ಮಂಗಳೂರು: ಕಸಬ ಬೆಂಗರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5 ಶಿಕ್ಷಕರನ್ನು ವರ್ಗಾವಣೆ ಮಾಡಿದ ಶಿಕ್ಷಣ ಇಲಾಖೆಯ ನೀತಿಯನ್ನು ವಿರೋಧಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ದಸರಾ ರಜೆಯ ನಂತರ ಇಂದು ತರಗತಿಗಳು ಪುನರಾರಂಭಗೊಂಡಿದ್ದು, ಶಿಕ್ಷಕರ ವರ್ಗಾವಣೆ ವಿಷಯ ತಿಳಿಯುತ್ತಿದ್ದಂತೆ ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿಗಳು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳ ಪ್ರತಿಭಟನೆಗೆ ಪೋಷಕರು ಸಾಥ್ ನೀಡಿದರು.
ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಖೈರುನ್ನೀಸಾ, ಡಿವೈಎಫ್ಐ ಮುಖಂಡರಾದ ಎ ಬಿ ನೌಶಾದ್, ಹನೀಫ್ ಬೆಂಗರೆ,ರಿಜ್ವಾನ್, ತಶ್ರಿಫ್, ಯಾಹ್ಯಾ, ತಂಜೀಲ್, ಎಸ್ಡಿಎಂಸಿ ಸದಸ್ಯರಾದ ನೂರ್ಜಹಾನ್, ಸಾಜಿದಾ, ಮಮ್ತಾಜ್, ಸಚಿನ ಮೊದಲಾದವರು ಪ್ರತಿಭಟನೆಯಲ್ಲಿ ಹಾಜರಿದ್ದರು.