ETV Bharat / state

ಟ್ರೋಲ್​ಗೆ ಹೆದರಲ್ಲ, ಅಶ್ಲೀಲ ಕಮೆಂಟ್ ಮಾಡಿದವರ ವಿರುದ್ಧ ಪೊಲೀಸರಿಗೆ ದೂರು: ಪ್ರತಿಭಾ ಕುಳಾಯಿ

ಹೋರಾಟದ ಬಗ್ಗೆ ಟ್ರೋಲ್​ ಮಾಡುವವರಿಗೆ ನಾನು ಹೆದರುವುದಿಲ್ಲ, ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್​ ಮಾಡಿದವರಿಗೆ ಕಾನೂನಾತ್ಮಕವಾಗಿ ಉತ್ತರಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಹೇಳಿದ್ದಾರೆ.

protest-against-nitk-toll-gate
ಅಶ್ಲೀಲ ಕಮೆಂಟ್ ಮಾಡಿದವರ ವಿರುದ್ಧ ಪೊಲೀಸ್ ದೂರು
author img

By

Published : Oct 21, 2022, 9:59 PM IST

ಮಂಗಳೂರು(ದಕ್ಷಿಣ ಕನ್ನಡ): ಸುರತ್ಕಲ್ ಎನ್​ಐಟಿಕೆ ಟೋಲ್ ಗೇಟ್ ವಿರುದ್ಧ ಹೋರಾಟದ ಫೋಟೋವನ್ನು ಟ್ರೋಲ್ ಮಾಡಲಾಗುತ್ತಿದೆ. ಇದಕ್ಕೆ ಹೆದರಿ ಟೋಲ್ ಗೇಟ್ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಹೇಳಿದ್ದಾರೆ.

ಅಶ್ಲೀಲ ಕಮೆಂಟ್ ಮಾಡಿದವರ ವಿರುದ್ಧ ಪೊಲೀಸ್ ದೂರು

ಮಂಗಳೂರಿನಲ್ಲಿ ಮಾತನಾಡಿದ ಅವರು, ಟೋಲ್ ಗೇಟ್ ವಿರುದ್ಧ ಹೋರಾಟ ಮಾಡಿದ ಫೋಟೋ ಹಾಕಿ ನನ್ನನ್ನು ಕಾಂತಾರ 2, ನಾಗವಲ್ಲಿ ಎಂದು ಟ್ರೋಲ್ ಮಾಡಲಾಗುತ್ತಿದೆ. ದುರ್ಜನರಿಗೆ ನಾನು ಕಾಂತಾರ 3 ಕೂಡ ಆಗುತ್ತೇನೆ, ನಾಗವಲ್ಲಿಯುೂ ಆಗುತ್ತೇನೆ ಎಂದರು.

ಕೆ ಆರ್ ಶೆಟ್ಟಿ ಅಡ್ಯಾರ್ ಪದವು ಎಂಬಾತ ನನ್ನ ಫೋಟೋ ಹಾಕಿ ಇದಕ್ಕೊಂದು ಟೈಟಲ್ ಕೊಡಿ ಪ್ರೆಂಡ್ಸ್ ಎಂದು ಹಾಕಿದ್ದರು. ಇದಕ್ಕೆ ಸ್ಥಳೀಯ ವೆಬ್ ಸೈಟ್​ವೊಂದರ ಶ್ಯಾಮ ಸುದರ್ಶನ ಭಟ್ ಹೊಸಮೂಲೆ ಎಂಬಾತ ಅಸಭ್ಯವಾಗಿ ಕಮೆಂಟ್ ಮಾಡಿದ್ದಾನೆ. ಅದೇ ರೀತಿ ಇನ್ನೂ ಹಲವರು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಇವರೆಲ್ಲರ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ತಿಳಿಸಿದರು.

ಈ ಹಿಂದೆ ನನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದವರಿಗೆ ಅವರ ಮನೆಗೆ ರಾತ್ರಿ 12 ಗಂಟೆಗೆ ಹೋಗಿ ನಾಗವಲ್ಲಿ ತರಹ ಭೇಟಿ ಕೊಟ್ಟು ಅವರಿಂದ ಕ್ಷಮೆ ಯಾಚಿಸಿದ್ದೇನೆ. ಅದರಂತೆ ಇವರಿಗೂ ಕೂಡ ಪಾಠ ಕಲಿಸುತ್ತೇನೆ ಎಂದು ಎಚ್ಚರಿಸಿದರು.

ಇದನ್ನೂ ಓದಿ : ಸುರತ್ಕಲ್ ಟೋಲ್ ಗೇಟ್ ಪ್ರತಿಭಟನೆ: ಹೋರಾಟಗಾರರ ವಿರುದ್ಧ ಎರಡು ಎಫ್ಐಆರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.