ಮಂಗಳೂರು : ನಗರದ ಬೆಂದೂರ್ ವೆಲ್ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ನಗರ ಸಿಸಿಬಿ ಪೊಲೀಸರು, ಇಬ್ಬರು ಮಹಿಳೆಯರು ಸೇರಿದಂತೆ ಮೂವರು ದಲ್ಲಾಳಿಗಳನ್ನು ಬಂಧಿಸಿದ್ದಾರೆ. ಇದೇ ವೇಳೆ ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ.
ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಕೆ ಪಿ ಹಮೀದ್ (54), ನಗರದ ಆಕಾಶಭವನದ ಅನುಪಮ ಶೆಟ್ಟಿ (46) ಮತ್ತು ಎಕ್ಕೂರಿನ ನಿಶ್ಮಿತ (23) ಬಂಧಿತರು. ಇವರು ನಗರದ ಬೆಂದೂರ್ ವೆಲ್ನ ಅಪಾರ್ಟ್ ಮೆಂಟ್ನ ಫ್ಲ್ಯಾಟ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎನ್ನಲಾಗ್ತಿದೆ.
ಇದನ್ನೂ ಓದಿ : ಸ್ಪಾ ಮಾಲೀಕರಿಗೆ ಬೆದರಿಕೆ, ಹಣ ವಸೂಲಿ ಆರೋಪ.. ಪತ್ರಕರ್ತ ಸೇರಿ ಐವರ ಬಂಧನ
ಈ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ತಂಡ ದಾಳಿ ನಡೆಸಿ ದಲ್ಲಾಳಿಗಳನ್ನು ಬಂಧಿಸಿದ್ದಾರೆ. ಇದೇ ವೇಳೆ ಪ್ಲಾಟ್ ನಲ್ಲಿದ್ದ ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ. ಬಂಧಿತರಿಂದ 5 ಮೊಬೈಲ್ ಫೋನ್, 50 ಸಾವಿರ ನಗದು ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ.