ETV Bharat / state

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೆಸ್ಕಾಂ ಮೀಟರ್ ರೀಡರ್​ಗಳಿಂದ ಪ್ರತಿಭಟನೆ

author img

By

Published : Jul 10, 2020, 9:10 AM IST

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮತ್ತು ವೇತನ ಪಾವತಿಗೆ ಒತ್ತಾಯಿಸಿ ಮೀಟರ್​ ರೀಡರ್​ಗಳು ಬಿ.ಸಿ ರೋಡಿನ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

Protest by mescom meter readers in BC Road
ಮೆಸ್ಕಾಂ ಮೀಟರ್ ರೀಡರ್​ಗಳಿಂದ ಪ್ರತಿಭಟನೆ

ಬಂಟ್ವಾಳ : ಮೀಟರ್ ರೀಡಿಂಗ್​ ಗುತ್ತಿಗೆಯನ್ನು ಅತೀ ಕಡಿಮೆ ದರಕ್ಕೆ ನೀಡಿ ರೀಡರ್​ಗಳನ್ನು ಕಡಿಮೆ ವೇತನಕ್ಕೆ ದುಡಿಸಲು ಮೆಸ್ಕಾಂ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ ಹಾಗೂ ತಡೆ ಹಿಡಿದಿರುವ ವೇತನ ಬಿಡುಗಡೆಗೆ ಆಗ್ರಹಿಸಿ ಮೀಟರ್​ ರೀಡರ್​ಗಳು ಬಿ.ಸಿ ರೋಡಿನ ಮೆಸ್ಕಾಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ದ.ಕ.ಜಿಲ್ಲಾ ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಮಾತನಾಡಿದರು. ನಮ್ಮ ಬೇಡಿಕೆ ಈಡೇರುವವರೆಗೆ ಮೀಟರ್ ರೀಡಿಂಗ್ ಮಷಿನ್​ ಅನ್ನು ಮೆಸ್ಕಾಂಗೆ ನೀಡುವುದಿಲ್ಲ. ಮುಂದೆ ಬೇಡಿಕೆ ಈಡೇರದಿದ್ದರೆ ದೊಡ್ಡ ಮಟ್ಟದ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು. ಈ ವೇಳೆ ಮೆಸ್ಕಾಂ ಇಇಗೆ ಮನವಿ ಸಲ್ಲಿಸಲಾಯಿತು.

ಮೆಸ್ಕಾಂ ಮೀಟರ್ ರೀಡರ್​ಗಳಿಂದ ಪ್ರತಿಭಟನೆ

ಪ್ರತಿಭಟನೆಯಲ್ಲಿ ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕಿನ ಮೀಟರ್​ ರೀಡರ್​ಗಳು, ಪ್ರಮುಖರಾದ ಗೋಪಾಲ ನೇರಳಕಟ್ಟೆ, ಜಯರಾಮ್ ಬಂಟ್ವಾಳ, ಗೋಪಾಲಕೃಷ್ಣ ಬಂಟ್ವಾಳ, ಸದಾಶಿವ ಬಂಟ್ವಾಳ, ಮೋನಪ್ಪ ಬೆಳ್ತಂಗಡಿ, ರಮೇಶ್ ಬೆಳ್ತಂಗಡಿ, ಉದಯಕುಮಾರ್ ವಿಟ್ಲ ಪಾಲ್ಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.