ETV Bharat / state

ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನ ವಿಳಂಬ: ಸಿಎಫ್‌ಐ ಕಾರ್ಯಕರ್ತರಿಂದ 'ಮೈನಾರಿಟಿ ಭವನ ಚಲೋ' - student Scholarship

ವಿದ್ಯಾರ್ಥಿ ವೇತನ ವಿಳಂಬ ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು 'ಮೈನಾರಿಟಿ ಭವನ ಚಲೋ' ನಡೆಸಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಮೈನಾರಿಟಿ ಭವನ ಚಲೋ
author img

By

Published : Aug 29, 2019, 6:13 PM IST

ಮಂಗಳೂರು : ಅಲ್ಪಸಂಖ್ಯಾತ ಇಲಾಖೆಯ ವಿದ್ಯಾರ್ಥಿ ವೇತನ ವಿಳಂಬ ಧೋರಣೆ ವಿರುದ್ಧ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು 'ಮೈನಾರಿಟಿ ಭವನ ಚಲೋ' ನಡೆಸಿದ್ರು. ಈ ವೇಳೆ ಸರ್ಕಾರದ ವಿರುದ್ಧ ಆಕ್ರೋಶಗೊಂಡ ಅವರು ಪಾಂಡೇಶ್ವರದಲ್ಲಿರುವ ಮೌಲಾನಾ ಆಜಾದ್ ಭವನಕ್ಕೆ ಮುತ್ತಿಗೆ ಹಾಕಿದ ಪ್ರಸಂಗವೂ ನಡೆಯಿತು.

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸರ್ಕಾರ ಪ್ರತೀವರ್ಷವೂ ಎಸ್ಎಸ್ಎಲ್‌ಸಿ ಒಳಗಿನ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ನೀಡುವ 'ಅರಿವು', 'ವಿದ್ಯಾರ್ಥಿಸಿರಿ'ಯಂತಹ ವಿದ್ಯಾರ್ಥಿ ವೇತನಗಳನ್ನು ನೀಡಲು ವಿಳಂಬ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು. ಪ್ರತಿಭಟನೆ ವೇಳೆ ಮೌಲಾನ ಆಜಾದ್ ಭವನಕ್ಕೆ ಕಂಪೌಂಡ್ ಹಾರಿ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ತಡೆದರು. ಇದರಿಂದ ಕೋಪಗೊಂಡ ಸಿಎಫ್​ಐ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದ್ರು.

ವಿದ್ಯಾರ್ಥಿ ವೇತನ ವಿಳಂಬ: ಸಿಎಫ್‌ಐನಿಂದ ಮೈನಾರಿಟಿ ಭವನ ಚಲೋ

ಪ್ರತಿಭಟನೆಯಲ್ಲಿ ಸಿಎಫ್‌ಐ ರಾಜ್ಯಾಧ್ಯಕ್ಷ ಫಯಾಜ್ ದೊಡ್ಡಮನೆ, ಜಿಲ್ಲಾಧ್ಯಕ್ಷ ಮಹಮ್ಮದ್ ಸಾದಿಕ್, ಮಾಧ್ಯಮ ಸಂಯೋಜಕ ತಾಜುದ್ದೀನ್, ಹಸನ್ ಸಿರಾಜ್ ಮತ್ತಿತರರು ಪಾಲ್ಗೊಂಡಿದ್ದರು.

Intro:ಮಂಗಳೂರು: ಅಲ್ಪಸಂಖ್ಯಾತ ಇಲಾಖೆಯ ವಿದ್ಯಾರ್ಥಿ ವಿದ್ಯಾರ್ಥಿ ವೇತನ ವಿಳಂಬ ನೀತಿಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಇಂದು 'ಮೈನಾರಿಟಿ ಭವನ ಚಲೋ' ಪ್ರತಿಭಟನೆ ನಡೆಸಿ ನಗರದ ಪಾಂಡೇಶ್ವರದಲ್ಲಿರುವ ಮೌಲಾನಾ ಆಜಾದ್ ಭವನಕ್ಕೆ ಮುತ್ತಿಗೆ ಹಾಕಿದ ಘಟನೆ ನಡೆಯಿತು.

ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಸರಕಾರವು ಪ್ರತೀವರ್ಷವೂ ನೀಡುವ ಎಸ್ಎಸ್ಎಲ್ ಸಿ ಒಳಗಿನ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ನೀಡುವ ಅರಿವು, ವಿದ್ಯಾರ್ಥಿ ಸಿರಿಯಂತಹ ವಿದ್ಯಾರ್ಥಿ ವೇತನಗಳ ವಿಳಂಬ ನೀತಿಯನ್ನು ವಿರೋಧಿಸಿ ಈ ಪ್ರತಿಭಟನೆ ನಡೆಸಲಾಯಿತು.

Body:ಈ ಸಂದರ್ಭ ಪ್ರತಿಭಟನಾಕಾರರನ್ನು ಮೌಲಾನ ಆಜಾದ್ ಭವನಕ್ಕೆ ಮುತ್ತಿಗೆ ಹಾಕದಂತೆ ಪೊಲೀಸರು ತಡೆದ ಘಟನೆ ನಡೆಯಿತು. ಇದರಿಂದ ಆಕ್ರೋಶಗೊಂಡ ಸಿಎಫ್ ಐ ಕಾರ್ಯಕರ್ತರು ಭವನದ ಕಾಂಪೌಂಡ್ ಹಾರಿ ಮುತ್ತಿಗೆ ಹಾಕಿದರು. ತಕ್ಷಣ ಪೊಲೀಸರು ಪ್ರತಿಭಟನಾಕಾರರನ್ನು ತಡೆದು ಹೊರಗೆ ಕಳಿಸಿದರು. ಈ ಸಂದರ್ಭ ಸರಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ವಿದ್ಯಾರ್ಥಿ ವೇತನವನ್ನು ಶೀಘ್ರದಲ್ಲೇ ಬಿಡುಗಡೆ ಗೊಳಿಸಲು ಆಗ್ರಹಿಸಿದರು.

ಈ ಸಂದರ್ಭ ಸಿಎಫ್ ಐ ರಾಜ್ಯಾಧ್ಯಕ್ಷ ಫಯಾಜ್ ದೊಡ್ಡಮನೆ, ಜಿಲ್ಲಾಧ್ಯಕ್ಷ ಮುಹಮ್ಮದ್ ಸಾದಿಕ್, ಮಾಧ್ಯಮ ಸಂಯೋಜಕ ತಾಜುದ್ದೀನ್, ಹಸನ್ ಸಿರಾಜ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Reporter_Vishwanath Panjimogaru

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.