ಮಂಗಳೂರು: ಕೊರೊನಾ ವೈರಸ್ ಹಾವಳಿಯಿಂದ ಕಂಗೆಟ್ಟಿರುವ ಕೋಸ್ಟಲ್ ವುಡ್ ಹೊಸ ಪ್ರಯೋಗಕ್ಕೆ ತಯಾರಾಗಿದೆ.
ಪೆಪ್ಪೆರೆರೆ ಪೆರೆರೆರೆ ಎಂಬ ತುಳು ಸಿನಿಮಾ ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದ್ದು, ಇದು ತುಳು ಚಿತ್ರರಂಗದಲ್ಲಿ ಮೊದಲ ಪ್ರಯೋಗವಾಗಿದೆ. ವಿಜಯ್ ಶೋಭರಾಜ್ ಪಾವೂರು ನಿರ್ದೇಶನದ, ನಿಶಾನ್ ಕೃಷ್ಣ ಭಂಡಾರಿ ನಿರ್ಮಾಪಕರಾಗಿರುವ ಈ ಸಿನಿಮಾವನ್ನು ಕೊರೊನಾದ ಸಂಕಷ್ಟದ ಸಮಯದಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವುದಕ್ಕಿಂತ ಒಟಿಟಿಯಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ.
ಈ ನಿಟ್ಟಿನಲ್ಲಿ ಒಟಿಟಿಯಲ್ಲಿ ಮಾತುಕತೆ ನಡೆಸಲಾಗುತ್ತಿದೆ. ಈ ಸಿನಿಮಾ ಬಿಡುಗಡೆಗೆ ಮುಂಚೆಯೇ ಟಿಕೆಟ್ ಬುಕ್ಕಿಂಗ್ ನಡೆಯುತ್ತಿದ್ದು ಚಿತ್ರತಂಡ ಟಿಕೆಟ್ನ್ನು ಬಿಡುಗಡೆಗಿಂತ ಮೊದಲೇ ಮಾರಾಟ ಮಾಡಿದೆ. ಟಿಕೆಟ್ ಖರೀದಿಸಲು www.nishanvarunmovies.com ಎಂಬ ಜಾಲತಾಣವನ್ನು ಆರಂಭಿಸಿದೆ.
ಡಿಸೆಂಬರ್ 18 ಕ್ಕೆ ಒಟಿಟಿಯಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು ಟಿಕೆಟ್ ಪಡೆದುಕೊಂಡವರು ಡಿಸೆಂಬರ್ 18, 19,20 ರಂದು ಒಟಿಟಿಯಲ್ಲಿ ಸಿನಿಮಾವನ್ನು ಒಂದು ಬಾರಿ ವೀಕ್ಷಿಸಬಹುದಾಗಿದೆ. ಈ ಮೂಲಕ ಕೋಸ್ಟಲ್ ವುಡ್ನಲ್ಲಿ ಈ ಹೊಸ ಪ್ರಯೋಗ ಮಾಡಲಾಗಿದೆ.