ETV Bharat / state

ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್​ಗೆ ಜೀವಾವಧಿ ಶಿಕ್ಷೆ ವಿರೋಧಿಸಿ ಪ್ರತಿಭಟನೆ - ಹೋರಾಟ

2015ರಲ್ಲಿ ಸಂಜೀವ್ ಭಟ್ ಅವರನ್ನು ಇಲಾಖೆಯಿಂದಲೇ ಪದಚ್ಯುತಿ ಮಾಡಲಾಗಿತ್ತು. ಅವರ ಮೇಲೆ ಅಪಘಾತ ಮಾಡುವಂತಹ ಪ್ರಯತ್ನಗಳೂ ನಡೆದಿತ್ತು. ಮಾನಸಿಕ ಹಿಂಸೆ ನೀಡಲಾಗಿತ್ತು. ಆದರೆ ಕುಗ್ಗದ ಅವರ ಗುಣ ನೋಡಿ ಈ ರೀತಿಯ ಷಡ್ಯಂತರ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪ್ರತಿಭಟನೆ
author img

By

Published : Jun 28, 2019, 9:49 AM IST

Updated : Jun 28, 2019, 1:22 PM IST

ಮಂಗಳೂರು: ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್​ಗೆ ವಿಧಿಸಿರುವ ಜೀವಾವಧಿ ಶಿಕ್ಷೆ ತೀರ್ಪನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಗುರುವಾರ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪ್ರತಿಭಟನೆ ನಡೆಸಿತು.

ಈ ಸಂದರ್ಭ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಮಹಮ್ಮದ್ ಸಿದ್ದಿಕ್ ಮಾತನಾಡಿ, 1988ನೇ ಬ್ಯಾಚ್​ನ ನಿಷ್ಠಾವಂತ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರಿಗೆ ಜಾಮ್ ನಗರ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಕಾನೂನು ಹೋರಾಟದ ಬೆಂಬಲ ನೀಡಲು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರಾದ್ಯಂತ ಹೋರಾಟ ನಡೆಸುತ್ತಿದೆ ಎಂದು ಹೇಳಿದರು.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪ್ರತಿಭಟನೆ

2001 ರಿಂದ 2016 ರವರೆಗೆ ಈ ದೇಶದಲ್ಲಿ 1556 ಲಾಕಪ್ ಡೆತ್ ನಡೆದಿದ್ದರೂ, ಅದರಲ್ಲಿ ಕೇವಲ 27 ಮಂದಿ ಪೊಲೀಸ್ ಅಧಿಕಾರಿಗಳಿಗೆ ಮಾತ್ರ ಶಿಕ್ಷೆಯಾಗಿದೆ. ಆದರೆ ಗುಜರಾತ್​ನಲ್ಲಿ‌ ನಡೆದ 188 ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿ ಸಂಜೀವ್ ಭಟ್ ಅವರಿಗೆ ಮಾತ್ರ ಜೀವಾವಧಿ ಶಿಕ್ಷೆಯಾಗಿದೆ. ಇದರಿಂದ ಸ್ಪಷ್ಟವಾಗಿ ತಿಳಿದು ಬಂದಿರುದೇನೆಂದರೆ 2002ರಲ್ಲಿ ಗುಜರಾತ್​ನಲ್ಲಿ ನಡೆದ ಹತ್ಯಾಕಾಂಡಕ್ಕೆ ಸಂಬಂಧಿಸಿ ಇವುಗಳನ್ನು ಸಮರ್ಥನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ಅಧಿಕಾರಿಗಳಲ್ಲಿ ಭಟ್ ಅವರೂ ಓರ್ವರು. ಮೈನಾರಿಟಿ ಕಮಿಷನ್ ಹಾಗೂ ಸುಪ್ರೀಂಕೋರ್ಟ್ ಮುಂದೆ ಗುಜರಾತ್ ಗಲಭೆ ಹಿಂದೆ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ನೇರ ಕೈವಾಡವಿದೆ. ಅಲ್ಲದೆ ಇದೊಂದು ಪೂರ್ವನಿಯೋಜಿತ ಗಲಭೆಯಾಗಿದೆ ಎಂದು ಸಂಜೀವ್ ಭಟ್ ಸಾಕ್ಷಿ ನುಡಿದಿದ್ದರು. ಅಂದಿನಿಂದ ಸಂಘ ಪರಿವಾರದ ಫ್ಯಾಶಿಷ್ಟ್ ಶಕ್ತಿಗಳ ಆಕ್ರಮಣ ಅವರ ಮೇಲೆ ನಡೆದಿದೆ ಎಂದು ಸಿದ್ದಿಕ್​ ಆರೋಪಿಸಿದರು.

ಸಂಜೀವ್ ಭಟ್ ಅವರು ಈ ಸಾಕ್ಷಿ ನುಡಿದ ಕೇವಲ ಆರು ತಿಂಗಳಲ್ಲೇ ಅನುಮತಿಯಿಲ್ಲದೆ ಗೈರು ಹಾಜರಿ, ಇಲಾಖೆಯ ವಾಹನ ದುರುಪಯೋಗ ಕಾರಣಗಳನ್ನು ನೀಡಿ ಅಮಾನತು ಮಾಡಲಾಗಿತ್ತು. 2015ರಲ್ಲಿ ಇಲಾಖೆಯಿಂದಲೇ ಪದಚ್ಯುತಿ ಮಾಡಲಾಗಿತ್ತು. ಅವರ ಮೇಲೆ ಅಪಘಾತ ಮಾಡುವಂತಹ ಪ್ರಯತ್ನಗಳೂ ನಡೆದಿತ್ತು. ಮಾನಸಿಕ ಹಿಂಸೆ ನೀಡಲಾಗಿತ್ತು. ಆದರೆ ಕುಗ್ಗದ ಅವರ ಗುಣ ನೋಡಿ ಈ ರೀತಿಯ ಷಡ್ಯಂತ್ರ ಮಾಡಿದ್ದಾರೆ ಎಂದು ಹೇಳಿದರು.

ಒಂದು ಫ್ಯಾಶಿಷ್ಟ್ ಸರಕಾರ ಅಧಿಕಾರಕ್ಕೆ ಬಂದರೆ ಯಾವ ರೀತಿ ಶೋಷಣೆಗೆ ಒಳಗಾಗಬಹುದು ಎಂದು ಭಾರತ ಸರಕಾರದ ಕಳೆದ ಐದು ವರ್ಷಗಳ ಆಡಳಿತವೇ ಸಾಕ್ಷಿ. ಮುಂದಿನ ದಿನಗಳಲ್ಲಿ ಇದಕ್ಕೆಲ್ಲಾ ಕಡಿವಾಣ ಹಾಕಬೇಕಾದುದು ಪ್ರಜ್ಞಾವಂತ ಯುವಕರಾದ ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಈ ದೇಶದಲ್ಲಿ ನಡೆಯುತ್ತಿರುವ ಅಶಾಂತಿ, ಅಭದ್ರತೆ, ಅನ್ಯಾಯವನ್ನು ಕೊನೆಗೊಳಿಸಿ ನ್ಯಾಯವನ್ನು‌ ನೆಲೆಗೊಳಿಸಿ, ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡಲು ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

Intro:ಮಂಗಳೂರು: ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಗೆ ವಿಧಿಸಿರುವ ಜೀವಾವಧಿ ತೀರ್ಪನ್ನು ವಿರೋಧಿಸಿ ಇಂದು ದ.ಕ.ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ದ.ಕ. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪ್ರತಿಭಟನೆ ನಡೆಸಿತು.

ಈ ಸಂದರ್ಭ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾಧ್ಯಕ್ಷ ಮಹಮ್ಮದ್ ಸಿದ್ದೀಕ್ ಮಾತನಾಡಿ, 1988ನೇ ಬ್ಯಾಚ್ ನ ನಿಷ್ಠಾವಂತ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರಿಗೆ ಜಾಮ್ ನಗರ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಕಾನೂನು ಹೋರಾಟದ ಬೆಂಬಲ ನೀಡಲು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರಾದ್ಯಂತ ಹೋರಾಟ ನಡೆಸುತ್ತಿದೆ ಎಂದು ಹೇಳಿದರು.

Body:2001 ರಿಂದ 2016ರವರೆಗೆ ಈ ದೇಶದಲ್ಲಿ 1556 ಲಾಕಪ್ ಡೆತ್ ನಡೆದಿದ್ದರೂ, ಅದರಲ್ಲಿ ಕೇವಲ 27 ಮಂದಿ ಪೊಲೀಸ್ ಅಧಿಕಾರಿಗಳಿಗೆ ಮಾತ್ರ ಶಿಕ್ಷೆಯಾಗಿದೆ. ಆದರೆ ಗುಜರಾತ್ ನಲ್ಲಿ‌ನಡೆದ 188 ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿ ಸಂಜೀವಿನಿ ಭಟ್ ಅವರಿಗೆ ಮಾತ್ರ ಜೀವಾವಧಿ ಶಿಕ್ಷೆಯಾಗಿದೆ. ಇದರಿಂದ ಸ್ಪಷ್ಟವಾಗಿ ತಿಳಿದುಬಂದಿರುದೇನೆಂದರೆ 2002ರಲ್ಲಿ ಗುಜರಾತ್ ನಲ್ಲಿ ನಡೆದ ಹತ್ಯಾಕಾಂಡಕ್ಕೆ ಸಂಬಂಧಿಸಿ ಇವುಗಳನ್ನು ಸಮರ್ಥನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ಅಧಿಕಾರಿಗಳಲ್ಲಿ ಭಟ್ ಅವರೂ ಓರ್ವರು. ಅಲ್ಲದೆ ಶಾ ನಾನಾವತಿ, ಮೈನಾರಿಟಿ ಕಮಿಷನ್, ಸುಪ್ರೀಂ ಕೋರ್ಟ್ ಮುಂದೆ ಗುಜರಾತ್ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ನೇರ ಕೈವಾಡವಿದೆ. ಅಲ್ಲದೆ ಇದೊಂದು ಪೂರ್ವನಿಯೋಜಿತ ಗಲಭೆಯಾಗಿದೆ ಎಂದು ಸಂಜೀವ್ ಭಟ್ ಸಾಕ್ಷಿ ನುಡಿದಿದ್ದರು. ಅಂದಿನಿಂದ ಸಂಘಪರಿವಾರದ ಫ್ಯಾಶಿಷ್ಟ್ ಶಕ್ತಿಗಳ ಆಕ್ರಮಣ ಅವರ ಮೇಲೆ ನಡೆದಿದೆ ಎಂದು ಸಿದ್ದೀಕ್ ಹೇಳಿದರು.

ಸಂಜೀವ್ ಭಟ್ ಅವರು ಈ ಸಾಕ್ಷಿ ನುಡಿದ ಕೇವಲ ಆರು ತಿಂಗಳಲ್ಲೇ ಅನುಮತಿಯಿಲ್ಲದೆ ಗೈರು ಹಾಜರಿ, ಇಲಾಖೆಯ ವಾಹನ ದುರುಪಯೋಗ ಕಾರಣಗಳನ್ನು ನೀಡಿ ಅಮಾನತು ಮಾಡಲಾಗಿತ್ತು. 2015ರಲ್ಲಿ ಇಲಾಖೆಯಿಂದಲೇ ಪದಚ್ಯುತಿ ಮಾಡಲಾಗಿತ್ತು. ಅವರ ಮೇಲೆ ಅಪಘಾತ ಮಾಡುವಂತಹ ಪ್ರಯತ್ನಗಳೂ ನಡೆದಿತ್ತು. ಮಾನಸಿಕ ಹಿಂಸೆ ನೀಡಲಾಗಿತ್ತು. ಈ ಸಂದರ್ಭ ಅವರು ಕುಗ್ಗದಂತಹ ಸಂದರ್ಭ ಈ ರೀತಿಯ ಷಡ್ಯಂತರ ಮಾಡಿ ಸರಕಾರ ಮಾಡಿದೆ ಎಂದು ಹೇಳಿದರು.

Conclusion:ಒಂದು ಫ್ಯಾಶಿಷ್ಟ್ ಸರಕಾರ ಅಧಿಕಾರಕ್ಕೆ ಬಂದರೆ ಯಾವ ರೀತಿ ಶೋಷಣೆಗೆ ಒಳಗಾಗಬಹುದು ಎಂದು ಭಾರತ ಸರಕಾರದ ಕಳೆದ ಐದು ವರ್ಷಗಳ ಆಡಳಿತವೇ ಸಾಕ್ಷಿ. ಮುಂದಿನ ದಿನಗಳಲ್ಲಿ ಇದಕ್ಕೆಲ್ಲಾ ಕಡಿವಾಣ ಹಾಕಬೇಕಾದುದು ಪ್ರಜ್ಞಾವಂತ ಯುವಕರಾದ ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಈ ದೇಶದಲ್ಲಿ ನಡೆಯುತ್ತಿರುವ ಅಶಾಂತಿ, ಅಭದ್ರತೆ, ಅನ್ಯಾಯವನ್ನು ಕೊನೆಗೊಳಿಸಿ ನ್ಯಾಯವನ್ನು‌ ನೆಲೆಗೊಳಿಸಿ, ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕಡಲು ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಹಮ್ಮದ್ ಸಿದ್ದೀಕ್ ಹೇಳಿದರು.

Reporter_Vishwanath Panjimogaru
Last Updated : Jun 28, 2019, 1:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.