ETV Bharat / state

ಡ್ರಗ್ಸ್ ಸೇವಿಸಿದ ಯುವಕರ ಹಿಡಿದು ಪೊಲೀಸರಿಗೊಪ್ಪಿಸಿದ ಬಜರಂಗದಳ: ಅಭಿನಂದಿಸಿದ ಪ್ರತಿಭಾ ಕುಳಾಯಿ

ಮಂಗಳೂರಿನ ಚಿಲಿಂಬಿಗುಡ್ಡೆಯಲ್ಲಿ ಡ್ರಗ್ಸ್ ಸೇವಿಸಿ ಓಡಾಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರಿಗೊಪ್ಪಿಸಿದ ಪ್ರಕರಣ ಸಂಬಂಧ ಬಜರಂಗದಳ ಸದಸ್ಯರನ್ನು ಪ್ರತಿಭಾ ಕುಳಾಯಿ ಅಭಿನಂದಿಸಿದ್ದಾರೆ. ಮಂಗಳೂರಲ್ಲಿ ಡ್ರಗ್ಸ್ ಪ್ರಕರಣ ಹೆಚ್ಚಾಗುತ್ತಿದ್ದು, ಇದರ ವಿರುದ್ಧ ಹೋರಾಡಬೇಕಿದೆ ಎಂದಿದ್ದಾರೆ.

Pratibha Kulai
ಪ್ರತಿಭಾ ಕುಳಾಯಿ
author img

By

Published : Oct 6, 2021, 12:08 PM IST

ಮಂಗಳೂರು: ಗುರುಪುರದ ಚಿಲಿಂಬಿಗುಡ್ಡೆಯಲ್ಲಿ ಡ್ರಗ್ಸ್ ಸೇವಿಸಿ ಯುವತಿಯರೊಂದಿಗಿದ್ದ ಜೋಡಿಯನ್ನು ಪೊಲೀಸರಿಗೊಪ್ಪಿಸಿದ ಬಜರಂಗದಳ ಸದಸ್ಯರಿಗೆ ಕಾಂಗ್ರೆಸ್ ವಕ್ತಾರೆ ಪ್ರತಿಭಾ ಕುಳಾಯಿ ಅಭಿನಂದನೆ ಸಲ್ಲಿಸಿದ್ದಾರೆ.

ಡ್ರಗ್ಸ್ ಸೇವಿಸಿದ್ದ ಯುವಕರ ಹಿಡಿದು ಪೊಲೀಸರಿಗೊಪ್ಪಿಸಿದ ಬಜರಂಗದಳ ಸದಸ್ಯರ ಅಭಿನಂದಿಸಿದ ಪ್ರತಿಭಾ ಕುಳಾಯಿ

ಈ ಕುರಿತು ವಿಡಿಯೋ ಮೂಲಕ ಅಭಿನಂದಿಸಿದ್ದು, ಬಜರಂಗದಳ ಕಾರ್ಯಕರ್ತರು ಈ ಜೋಡಿಯನ್ನ ಪೊಲೀಸರಿಗೊಪ್ಪಿಸಿದ ಬಳಿಕ ಇಬ್ಬರು ಯುವಕರು ಡ್ರಗ್ಸ್ ಸೇವಿಸಿರುವುದು ತಿಳಿದುಬಂದಿತ್ತು. ಇವರ ಜೊತೆ ಇದ್ದ ಇಬ್ಬರು ಯುವತಿಯರಲ್ಲಿ ಒಬ್ಬಳು ಅಪ್ರಾಪ್ತೆಯಾಗಿದ್ದಳು. ಈ ಸಂದರ್ಭದಲ್ಲಿ ಬಜರಂಗದಳವನ್ನು ಅಭಿನಂದಿಸುತ್ತೇನೆ. ಕಾನೂನು ಕೈಗೆ ತೆಗೆದುಕೊಳ್ಳದೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಡ್ರಗ್ಸ್ ಮಾಫಿಯ ಎಷ್ಟೋ ಯುವಕರ ಜೀವನ ಹಾಳು ಮಾಡುತ್ತಿದೆ. ಇದರ ವಿರುದ್ಧ ಹೋರಾಡಬೇಕಿದೆ ಎಂದಿದ್ದಾರೆ.

ಆ ಹುಡುಗಿಯ ತಾಯಿಯ ನೋವು ನೋಡಿದ್ದೇನೆ. ನನ್ನ ಕಡೆಯಿಂದ ಅವರಿಗೆ ಬೇಕಾದ ಸಪೋರ್ಟ್ ಕೊಡುತ್ತೇನೆ. ಈ ಹುಡುಗಿಯರಿಗೆ ಕೌನ್ಸಿಲಿಂಗ್ ಅಗತ್ಯವಿದೆ. ಖಂಡಿತವಾಗಿ ಅದಕ್ಕೆ ಬೇಕಾದ ವ್ಯವಸ್ಥೆ ಮಾಡುತ್ತೇನೆ. ಹುಡುಗಿಯರು ಆದಷ್ಟು ಜಾಗೃತರಾಗಿರಿ ಎಂದಿದ್ದಾರೆ.

ಇದನ್ನೂ ಓದಿ: ಒಂದು ಅವಕಾಶ ಕೊಡಿ, ಸುಳ್ಯದ ಇತಿಹಾಸವನ್ನೇ ಬದಲಾಯಿಸುತ್ತೇನೆ: ಡಿ.ಕೆ. ಶಿವಕುಮಾರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.