ಕೊಣಾಜೆ(ಮಂಗಳೂರು): ಇಲ್ಲಿನ ಮುಡಿಪು ಸಮೀಪದ ಹೋಟೆಲ್ವೊಂದರಲ್ಲಿ ದನದ ಮಾಂಸದ ಬಿರಿಯಾನಿ ಲಭ್ಯವಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರ ಜೊತೆ ಹಿಂದೂ ಜಾಗರಣ ವೇದಿಕೆ (ಹಿಂಜಾವೇ) ಕಾರ್ಯಕರ್ತರು ದಾಳಿ ನಡೆಸಿದರು. ದಾಳಿಯ ಸಂದರ್ಭದಲ್ಲಿ ದನದ ಮಾಂಸದ ಬಿರಿಯಾನಿ ಮತ್ತು ಅಡುಗೆ ಮಾಡಲು ತಯಾರಿಸಿಟ್ಟಿದ್ದ ಮಾಂಸ ಪತ್ತೆಯಾಗಿದೆ. ಹೋಟೆಲ್ ಮಾಲೀಕ ಹುಸೇನ್ ಎಂಬಾತನನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಕುರಿ ಮಾಂಸದ ಜತೆ ದನದ ಮಾಂಸ ಬೆರೆಸಿ ಮಾರಾಟ ಆರೋಪ: ನಾಲ್ವರ ಬಂಧನ