ETV Bharat / state

ಕತ್ತಲಾದ ಬಳಿಕ ಕಷ್ಟವಾದ್ರೆ ನಾಳೆ ಶೋಧಕಾರ್ಯ: ಸಂದೀಪ್ ಪಾಟೀಲ್ - ನಾಳೆಗೆ ಮುಂದುವರಿಕೆ

ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್‌ಗಾಗಿ ತೀವ್ರವಾಗಿ ಶೋಧ ನಡೆಯುತ್ತಿದ್ದು, ಕತ್ತಲಾದ ಬಳಿಕ ಕಾರ್ಯಾಚರಣೆ ಕಷ್ಟವಾದ್ರೆ ನಾಳೆ ಮುಂದುವರಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.

ಸಂದೀಪ್ ಪಾಟೀಲ್
author img

By

Published : Jul 30, 2019, 9:24 PM IST

ಮಂಗಳೂರು: ಉಳ್ಳಾಲ ಸೇತುವೆ ಬಳಿಯಿಂದ ನಾಪತ್ತೆಯಾದ ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಅವರ ಶೋಧ ಕಾರ್ಯ ತೀವ್ರವಾಗಿ ನಡೆಯುತ್ತಿದೆ. ಈ ಬಗ್ಗೆ ಪರಿಣಿತರ ಜೊತೆ ಮಾತನಾಡಿದ್ದು, ಅವರು ಕತ್ತಲಾದ ಬಳಿಕ ಶೋಧ ಕಾರ್ಯ ಕಷ್ಟ ಎಂದು ಹೇಳಿದರೆ ನಾಳೆ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಮುಂದುವರೆಸುತ್ತೇವೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.

ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್

ಪ್ರಕರಣದ ಹಿಂದಿರುವ ಕಾರಣ ತಿಳಿದಿಲ್ಲ. ಈ ಬಗ್ಗೆ ತನಿಖೆ ನಡೆಸಿದ ಬಳಿಕವೇ ಸ್ಪಷ್ಟತೆ ಸಿಗಲು ಸಾಧ್ಯ ಎಂದು ಪೊಲೀಸ್ ಆಯುಕ್ತರು ಹೇಳಿದ್ರು.

ಸೋಮವಾರ ರಾತ್ರಿ ನೇತ್ರಾವತಿ ಸೇತುವೆಯ ಮೇಲಿಂದ ಸಿದ್ದಾರ್ಥ್ ನಾಪತ್ತೆಯಾಗಿದ್ದಾರೆಂದು ಮಾಹಿತಿ ಬಂದಿತ್ತು. ಕೂಡಲೇ ಮಂಗಳೂರು ನಗರ ಉಪ ಪೊಲೀಸ್ ಆಯುಕ್ತ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಕ್ಷಣ ಆಗಮಿಸಿ ಸಿದ್ದಾರ್ಥ್ ಕಾರು ಚಾಲಕನೊಂದಿಗೆ ಮಾತನಾಡಿ, ಮಾಹಿತಿ ಕಲೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆ 6.30 ಸುಮಾರಿಗೆ ನೇತ್ರಾವತಿ ಸೇತುವೆಯಲ್ಲಿ ನಡೆದುಕೊಂಡು ಹೋಗುವಾಗ ನಾಪತ್ತೆಯಾಗಿದ್ದಾರೆಂದು ದೂರು ದಾಖಲಿಸಿಕೊಳ್ಳಲಾಯಿತು ಎಂದರು.

ಈಗಾಗಲೇ ನಾವು ನಿನ್ನೆ ರಾತ್ರಿಯಿಂದಲೇ ತನಿಖೆ ಆರಂಭಿಸಿದ್ದೇವೆ. ಈ ಸೇತುವೆಯಲ್ಲಿ ಸಿದ್ದಾರ್ಥ್ ಅವರು ಕೊನೆಯ ಬಾರಿ ಕಾಣಿಸಿಕೊಂಡಿರುವುದರಿಂದ ನದಿಯಲ್ಲಿ ನಿನ್ನೆಯಿಂದಲೇ ಶೋಧ ಕಾರ್ಯ ನಡೆಯುತ್ತಿದೆ. ಮಂಗಳೂರು ಕಡೆ ಮೂರು ಕಿ.ಮೀ. ನಡೆದುಕೊಂಡು ಹೋಗಿದ್ದಾರೆಂದು ಹೇಳಲಾಗಿತ್ತು‌‌. ಆದ್ದರಿಂದ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಸಿಸಿಟಿವಿ ಫೂಟೇಜ್ ಪರಿಶೀಲನೆ ನಡೆಸಿದ್ದೇವೆ. ಒಂದು ತಂಡ ಬೆಂಗಳೂರಿಗೆ ತೆರಳಿದ್ದು, ಸಿದ್ದಾರ್ಥ್ ಅವರ ಕುಟುಂಬಸ್ಥರನ್ನು ಹಾಗೂ ಕಚೇರಿ ಸಿಬ್ಬಂದಿಯನ್ನು ವಿಚಾರಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗುವುದು. ಇನ್ನೊಂದು ತಂಡ ತಾಂತ್ರಿಕ ತನಿಖೆ ನಡೆಸುತ್ತಿದೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ರು.

Intro:ಮಂಗಳೂರು: ನಗರದ ಉಳ್ಳಾಲ ಸೇತುವೆ ಬಳಿಯಿಂದ ನಾಪತ್ತೆಯಾದ ಕೆಫೆ ಕಾಫಿ ಡೇ ಮಾಲಕ ಸಿದ್ದಾರ್ಥ್ ಅವರ ಶೋಧ ಕಾರ್ಯ ತೀವ್ರವಾಗಿ ನಡೆಯುತ್ತಿದೆ. ಪರಿಣತರಲ್ಲಿ ಈ ಬಗ್ಗೆ ಮಾತನಾಡಿದ್ದು, ಅವರು ಕತ್ತಲಾದ ಬಳಿಕ ಶೋಧ ಕಾರ್ಯ ಕಷ್ಟ ಎಂದು ಹೇಳಿದರೆ ಇಂದು ನಿಲ್ಲಿಸಿ ನಾಳೆ ಬೆಳಿಗ್ಗೆ ಮತ್ತೆ ಪ್ರಾರಂಭಿಸುತ್ತೇವೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದರು.

ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂದು ಇನ್ನೂ ತಿಳಿದು ಬಂದಿಲ್ಲ. ಅದರ ಬಗ್ಗೆ ತನಿಖೆ ನಡೆಸಿದ ಬಳಿಕವೇ ನಿಖರ ಕಾರಣ ತಿಳಿದು ಬರಬಹುದು ಎಂದು ಅವರು ಹೇಳಿದರು.

Body:ನಿನ್ನೆ ರಾತ್ರಿ ನಮಗೆ ನೇತ್ರಾವತಿ ಸೇತುವೆಯಲ್ಲಿಂದ ಸಿದ್ದಾರ್ಥ್ ನಾಪತ್ತೆಯಾಗಿದ್ದಾರೆಂದು ನಮಗೆ ಮಾಹಿತಿ ಬಂದಿತ್ತು. ಕೂಡಲೇ ಮಂಗಳೂರು ನಗರ ಉಪ ಪೊಲೀಸ್ ಆಯುಕ್ತ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಕ್ಷಣ ಆಗಮಿಸಿ ಸಿದ್ದಾರ್ಥ್ ಅವರ ಕಾರು ಚಾಲಕನೊಂದಿಗೆ ಮಾತನಾಡಿ, ಮಾಹಿತಿ ಕಲೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆ 6.30 ಸುಮಾರಿಗೆ ನೇತ್ರಾವತಿ ಸೇತುವೆಯಲ್ಲಿ ನಡೆದುಕೊಂಡು ಹೋಗುವಾಗ ನಾಪತ್ತೆಯಾಗಿದ್ದಾರೆಂದು ದೂರು ದಾಖಲಿಸಿಕೊಳ್ಳಲಾಯಿತು ಎಂದು ಅವರು ಹೇಳಿದರು.

ಈಗಾಗಲೇ ನಾವು ನಿನ್ನೆ ರಾತ್ರಿಯಿಂದಲೇ ತನಿಖೆಯನ್ನು ಆರಂಭಿಸಿದ್ದೇವೆ. ಈ ಸೇತುವೆಯಲ್ಲಿ ಸಿದ್ದಾರ್ಥ್ ಅವರು ಕೊನೆಯ ಬಾರಿ ಕಾಣಿಸಿಕೊಂಡಿರುವುದರಿಂದ ನದಿಯಲ್ಲಿ ನಿನ್ನೆಯಿಂದಲೇ ಶೋಧ ಕಾರ್ಯ ನಡೆಯುತ್ತಿದೆ. ಮಂಗಳೂರು ಕಡೆ ಮೂರು ಕಿ.ಮೀ. ನಡೆದುಕೊಂಡು ಹೋಗಿದ್ದಾರೆಂದು ಹೇಳಲಾಗಿತ್ತು‌‌. ಆದ್ದರಿಂದ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಸಿಸಿಟಿವಿ ಫೂಟೇಜ್ ಅನ್ನು ಪರಿಶೀಲನೆ ನಡೆಸಿದ್ದೇವೆ. ಒಂದು ತಂಡ ಬೆಂಗಳೂರಿಗೆ ತೆರಳಿದ್ದು, ಸಿದ್ದಾರ್ಥ್ ಅವರ ಕುಟುಂಬಸ್ಥರನ್ನು ಹಾಗೂ ಕಚೇರಿ ಸಿಬ್ಬಂದಿಯನ್ನು ವಿಚಾರಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗುವುದು. ಇನ್ನೊಂದು ತಂಡ ತಾಂತ್ರಿಕ ತನಿಖೆ ಯನ್ನು ನಡೆಸುತ್ತಿದೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.

Reporter_Vishwanath Panjimogaru

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.