ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆಸುತ್ತಿರುವ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಒಂದೇ ದಿನ 27 ದೂರು ದಾಖಲಾಗಿದೆ. ಅದರಲ್ಲಿ ಸಲ್ಫರ್, ಯೂರಿಯಾ ಸಾಗಾಟದ ಲಾರಿಗಳಿಗೆ ಟಾರ್ಪಲ್ ಹಾಕದೆ ಸಾಗಿಸಲಾಗುತ್ತಿದೆ ಎಂಬ ದೂರು ಕೇಳಿ ಬಂದಿದೆ.
ಕೆಲವೊಂದು ಏರಿಯಾಗಳಿಗೆ ಸರಿಯಾಗಿ ಬಸ್ ಸೌಲಭ್ಯಗಳಿಲ್ಲ. ಫುಟ್ಪಾತ್ಗಳಲ್ಲೇ ವಾಹನಗಳನ್ನುಪಾರ್ಕ್ ಮಾಡಲಾಗುತ್ತದೆ ಎಂಬ ದೂರುಗಳು ಬಂದಿವೆ. ಇವುಗಳ ಮೇಲೆ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.
ಅಲ್ಲದೆ ಮೀನು ಸಾಗಾಟದ ಲಾರಿಗಳಿಂದ ರಸ್ತೆಗೆ ಹರಿಯುತ್ತಿರುವ ನೀರು ಹಾಗೂ ಲಾರಿಗಳಿಂದ ಬರುವ ದುರ್ನಾತದ ವಿರುದ್ಧವಾಗಿ ಈಗಾಗಲೇ ಮೇ 6 ರಂದು ನೋಟಿಸ್ ಜಾರಿ ಮಾಡಲಾಗಿದ್ದು, ಈಗಾಗಲೇ 8 ಲಾರಿಗಳ ಮೇಲೆ ಕೇಸ್ ಹಾಕಲಾಗಿದೆ. ಇಂದು ಐದು ಪ್ರಕರಣ ದಾಖಲಾಗಿದೆ ಎಂದು ಹೇಳಿದರು.