊತ್ತದಲ್ಲಿ ನೀಡಲಾಗುತ್ತದೆ. ಆದರೆ ನೌಕಕರಿಗೆ ಮಾತ್ರ ಕರ್ನಾಟಕ ಸರಕಾರದ ಕನಿಷ್ಠ ವೇತನ ನೀಡಲಾಗುತ್ತಿದೆ. ನಮಗೆ ಟೆಂಡರ್ ನಲ್ಲಿರುವ ವೇತನವೇ ದೊರಕಬೇಕು. ಅಲ್ಲದೆ ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳನ್ನು ತನಿಖೆ ನಡೆಸಬೇಕೆಂದು ಒಂದು ತಿಂಗಳ ಹಿಂದೆ ಮನವಿ ನೀಡಿದ್ದೆವು. ಅಲ್ಲದೆ ಶಾಸಕರು, ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೂ ಮನವಿ ನೀಡಿದ್ದೇವೆ. ಆದರೆ ಈವರೆಗೆ ಎಸ್ಇಝಡ್ ನವರು ಈವರೆಗೆ ಯಾವುದೇ ತನಿಖೆ ನಡೆಸಲಿಲ್ಲ. ಅಲ್ಲದೆ ಯಾರ ಮೇಲೂ ಕ್ರಮ ಕೈಗೊಳ್ಳಲೂ ಇಲ್ಲ. ಆದ್ದರಿಂದ ಈ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ರು.

ಪಂಪ್ ಹೌಸ್ ಕಾರ್ಮಿಕರ ಪ್ರತಿಭಟನೆ
ನಾವು ಮನವಿ ಕೊಡುವಾಗ ಎಸ್ಇಝಡ್ ಹಾಗೂ ಮಂಗಳೂರು ಮನಾಪ ಸೇರಿ ಎಸ್ ಟಿಪಿಎಲ್ ಸಂಸ್ಥೆಯನ್ನು ತೆರೆದಿದೆ. ಈ ಮೂಲಕ ತಮಗೆ ಎಂಎಸ್ ಟಿಪಿಎಲ್ ಮೂಲಕ ಸಂಬಳ ಹೆಚ್ಚಳವಾಗುತ್ತದೆ ಎಂದು ಹೇಳಿದ್ದರು. ಆದರೆ ಎಂಎಸ್ ಟಿಪಿಎಲ್ ನ ಅಧಿಕಾರಿಗಳು ಯಾರು ಎಂಬುದು ನಮಗೆ ಈವರೆಗೆ ಗೊತ್ತಾಗಲಿಲ್ಲ. ಎಸ್ಇಝಡ್ ಅಧಿಕಾರಿಗಳು ನಮ್ಮ ಮೇಲೆ ಸವಾರಿ ಮಾಡಲು ಬರುತ್ತಾರೆ‌. ಆದರೆ ನಾವು ಸಂಬಳ ಹೆಚ್ಚಳ ಮಾಡಲು ಕೋರಿದರೆ ನಮ್ಮ ಗುತ್ತಿಗೆದಾರ ಸಂಸ್ಥೆ ಪೂಜಾ ಕನ್ಸ್​ಸ್ಟ್ರಕ್ಷನ್​ ಅನ್ನು ತೋರಿಸುತ್ತಾರೆ. ಆದರೆ ಪೂಜಾ ಕನ್ಸ್​ಸ್ಟ್ರಕ್ಷನ್​ ನವರು ಎಸ್ಇಝಡ್ ಒಪ್ಪಿದ್ದಲ್ಲಿ ನಾವು ಹೆಚ್ಚು ವೇತನ ನೀಡುತ್ತೇವೆ ಎಂದು ಹೇಳುತ್ತಾರೆ ಎಂದರು.ನಮ್ಮಲ್ಲಿ 38 ವರ್ಷಗಳಿಂದ ಇಲ್ಲಿ ದುಡಿಯುತ್ತಿರುವವರಿದ್ದಾರೆ. ಹೊಸಬರೂ ಇದ್ದಾರೆ. ಆದರೆ ಎಲ್ಲರಿಗೂ ಒಂದೇ ವೇತನ . ಎಸ್ಇಝಡ್ ಟೆಂಡರ್ ನಲ್ಲಿ ಯಾವುದೆಲ್ಲಾ ಸವಲತ್ತುಗಳು ಇವೆಯೋ, ಅದೆಲ್ಲಾ ಬೇಕು. ಆದ್ದರಿಂದ ಎಸ್ಇಝಡ್ ಅಧಿಕಾರಿಗಳು ಬಾರದೆ ನಾವು ಪ್ರತಿಭಟನೆಯಿಂದ ಹಿಂದೆ ಸರಿಯೋದಿಲ್ಲ. ಇಂದು ಯಾವ ಅಧಿಕಾರಿಗಳೂ ಬಾರದಿದ್ದಲ್ಲಿ ನಾಳೆ ಬಜ್ಪೆಯಲ್ಲಿರುವ ಎಸ್ಇಝಡ್ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಲಿದ್ದೇವೆ. ಅದಕ್ಕೂ ಏನೂ ಪ್ರತಿಕ್ರಿಯೆ ಇಲ್ಲದಿದ್ದಲ್ಲಿ ಮಹಾನಗರ ಪಾಲಿಕೆಯ ಮುಂಭಾಗ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.