ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ಸೇವೆ ಮಾಡುವ ಅರ್ಚಕರೊಬ್ಬರು ಹೊರಗಿನ ಊಟ ಸೇವನೆ ಮಾಡಿದ ವಿಡಿಯೋ ವೈರಲ್ ಆಗಿದ್ದು, ಅರ್ಚಕರ ನಡೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ಮತ್ತು ಸಂಪುಟ ನರಸಿಂಹ ಮಠದ ನಡುವೆ ಕಳೆದ ಹಲವು ದಿನಗಳಿಂದ ವಿವಾದವಿದ್ದು ಸಂಪುಟ ನರಸಿಂಹ ಮಠದಿಂದ ಅರ್ಚಕರೊಬ್ಬರು ದೇವಸ್ಥಾನದ ಅರ್ಚಕರಿಗೆ ಊಟ ನೀಡಿದ್ದಾರೆ. ಈ ವಿಡಿಯೋ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದೇವಸ್ಥಾನದ ಅರ್ಚಕರು ದೇವಸ್ಥಾನದ ಪಾವಿತ್ರ್ಯತೆ ಕಾಪಾಡಬೇಕಿದ್ದು, ದೇವಾಲಯದಲ್ಲಿ ಹೊರಗಿನ ಆಹಾರ ಸೇವಿಸುವಂತಿಲ್ಲ. ಆದರೂ ಅರ್ಚಕರು ಹೊರಗಿನ ಆಹಾರ ಸೇವಿಸಿದ್ದು ಈ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ದೇವಾಲಯದ ಆಡಳಿತ ಮಂಡಳಿ ಸದಸ್ಯ ಮಹೇಶ್ ಕುಮಾರ್ ಕರಿಕ್ಕಳ, ದೇವಾಲಯಕ್ಕೆ ಹೊರಗಿನಿಂದ ಆಹಾರ ತರಬಾರದೆಂದು ನಂಬಿಕೆ ಇದೆ. ಕುಕ್ಕೆ ಮಠಕ್ಕೆ ಮತ್ತು ನರಸಿಂಹ ಮಠಕ್ಕೆ ಸಾಕಷ್ಟು ಗೊಂದಲ ಇವೆ. ಈ ಮೂಲಕ ಮಠದವರು ದೇವಸ್ಥಾನ ಮಲೀನ ಮಾಡಲು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು.