ಮಂಗಳೂರು: ಕೃಷ್ಣಮೃಗ ಜಾತಿಯ ವನ್ಯಪ್ರಾಣಿ ಚರ್ಮ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ನಗರದ ತಣ್ಣೀರುಬಾವಿ ಕ್ರಾಸ್ ಬಳಿಯ ಕುದುರೆಮುಖ ಬಸ್ಸ್ಟ್ಯಾಂಡ್ ಬಳಿ ವಶಪಡಿಸಿಕೊಂಡಿದ್ದಾರೆ.
ಗದಗ ಜಿಲ್ಲೆಯ ಕೋಟುಮಚ್ಚಿಗಿ ಗ್ರಾಮದ ಪ್ರದೀಪ್ ಅಲಿಯಾಸ್ ಮಲ್ಲಿಕಾರ್ಜುನ ಮತ್ತು ಹಿರೆಕೊಪ್ಪ ಗ್ರಾಮದ ಅನಿಲ್ ನರಸಾಪುರ ಅಲಿಯಾಸ್ ಶಿವಪ್ಪ ಬಂಧಿತ ಆರೋಪಿಗಳು.
ಇವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಗಳಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.