ಪುತ್ತೂರು (ದಕಕ್ಷಿಣ ಕನ್ನಡ): ದೇಶದಲ್ಲಿ ಕಾರ್ಯಾ ನಿರ್ವಹಿಸುತ್ತಿರುವ ವಕ್ಫ್ ಬೋರ್ಡ್ ಮತ್ತು ವಕ್ಫ್ ಕಾನೂನನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ನೇತೃತ್ವದಲ್ಲಿ ಪುತ್ತೂರಿನ ಅಮರ್ ಜವಾನ್ ಜ್ಯೋತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಸಂಘಟನೆಗಳ ಮುಖಂಡ ದಿನೇಶ್ ಜೈನ್, ದೇಶದ ಅತೀ ಹೆಚ್ಚು ಭೂಮಿ ಮೊದಲಿಗೆ ರೈಲ್ವೆ ಇಲಾಖೆ, ಎರಡನೇಯದು ಭಾರತೀಯ ಸೇನೆಯಲ್ಲಿ ಮತ್ತು ಮೂರನೇಯದು ವಕ್ಫ್ ಬೋರ್ಡ್ ಹೊಂದಿದೆ. ದೇಶದ ಸ್ವಾತಂತ್ರ್ಯನಂತರದ ಅಸ್ತಿತ್ವದ ಬಂದ ವಕ್ಫ್ ಬೋರ್ಡ್ ನಡಿ ದೇಶದ ಬಹುಪಾಲ ಭೂಮಿ ಇದ್ದು, ದೇಶವನ್ನಾಳಿದ ಸರಕಾರಗಳ ನೀತಿಯೇ ಇದಕ್ಕೆ ಕಾರಣ ಎಂದು ದೂರಿದರು.
ತಮಿಳುನಾಡಿದ 2,000 ಕ್ಕೂ ಮಿಕ್ಕಿದ ವರ್ಷಗಳ ಹಳೆಯ ದೇವಸ್ಥಾನದ ಭೂಮಿ ವಕ್ಫ್ ಬೋರ್ಡ್ಗೆ ಸಂಬಂಧಪಟ್ಟಿರುವುದು ಎನ್ನುವ ವಿಚಾರ ತಿಳಿದಾದ ದೇಶದಲ್ಲಿ ಯಾವ ರೀತಿಯಲ್ಲಿ ಲ್ಯಾಂಡ್ ಜಿಹಾದ್ ನಡೆಯುತ್ತಿದೆ ಎನ್ನುವುದನ್ನು ಊಹಿಸಬಹುದಾಗಿದೆ. ದೇಶದ ಜನ ಈ ವಿಚಾರವನ್ನು ಗಂಭೀರವಾಗಿ ತೆಗೆಯದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸಬೇಕಾದೀತು ಎಂದು ಅವರು ಎಚ್ಚರಿಸಿದರು.
ಇದನ್ನೂ ಓದಿ : ವಕ್ಫ್ ಆಸ್ತಿ ಕಬಳಿಕೆ ವರದಿ ಮಂಡಿಸಿ ಬಳಿಕ ಕೈಗೊಂಡಿರುವ ಕ್ರಮದ ಬಗ್ಗೆ ತಿಳಿಸಿ: ಹೈಕೋರ್ಟ್