ETV Bharat / state

8ನೇ ಪರಿಚ್ಛೇದಕ್ಕೆ ತುಳು ಸೇರಿಸುವ ಪ್ರಸ್ತಾವನೆ ಶೀಘ್ರದಲ್ಲೇ ಒಪ್ಪಿತವಾಗಲಿದೆ: ಅರವಿಂದ ಲಿಂಬಾವಳಿ - Tulu language to Article 8

ತುಳುವನ್ನು 8ನೇ ಪರಿಚ್ಚೇದಕ್ಕೆ ಸೇರಿಸುವಂತೆ ಒತ್ತಾಯಿಸಿ ಕರಾವಳಿಯಲ್ಲಿ ಕೇಳಿಬರುತ್ತಿದ್ದ ಕೂಗು ಜೋರಾಗಿದೆ. ಈ ನಡುವೆ ಸರ್ಕಾರವೂ ಸಹ ಕೇಂದ್ರಕ್ಕೆ ಪ್ರಸ್ತಾವನೆ ಮುಂದಿಟ್ಟಿದೆ. ಆದರೆ ಪ್ರಸ್ತಾವನೆಯನ್ನು ಸರಿಪಡಿಸಿ ಕಳುಹಿಸುವಂತೆ ಕೇಂದ್ರದ ಸೂಚನೆಯಂತೆ ಮತ್ತೆ ಪ್ರಸ್ತಾವನೆ ಸಲ್ಲಿಸಲಾಗಿದೆ.

Aravinda Limbavali
ಅರವಿಂದ ಲಿಂಬಾವಳಿ
author img

By

Published : Jul 10, 2021, 6:40 PM IST

ಮಂಗಳೂರು: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಇತ್ತೀಚಿಗಷ್ಟೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ್ದರು. ಅತೀ ಶೀಘ್ರದಲ್ಲೇ ಅದು ಒಪ್ಪಿಗೆಯಾಗುವ ವಿಶ್ವಾಸವಿದೆ ಎಂದು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ನಗರದ ಪಿಲಿಕುಳ ನಿಸರ್ಗಧಾಮಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ಈ ಹಿಂದೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದ ಪ್ರಸ್ತಾವನೆಯನ್ನು ಸರಿಯಾದ ಪ್ರಕ್ರಿಯಲ್ಲಿ ಕಳುಹಿಸುವಂತೆ ತಿಳಿಸಿತ್ತು. ಅದರ ಪ್ರಕ್ರಿಯೆಗಳನ್ನು ಸರಿಪಡಿಸಿ ಮತ್ತೊಮ್ಮೆ ಕಳುಹಿಸಿಕೊಡಲಾಗಿದೆ. ಶೀಘ್ರದಲ್ಲೇ ಒಪ್ಪಿಯಾಗುವ ಭರವಸೆಯಿದೆ ಎಂದರು.

ಪಿಲಿಕುಳ ನಿಸರ್ಗಧಾಮದ ಪ್ರಾಣಿಗಳ ಪಾಲನೆ, ಪೋಷಣೆಯ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಇಲ್ಲಿ ಅರಣ್ಯವನ್ನು ಸೃಷ್ಟಿಸಿ, ಪ್ರಾಣಿಗಳನ್ನು ಸ್ವಚ್ಛಂದವಾಗಿ ಬಿಡಲಾಗಿದೆ. ಕೇಂದ್ರದ ನೂತನ ಅರಣ್ಯ ಸಚಿವ ಉಪೇಂದ್ರ ಯಾದವ್ ಅವರಲ್ಲಿ ಇಲ್ಲಿನ ಸುಧಾರಣೆಗಳ ಬಗ್ಗೆ ತಿಳಿಸುವೆ. ಅದೇ ರೀತಿ ಇಲ್ಲಿಗೆ ಅವಶ್ಯಕತೆ ಇರುವ ಎಲ್ಲಾ ಸೌಲಭ್ಯಗಳನ್ನು ಇಲಾಖೆಯಿಂದ ಒದಗಿಸಲಾಗುತ್ತದೆ ಎಂದಿದ್ದಾರೆ.

8ನೇ ಪರಿಚ್ಛೇದಕ್ಕೆ ತುಳು ಸೇರಿಸುವ ಪ್ರಸ್ತಾವನೆ ಶೀಘ್ರದಲ್ಲೇ ಒಪ್ಪಿತವಾಗಲಿದೆ

ಅನೇಕ ಬುಡಕಟ್ಟು ಜನಾಂಗದವರು ಪಟ್ಟಣದ ಕಡೆ ಬರುವ ಒಲವು ತೋರುತ್ತಿದ್ದಾರೆ. ಅವರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಸಿದ್ಧವಾಗಿದೆ. ಅವರಿಗೆ ಮನವರಿಕೆ ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ. ಬಹಳ ವರ್ಷಗಳಿಂದ ಅಲ್ಲಿಯೇ ಇದ್ದು, ಬರಲು ಒಪ್ಪದವರಿಗೂ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲು ಸರ್ಕಾರ ಸಿದ್ಧವಿದೆ ಎಂದಿದ್ದಾರೆ.

ಇದನ್ನೂ ಓದಿ: ಪಿಹೆಚ್‌ಡಿ ವಿದ್ಯಾರ್ಥಿನಿಯಿಂದ ಲಂಚ ಸ್ವೀಕಾರ: ಮಂಗಳೂರು ವಿವಿ ಸಹಾಯಕ ಪ್ರೊಫೆಸರ್​ಗೆ 5 ವರ್ಷ ಶಿಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.